ಅಧ್ಯಕ್ಷರಾಗಿ ಇಬ್ರಾಹಿಂ ನಡುಪದವು ಆಯ್ಕೆ

Ull_Ibrahim
Published on

ಉಳ್ಳಾಲ: ದೇರಳಕಟ್ಟೆ ಮೇಲ್ತೆನೆ (ಬ್ಯಾರಿ ಎಲ್ತ್‌ಕಾರ್-ಕಲಾವಿದರ ಕೂಟ) ವಾರ್ಷಿಕ ಸಭೆ ಶನಿವಾರ ನಾಟೆಕಲ್-ವಿಜಯನಗರದಲ್ಲಿ ನಡೆಯಿತು. 2025ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಗೌರವಾಧ್ಯಕ್ಷರಾಗಿ ಆಲಿಕುಂಞಿ ಪಾರೆ, ಅಧ್ಯಕ್ಷರಾಗಿ ವಿ.ಇಬ್ರಾಹಿಂ ನಡುಪದವು, ಪ್ರಧಾನ ಕಾರ್ಯದರ್ಶಿಯಾಗಿ ಹಂಝ ಮಲಾರ್, ಕೋಶಾಧಿಕಾರಿಯಾಗಿ ಮನ್ಸೂರ್ ಅಹ್ಮದ್ ಸಾಮಣಿಗೆ, ಉಪಾಧ್ಯಕ್ಷರಾಗಿ ಅಶ್ರಫ್ ದೇರಳಕಟ್ಟೆ ಡಿ.ಎ., ಜತೆ ಕಾರ್ಯದರ್ಶಿಯಾಗಿ ಸಿದ್ದೀಕ್ ಎ.ರಾಜ್ ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಇಸ್ಮಾಯಿಲ್ ಮಾಸ್ಟರ್, ಮುಹಮ್ಮದ್ ಬಾಷಾ ನಾಟೆಕಲ್, ಅಬ್ದುಲ್ ಬಶೀರ್ ಕಲ್ಕಟ್ಟ, ಬಶೀರ್ ಅಹ್ಮದ್ ಕಿನ್ಯ, ಅಶೀರುದ್ದೀನ್ ಸಾರ್ತಬೈಲ್, ರಿಯಾಜ್ ಮಂಗಳೂರು, ಆಸೀಫ್ ಬಬ್ಬುಕಟ್ಟೆ, ರಫೀಕ್ ಕಲ್ಕಟ್ಟ ಅವರನ್ನು ಆಯ್ಕೆ ಮಾಡಲಾಯಿತು. ಆಲಿಕುಂಞಿ ಪಾರೆ ಅಧ್ಯಕ್ಷತೆ ವಹಿಸಿದ್ದರು.

ಅಶೀರುದ್ದೀನ್ ಸಾರ್ತಬೈಲ್ ಸ್ವಾಗತಿಸಿದರು. ಹಂಝ ಮಲಾರ್ ವರದಿ ವಾಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net