

Melania Trump: ಅಮೇರಿಕದ ಅಧ್ಯಕ್ಷ ಡುನಾಲ್ಡ್ ಟ್ರಂಪ್ ಅವರ ಪತ್ನಿ ಮೆಲಾನಿಯಾ ಟ್ರಂಪ್ ಉಕ್ರೇನ್ ಹಾಗೂ ರಷ್ಯಾದಲ್ಲಿರುವ ಮಕ್ಕಳ ದುಸ್ಥಿತಿ ಬಗ್ಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಪತ್ರ ಬರೆದಿದ್ದಾರೆ ಎಂದು ಶ್ವೇತ ಭವನ ತಿಳಿಸಿದೆ.
ಅಲಸ್ಕಾದಲ್ಲಿ ನಡೆದ ಶೃಂಗ ಸಭೆಯಲ್ಲಿ ಟ್ರಂಪ್ ಈ ಪತ್ರವನ್ನು ಪುಟಿನ್ ಅವರಿಗೆ ಹಸ್ತಾಂತರಿಸಿದ್ದಾರೆ ಎಂದು ಅಧಿಕಾರಿಗಳು ರಾಯಿಟರ್ಸ್ಗೆ ತಿಳಿಸಿದ್ದಾರೆ. ಈ ಸಭೆಯಲ್ಲಿ ಸ್ಲೊವೇನಿಯನ್ ಮೂಲದ ಮೆಲಾನಿಯಾ ಟ್ರಂಪ್ ಭಾಗವಹಿಸಿದ್ದಿಲ್ಲ.
ಈ ಪತ್ರದ ಬಗ್ಗೆ ಅಧಿಕಾರಿಗಳು ಬಹಿರಂಗಪಡಿಸಲಿಲ್ಲ, ಆದರೆ ಈ ಪತ್ರವು ಯಕ್ರೇನ್ನಲ್ಲಿನ ಯುದ್ದದ ಪರಿಣಾಮವಾಗಿ ಮಕ್ಕಳ ಅಪಹರಣವಾಗುತ್ತಿದ್ದಾರೆ ಎಂದು ಉಲ್ಲೇಖಿಸಿದ್ದು, ಈ ಪತ್ರದ ಬಗ್ಗೆ ಇಲ್ಲಿಯವರೆಗೂ ಯಾವುದೇ ವರದಿಗಳು ಬಂದಿರುವುದಿಲ್ಲ. ಇನ್ನು ರಷ್ಯಾದ ಪಡೆಗಳು ಉಕ್ರೇನ್ನ ಮಕ್ಕಳನ್ನು ಅಪಹರಿಸುತ್ತಿರುವುದು ಉಕ್ರೇನ್ಗೆ ನುಂಗಲಾರದ ತುತ್ತಾಗಿದೆ.
ಹತ್ತಾರು ಸಾವಿರ ಮಕ್ಕಳನ್ನು ಕುಟುಂಬಗಳು ಹಾಗೂ ಪೋಷಕರ ಒಪ್ಪಿಗೆಯಿಲ್ಲದೆ, ರಷ್ಯಾ ಹಾಗೂ ರಷ್ಯಾ ಆಕ್ರಮಿತ ಪ್ರದೇಶಗಳಿಗೆ ಹಸ್ತಾಂತರಿಸುವುದು ಯುಎನ್ ಒಪ್ಪಂದದ ಅಡಿಯಲ್ಲಿ ನರಮೇಧವನ್ನು ರೂಪಿಸುತ್ತದೆ ಎಂದು ಉಕ್ರೇನ್ ರಷ್ಯಾ ವಿರುದ್ಧ ಆರೋಪ ಮಾಡಿದೆ.
ಈ ಹಿಂದೆ ಯುದ್ಧಭೂಮಿಯಲ್ಲಿ ದುರ್ಬಲ ಮಕ್ಕಳನ್ನು ರಕ್ಷಿಸುವುದಾಗಿ ಮಾಸ್ಕೊ ತಿಳಿಸಿತ್ತು. ಉಕ್ರೇನ್ ಮೇಲೆ ರಷ್ಯಾದ ಆಕ್ರಮಣ ಪ್ರಾರಂಭವಾದಾಗಿಂದಲೂ ಲಕ್ಷಾಂತರ ಉಕ್ರೇನಿನ ಮಕ್ಕಳು ಸಂಕಷ್ಟ ಎದುರಿಸುತ್ತಿದ್ದಾರೆ ಹಾಗೂ ಅವರ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ತಿಳಿಸಿದೆ.
ಅಲಸ್ಕಾದಲ್ಲಿ ಟ್ರಂಪ್ ಮತ್ತು ಪುಟಿನ್ ನಡುವೆ ಸುಮಾರು ಮೂರು ಗಂಟೆಗಳ ಕಾಲ ಸಭೆ ನಡೆದರೂ,ಕೂಡಾ ಉಕ್ರೇನ್ ನಡುವಿನ ಕದನ ವಿರಾಮ ಒಪ್ಪಂದದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. (ಏಜೆನ್ಸೀಸ್)