ಒಂದು ಲಕ್ಷ ಮರ ನೆಡುವ ಅಭಿಯಾನಕ್ಕೆ ಮೆಗಾಸ್ಟಾರ್ ಚಾಲನೆ...

Chiru
Published on

ಟಾಲಿವುಡ್​ನಲ್ಲಿ ಸಸಿ ನೆಡುವ ಕಾರ್ಯ ಜೋರಾಗಿಯೇ ನಡೆಯುತ್ತಿದೆ. ಇತ್ತೀಚೆಗಷ್ಟೇ ನಟಿ ಸಮಂತಾ ಅಕ್ಕಿನೇನಿ ಮತ್ತು ನಾಗಾರ್ಜುನ್​ ಸಸಿ ನೆಡುವ ಫೋಟೋ ಶೇರ್​ ಮಾಡಿಕೊಂಡು, ಅದೇ ರೀತಿ ಗಿಡಗಳನ್ನು ನೆಡುವಂತೆ ಒಂದಷ್ಟು ಸಿನಿಮಾ ನಟಿಯರಿಗೆ ಕೋರಿದ್ದರು. ರಶ್ಮಿಕಾ ಮಂದಣ್ಣ ಸಹ ಸಮಂತಾ ಕೋರಿಕೆಯಂತೆ ಗಿಡ ನೆಟ್ಟು ಇತರರಿಗೆ ಮಾದರಿಯಾಗಿದ್ದರು. ಇದೀಗ ಇದೆಲ್ಲದಕ್ಕಿಂತ ಹತ್ತು ಹೆಜ್ಜೆ ಮುಂದೆ ಹೋಗಿದ್ದಾರೆ ಟಾಲಿವುಡ್​ನ ಮೆಗಾಸ್ಟಾರ್​ ಚಿರಂಜೀವಿ.

ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಇತ್ತೀಚೆಗಷ್ಟೇ ಮೀಸೆ ಬೋಳಿಸಿಕೊಂಡು, ಹೊಸ ಲುಕ್​ ಮೂಲಕ ಸೋಷಿಯಲ್​ ಮೀಡಿಯಾದಲ್ಲಿ ಎದುರಾಗಿದ್ದರು. ಇದೀಗ ಇದೇ ಚಿರಂಜೀವಿ ಹೊಸ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಅದೇ ಒಂದು ಲಕ್ಷ ಸಸಿ ನೆಡುವ ಅಭಿಯಾನ.

ಹೌದು, ಹೈದರಾಬಾದ್​ನ ಜುಬಿಲಿ ಹಿಲ್ಸ್​ನ ಇಂಟರ್​ನ್ಯಾಶನಲ್​ ಕಲ್ಚರಲ್​ ಸೆಂಟರ್​ನಲ್ಲಿ ಒಂದು ಲಕ್ಷ ಮರ ನೆಡುವ ಬೃಹತ್​ ಅಭಿಯಾನಕ್ಕೆ ಚಿರಂಜೀವಿ ಸಾಥ್​ ನೀಡಿದ್ದಾರೆ. ಒಂದಷ್ಟು ಸಸಿಗಳನ್ನು ನೆಟ್ಟು, ಇತರರಿಗೂ ನೆಡುವಂತೆ ಕೋರಿದ್ದಾರೆ. ವಿಶೇಷ ಎಂಬಂತೆ ಚಿರಂಜೀವಿ ಜತೆಗೆ ಸಹೋದರ ಪವನ್​ ಕಲ್ಯಾಣ್​ ಸಹ ಈ ಅಭಿಯಾನದಲ್ಲಿ ಪಾಲ್ಗೊಂಡು, ಸಸಿ ನೆಟ್ಟರು. ಈ ಅಭಿಯಾನದಲ್ಲಿ ನಿರ್ದೇಶಕರಾದ ಅನಿಲ್​ ರವಿಪುಡಿ, ಬೊಯಾಪಟಿ ಸೀನು ಸಹ ಪಾಲ್ಗೊಂಡಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net