

ಬೆಂಗಳೂರು: ದೇಶದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಇಂಟರ್ನೆಟ್ ಕಾಮರ್ಸ್ ಕಂಪನಿಯಾದ ‘ಮೀಶೋ ಇದೇ 23 ರಿಂದ 27ರವರೆಗೆ ತನ್ನ ಪ್ರಮುಖ ಹಬ್ಬದ ಮಾರಾಟ ಅಭಿಯಾನ ‘ಮೆಗಾ ಬ್ಲಾಕ್‌ಬಸ್ಟರ್ ಸೇಲ್ಸ್’ ಘೋಷಿಸಿದೆ.
ಇ-ಕಾಮರ್ಸ್ ಅನ್ನು ಪ್ರತಿಯೊಬ್ಬರಿಗೂ ತಲುಪಿಸುವ ತನ್ನ ಧ್ಯೇಯದ ಭಾಗವಾಗಿ ಕಂಪನಿಯು ದೇಶದ ವೈವಿಧ್ಯಮಯ ಗ್ರಾಹಕರಿಗೆ ಉತ್ಪನ್ನಗಳ ಲಭ್ಯತೆ ಮತ್ತು ಕೈಗೆಟುಕುವ ದರವನ್ನು ಮುಂದುವರಿಸಲಿದೆ. 30 ವಿಭಾಗಗಳಲ್ಲಿ 7 ಲಕ್ಷಕ್ಕೂ ಹೆಚ್ಚು ಮಾರಾಟಗಾರರು ಮತ್ತು 6.5 ಕೋಟಿ ಉತ್ಪನ್ನಗಳ ಸಕ್ರಿಯ ಲಿಸ್ಟಿಂಗ್‌ನೊಂದಿಗೆ, ಮೀಶೋ ಗ್ರಾಹಕರಿಗೆ ಅಗ್ಗದ ದರದಲ್ಲಿ ವ್ಯಾಪಕ ಶ್ರೇಣಿಯ ಉತ್ಪನ್ನಗಳ ಅನ್ವೇಷಣೆಯನ್ನು ಉತ್ತೇಜಿಸುವ ಗುರಿ ಹೊಂದಿದೆ.
ಈ ವರ್ಷದ ಹಬ್ಬದ ಮಾರಾಟಕ್ಕೆ ಮುನ್ನ ಮೀಶೋ ಎಂಟು ಹೊಸ ಪ್ರಾದೇಶಿಕ ಭಾಷೆಗಳನ್ನು ತಂತ್ರಾಂಶಕ್ಕೆ ಸೇರಿಸುವ ಮೂಲಕ ತನ್ನ ಪ್ರಾದೇಶಿಕ ನೆಲೆಯನ್ನು ಬಲಪಡಿಸಿದೆ. ಬಂಗಾಳಿ, ತೆಲುಗು, ಮರಾಠಿ, ತಮಿಳು, ಗುಜರಾತಿ, ಕನ್ನಡ, ಮಲಯಾಳಂ ಮತ್ತು ಒಡಿಯಾ ಭಾಷೆಗಳನ್ನು ಸೇರಿಸಲಾಗಿದೆ. ಕಳೆದ ವರ್ಷದ 5 ದಿನಗಳ ವಾರ್ಷಿಕ ಮಾರಾಟ ಅಭಿಯಾನವು 4+ ದರ್ಜೆಯ ಪ್ರದೇಶಗಳಿಂದ ಶೇ.60 ಆರ್ಡರ್‌ಗಳಿಗೆ ಸಾಕ್ಷಿಯಾಯಿತು. ಮೀಶೋದಲ್ಲಿನ ಮಾರಾಟಗಾರರು ಸರಾಸರಿ ಎರಡು ವರ್ಷಗಳಲ್ಲಿ ತಮ್ಮ ವ್ಯಾಪಾರದಲ್ಲಿ ಶೇ.82 ಬೆಳವಣಿಗೆಯನ್ನು ಕಂಡಿದ್ದಾರೆ.
|ಉತ್ಕೃಷ್ಟ ಕುಮಾರ್, ಮೀಶೋ ವ್ಯಾಪಾರ ವಿಭಾಗದ ಸಿಎಕ್ಸ್‌ಒ