ಜೂನ್ 9ರಂದು ವೈದ್ಯಕೀಯ ಉಚಿತ ಶಿಬಿರ

Free health checkup camp at Thoravi on 27th
Published on

ಪಡುಬಿದ್ರಿ: ಹೆಜಮಾಡಿಕೋಡಿ ವಿದ್ಯಾಪ್ರಸಾರ ಹಳೇ ವಿದ್ಯಾರ್ಥಿ ಸಂಘದ ಅಂಗ ಸಂಸ್ಥೆ ಕೋಡಿ ಕ್ರಿಕೆಟರ್ಸ್‌ ಮತ್ತು ಮಂಗಳೂರು ಎ.ಜೆ. ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸಹಯೋಗದೊಂದಿಗೆ ಜೂನ್ 9ರಂದು ಹೆಜಮಾಡಿಕೋಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮಹಿಳೆಯರ ಆರೋಗ್ಯ ತಪಾಸಣಾ ಶಿಬಿರ-ಕ್ಯಾನ್ಸರ್ ಜಾಗೃತಿ ಮತ್ತು ತಪಾಸಣೆ ನಡೆಯಲಿದೆ.

ಸ್ತ್ರೀರೋಗ ತಜ್ಞೆ ಡಾ.ಕವಿತಾ ಡಿಸೋಜ ನೇತೃತ್ವದಲ್ಲಿ ಎ.ಜೆ. ವೈದ್ಯಕೀಯ ಮಹಾವಿದ್ಯಾಲಯದ ಮಹಿಳಾ ವಿಭಾಗದಿಂದ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ನಡೆಯುವ ವೈದ್ಯಕೀಯ ಉಚಿತ ಶಿಬಿರದಲ್ಲಿ ಗರ್ಭಕೋಶದ ಕ್ಯಾನ್ಸರ್, ಸ್ತನ ಕ್ಯಾನ್ಸರ್, ರಕ್ತಹೀನತೆ, ಮಧುಮೇಹ ತಪಾಸಣೆ, ಚರ್ಮ ಪರೀಕ್ಷೆ, ಸಾಮಾನ್ಯ ರೋಗ ಪರೀಕ್ಷೆ, ಹೃದಯ ಸಂಬಂಧಿ ಕಾಯಿಲೆ ಹಗೂ ಇಸಿಜಿ ಪರೀಕ್ಷೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net