ಎಂಡಿಎಂಎ ವಶ, ಇಬ್ಬರ ಬಂಧನ

New Project
Published on

ಕಾಸರಗೋಡು: ಕಾರಿನಲ್ಲಿ ಸಾಗಿಸುತ್ತಿದ್ದ 83.890 ಗ್ರಾಂ ಎಂಡಿಎಂಎ ಮಾದಕ ದ್ರವ್ಯ ಬದಿಯಡ್ಕ ಠಾಣೆ ಪೊಲೀಸರ ತಂಡ ವಶಪಡಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಿದೆ. ಕಾಸರಗೋಡು ತಾಯಲಂಗಾಡಿ ಕುನ್ನಿಲ್ ನಿವಾಸಿ ಅಬ್ದುಲ್ ಸಲಾಂ ಹಾಗೂ ಚೆಂಗಳ ಬಾಲಡ್ಕ ನಿವಾಸಿ ಮಹಮ್ಮದ್ ಸಲೀಂ ಬಂಧಿತರು. ವಿಟ್ಲ ಭಾಗದಿಂದ ಆಗಮಿಸಿದ ಕಾರನ್ನು ತಪಾಸಣೆ ನಡೆಸಿದಾಗ ಎಂಡಿಎಂಎ ಪತ್ತೆಯಾಗಿದೆ. ಮಾದಕ ದ್ರವ್ಯ ಸಾಘಟಕ್ಕೆ ಬಳಸಿದ್ದ ಕಾರನ್ನೂ ವಶಪಡಿಸಿಕೊಳ್ಳಲಾಗಿದೆ. ಕಾಸರಗೋಡು ಜಿಲ್ಲೆಯ ವಿವಿಧ ಕೇಂದ್ರಗಳಿಗೆ ಮಾದಕ ದ್ರವ್ಯ ಎಂಡಿಎಂಎ ಪೂರೈಸುವ ಪ್ರಮುಖ ಕೊಂಡಿ ಇವರಾಗಿದ್ದು, ಕರ್ನಾಟಕದಿಂದ ಕಾಸರಗೋಡಿಗೆ ಮಾದಕ ದ್ರವ್ಯ ಪೂರೈಸುತ್ತಿದ್ದರೆನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net