ಮಂಗಳೂರು : ರಾಜ್ಯ ಸರ್ಕಾರದಿಂದ ನೂತನವಾಗಿ ಆಯ್ಕೆಯಾದ ಎಂಎಲ್‌ಸಿ ಐವನ್ ಡಿಸೋಜಾ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟಾೃನಿ ಆಲ್ವಾರಿಸ್ ಮತ್ತು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್.ಯು.ಎಚ್. ಇವರುಗಳನ್ನು ನಗರದ ಎಂಸಿಸಿ ಬ್ಯಾಂಕ್ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಎಂಎಲ್‌ಸಿ ಐವನ್ ಡಿಸೋಜಾ ಮಾತನಾಡಿ ಸಿಬ್ಬಂದಿ ಕಠಿಣ ಪರಿಶ್ರಮದಿಂದ ಎಂಸಿಸಿ ಬ್ಯಾಂಕ್ ಉತ್ತಮ ಪ್ರಗತಿ ಸಾಧಿಸಿದೆ ಎಂದರು. ಮುಖ್ಯ ಅತಿಥಿಯಾಗಿದ್ದ ಮಾಜಿ ಶಾಸಕ ಜೆ.ಆರ್. ಲೋಬೊ ಮಾತನಾಡಿ ವ್ಯಕ್ತಿಗಳಿಗೆ ನೀಡುವ ಸನ್ಮಾನಗಳು ಸಮಾಜದ ಮೇಲಿನ ಜವಾಬ್ದಾರಿಯನ್ನು ಹೆಚ್ಚಿಸುತ್ತವೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಎಂಸಿಸಿ ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ ಮಾತನಾಡಿ ‘ ಎಂಸಿಸಿ ಬ್ಯಾಂಕ್ ಸಮಾಜದ ಒಳಿತಿಗಾಗಿ ಕಾರ್ಯ ನಿರ್ವಹಿಸುತ್ತಿದೆ. ಬ್ಯಾಂಕ್‌ಗೆ 112 ವರ್ಷಗಳ ಇತಿಹಾಸವಿದ್ದು, ಶತಮಾನೋತ್ಸವ ನಂತರದ ರಜತ ಮಹೋತ್ಸವ ಸಂದರ್ಭ ರಾಜ್ಯದಲ್ಲಿ ಟ್ಟು 125 ಶಾಖೆಗಳನ್ನು ಹೊಂದುವ ಆಶಯವಿದೆ ಎಂದರು
ಬ್ಯಾಂಕಿನ ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವ, ನಿರ್ದೇಶಕರಾದ ಅನಿಲ್ ಪತ್ರಾವೊ, ಆಂಡ್ರುೃ ಡಿಸೋಜ , ಎಲ್ರಾಯ್ ಕಿರಣ್ ಕ್ರಾಸ್ಟೊ, ಜೆ.ಪಿ.ರಾಡ್ರಿಗಸ್, ರೋಶನ್ ಡಿಸೋಜಾ, ಫ್ರೀಡಾ,ಐರಿನ್ ರೆಬೆಲ್ಲೊ, ಮೆಲ್ವಿನ್ ವಾಸ್, ಹೆರಾಲ್ಡ್ ಮೊಂತೆರೊ, ವಿನ್ಸೆಂಟ್ ಲಸ್ರಾದೊ, ಸುಶಾಂತ್ ಸಲ್ದಾನಾ, ಆಲ್ವಿನ್ ಮೊಂತೆರೊ, ಫೆಲಿಕ್ಸ್ ಡಿಕ್ರೂಜ್,
ಶರ್ಮಿಳಾ ಮಿನೇಜಸ್ , ಉಪ ಪ್ರಧಾನ ವ್ಯವಸ್ಥಾಪಕ ರಾಜ್ ಮಿನೇಜಸ್ ಉಪಸ್ಥಿತರಿದ್ದರು. ಡೇವಿಡ್ ಡಿಸೋಜಾ ವಂದಿಸಿದರು. ಮನೋಜ್ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.