ಮುಂಬೈ: ದೇಶದ ಪ್ರತಿಷ್ಠಿತ ಕ್ರೀಡಾಂಗಣಗಳಲ್ಲಿ ಒಂದಾದ ವಾಂಖೆಡೆ ಕ್ರೀಡಾಂಗಣವು ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದ್ದು, 50ನೇ ವರ್ಷದ ಸವಿನೆನಪಿಗಾಗಿ ಮುಂಬೈ ಕ್ರಿಕೆಟ್ ಅಸೋಸಿಯೇಷನ್ (MCA) ಈಚೆಗೆ ಸಮಾರಂಭವನ್ನು ಆಯೋಜಿಸಿತ್ತು. ಸಮಾರಂಭದಲ್ಲಿ ಮಾಜಿ ಹಾಗೂ ಹಾಲಿ ಕ್ರಿಕೆಟಿಗರನ್ನು ಸನ್ಮಾನಿಸಿದ್ದ ಕ್ರಿಕೆಟ್ ಮಂಡಳಿಯು ಇದೀಗ ಗಿನ್ನೆಸ್ ದಾಖಲೆಗೆ ಭಾಜನರಾಗುವ ಮೂಲಕ ಎಲ್ಲರ ಗಮನ ಸೆಳೆದಿದೆ.
50 ನೇ ವಾರ್ಷಿಕೋತ್ಸವದ ಸ್ಮರಣಾರ್ಥ ಕ್ರಿಕೆಟ್ ಬಾಲ್ಗಳನ್ನು ಬಳಸಿ Largest Cricket Ball Sentence ಮಾಡುವ ಮೂಲಕ ಗಿನ್ನೆಸ್ ದಾಖಲೆಗೆ ಎಂಸಿಎ (MCA) ಭಾಜನವಾಗಿದೆ. ಜನವರಿ 23, 1975ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ವೆಸ್ಟ್ ಇಂಡೀಸ್ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಿತ್ತು. ಇಂದಿಗೆ 50 ವರ್ಷಗಳು ತುಂಬಿದ ಹಿನ್ನೆಲೆ ಮಂಡಳಿಯು ಕ್ರಿಕೆಟ್ ಬಾಲ್ಗಳನ್ನು ಬಳಸಿ ಈ ಕಲಾಕೃತಿಯನ್ನು ರಚಿಸುವ ಮೂಲಕ ಸ್ಮರಣೀಯವಾಗಿಸಿದೆ.
Largest Cricket Ball Sentence ಮಾಡಲು 14,505 ಕ್ರಿಕೆಟ್ ಬಾಲ್ಗಳನ್ನು ಬಳಸಲಾಗಿತ್ತು. ಎಂಸಿಎ ಈ ದಾಖಲೆಯನ್ನು ಸಾಧಿಸಲು ಬಳಸಿದ ಚೆಂಡುಗಳನ್ನು ನಗರದ ಶಾಲೆಗಳು, ಕ್ಲಬ್‌ಗಳು ಮತ್ತು ಎನ್‌ಜಿಒಗಳ ಮಹತ್ವಾಕಾಂಕ್ಷಿ ಕ್ರಿಕೆಟಿಗರಿಗೆ ನೀಡಿ, ಈ ದಾಖಲೆಯಿಂದ ಸ್ಫೂರ್ತಿ ಪಡೆಯಲು ಮತ್ತು ಅವರ ವೃತ್ತಿಜೀವನದಲ್ಲಿ ಹೆಚ್ಚಿನ ಮೈಲಿಗಲ್ಲುಗಳನ್ನು ಸಾಧಿಸಲು ಪ್ರೋತ್ಸಾಹಿಸುತ್ತದೆ.
ಸ್ಪೋರ್ಟ್ಸ್-ಫಾರ್ವರ್ಡ್ ನೇಷನ್ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ RCB