

MBBS Student: ಅತಿ ವೇಗದಲ್ಲಿ ಬಂದ ಬೈಕ್ ನಿಯಂತ್ರಣ ತಪ್ಪಿ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ 21 ವರ್ಷದ MBBS ವಿದ್ಯಾರ್ಥಿ ಮೃತಪಟ್ಟ ಘಟನೆ ವಿಯೆಟ್ನಾಂನಲ್ಲಿ ಬುಧವಾರ (ಜೂನ್ 04) ನಡೆದಿದೆ.
ಈ ಭೀಕರ ಅಪಘಾತವು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಮೃತ ವಿದ್ಯಾರ್ಥಿಯನ್ನು ಅರ್ಷಿದ್ ಆಶ್ರಿತ್ (21) ಎಂದು ಗುರುತಿಸಲಾಗಿದ್ದು, ಎಂಬಿಬಿಎಸ್ ಮೂರನೇ ವರ್ಷದಲ್ಲಿ ಓದುತ್ತಿದ್ದ ಎಂದು ತಿಳಿದುಬಂದಿದೆ.
ಬುಧವಾರ ಸಂಜೆ ಆಶ್ರಿತ್ ತನ್ನ ಸ್ನೇಹಿತನೊಂದಿಗೆ 150CC ಬೈಕ್ ಅನ್ನು ಅತಿ ವೇಗದಲ್ಲಿ ಓಡಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಶ್ರಿತ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಅವನ ಸ್ನೇಹಿತನಿಗೆ ಗಂಭೀರ ಗಾಯಗಳಾಗಿವೆ. (ಏಜೆನ್ಸೀಸ್)