ಸಾಹಿತ್ಯ, ಸಂಗೀತ, ನಾಟಕದಲ್ಲಿ ಅಭಿರುಚಿ ಹೆಚ್ಚಲಿ

KND GRAMALOKA
Published on

ಕುಂದಗೋಳ: ಮೊಬೈಲ್​ಫೋನ್​ನಿಂದ ಗ್ರಾಮೀಣ ಭಾಗದ ಯುವಕ-ಯುವತಿಯರು ಅದರಲ್ಲಿ ಬರುವ ಪಬ್ಜಿಯಂತಹ ಗೇಮ್ ಹಾಗೂ ಇತರೆ ಅನವಶ್ಯಕ ವಿಷಯಕ್ಕೆ ಮಾರು ಹೋಗಿದ್ದಾರೆ. ಅವುಗಳ ಗೀಳಿನಿಂದ ಹೊರತಂದು ಅವರಲ್ಲಿ ಸಾಹಿತ್ಯ, ಸಂಗೀತ, ಕಲೆ, ನಾಟಕ, ಇವುಗಳ ಅಭಿರುಚಿ ಹೆಚ್ಚಿಸಲು ಗ್ರಾಮೀಣ ಭಾಗದಲ್ಲಿ ಗ್ರಾಮಲೋಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಬಸವರಾಜ ಸಾದರ ಹೇಳಿದರು.

ತಾಲೂಕಿನ ಶಿರೂರ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಹಾಗೂ ಶಿರೂರ ಗ್ರಾಪಂ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಗ್ರಾಮಲೋಕ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಚಾಲನೆ ನೀಡಿ ಅವರು ಮಾಡನಾಡಿದರು. ಗ್ರಾಮೀಣ ಭಾಗದಲ್ಲಿ ಕಲೆ, ಸಾಹಿತ್ಯ, ಸಂಗೀತ, ಯಕ್ಷಗಾನ, ಬಯಲಾಟ, ದೊಡ್ಡಾಟ, ಜಾನಪದ ಕಲೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಅಂದಾಗ ಮಾತ್ರ ನಮ್ಮ ಭಾರತೀಯ ಸಂಸ್ಕೃತಿ ಉಳಿಸಿ, ಬೆಳೆಸಲು ಸಹಕಾರಿಯಾಗಲಿದೆ ಎಂದರು.

ಗ್ರಾಮೀಣ ಮಹಿಳೆ ಮತ್ತು ಸಾಹಿತ್ಯದ ಕುರಿತು ಮಾತನಾಡಿದ ಸಾಹಿತಿ ಹೇಮಾ ಪಟ್ಟಣಶೆಟ್ಟಿ ಮಾತನಾಡಿ, ಮಹಿಳೆಯರು ತಮ್ಮ ಮಕ್ಕಳಿಗೆ ಸಾಹಿತ್ಯದ ಕಡೆ ಒಲವು ಮೂಡಿಸಬೇಕು. ಮನೆಯಲ್ಲಿ ಸಾಹಿತ್ಯ ಓದಲು, ಬರೆಯಲು ಹೇಳಬೇಕು. ಇದರಿಂದ ಸಾಹಿತ್ಯ, ಸಂಸ್ಕೃತಿ ತಾನಾಗಿಯೇ ಬೆಳೆಯುತ್ತದೆ ಎಂದರು.

ಜನಪದ ಸಾಹಿತ್ಯ-ಗ್ರಾಮೀಣ ಹೃದಯದ ದನಿ ಕುರಿತು ಹುಬ್ಬಳ್ಳಿ ಸಿಪಿಐ ಜ್ಯೋತಿರ್ಲಿಂಗ ಹೊನಕಟ್ಟಿ, ಗ್ರಾಮೀಣ ಜನತೆ ಹಾಗೂ ನೈತಿಕ ಸಾಹಿತ್ಯದ ಬಗ್ಗೆ ಸಾಹಿತಿ ಜಿ.ಎ. ತಿಗಡಿ ಹಾಗೂ ಗ್ರಾಮೀಣ ಪರಿಸರದಲ್ಲಿ ರಂಗ ಸಾಹಿತ್ಯದ ಪ್ರಭಾವದ ಕುರಿತು ರಂಗಭೂಮಿ ಕಲಾವಿದ ಬಸವರಾಜ ಬೆಂಗೇರಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ನೀಲವ್ವ ಭಜಮ್ಮನವರ, ಉಪಾಧ್ಯಕ್ಷ ಬಸವಣ್ಣೆವ್ವ ತಳವಾರ, ಸದಸ್ಯ ಅಶೋಕ ಘೂರ್ಪಡೆ, ಯಲಪ್ಪ ಭರಮ್ಮಕ್ಕನವರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net