

ಕಿರುವಾರ ಎಸ್. ಸುದರ್ಶನ್ ಕೋಲಾರ
ಜಿಲ್ಲೆಯಲ್ಲಿ ಹಣ್ಣುಗಳ ರಾಜ ಮಾವು ಸುಗ್ಗಿ ಕಾಲ ಮುಗಿಯುತ್ತಾ ಬಂದಿದೆ. ಆದರೆ ಇನ್ನು ಸಾಕಷ್ಟು ಮಂದಿ ರೈತರು ಮಾವು ಕಟಾವು ಮಾಡಬೇಕಿದೆ. ಆದ್ದರಿಂದ ಬೆಂಬಲ ಬೆಲೆ ಯೋಜನೆಯಡಿ ಮಾರಾಟ ಮಾಡುವ ಅವಧಿಯನ್ನು ವಿಸ್ತರಿಸಬೇಕೆಂಬ ಒತ್ತಾಯ ಕೇಳಿಬಂದಿದೆ.
ಜಿಲ್ಲೆಯ ಶ್ರೀನಿವಾಸಪುರ, ಮುಳಬಾಗಿಲು ತಾಲೂಕು ವ್ಯಾಪ್ತಿಯ ಕೆಲ ತೋಟಗಳಲ್ಲಿ ತಡವಾಗಿ ಸಲು ಬಿಟ್ಟಿರುವ ಮಾವು ಈಗ ಕಟಾವಿಗೆ ಬಂದಿದೆ. ಆದರೆ, ಜು.24ಕ್ಕೆ ಬೆಂಬಲ ಬೆಲೆ ಯೋಜನೆಯಡಿ ಖರೀದಿಗೆ ನೋಂದಣಿ ಅವಧಿ ಮುಗಿದ್ದು, ಇನ್ನು ಎರಡು ವಾರ ಮುಂದುವರಿಸಿದರೆ ಅನುಕೂಲವಾಗುತ್ತದೆ ಎಂದು ರೈತರು ಆಗ್ರಹಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 44,717 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಿದ್ದು, 1,62,000 ಮೆಟ್ರಿಕ್ ಟನ್ ಮಾರುಕಟ್ಟೆಗೆ ಮಾವು ಅವಕ ನಿರೀಸಲಾಗಿತ್ತು. ಆದರೆ ಜು.24ರ ತನಕ ಒಟ್ಟು 16,270 ಮಂದಿ ಬೆಂಬಲ ಬೆಲೆಯಡಿ ನೋಂದಣಿಯಾಗಿದ್ದು, 11,86,584 ಕ್ವಿಂಟಾಲ್ ಮಾರಾಟವಾಗಿದೆ. ಒಟ್ಟು 47,93,80,05,151 ರೂ. ರೈತರ ಖಾತೆಗೆ ಜಮಾ ಆಗಲಿದೆ.
ಮಾವು ದರ ಪಾತಾಳಕ್ಕೆ ಕುಸಿದ ಹಿನ್ನೆಲೆಯಲ್ಲಿ ಬೆಳೆಗಾರರು ಹೋರಾಟ ನಡೆಸಿ ಬೆಂಬಲ ಬೆಲೆ ಘೋಷಣೆ ಒತ್ತಾಯಿಸಿದ್ದರು. ಇದಕ್ಕೆ ಸ್ಪಂದಿಸಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು 50:50 ಅನುಪಾತದಲ್ಲಿ ಖರೀದಿ ದರವನ್ನು 4 ರೂ.ಗೆ ನಿಗದಿಪಡಿಸಿ ಆದೇಶಿಸಿ, 100 ಕೋಟಿ ರೂ. ಮೀಸಲಿರಿಸಿತು. ಒಟ್ಟಾರೆಯಾಗಿ 2,50,000 ಮೆಟ್ರಿಕ್ ಟನ್ ಖರೀದಿಗೆ ಮಾತ್ರ ಅವಕಾಶ ಕಲ್ಪಿಸಿತ್ತು. ಮೀಸಲಿರಿಸಿರುವ ಅನುದಾನದ ಪೈಕಿ ಕೇವಲ ಶೇ.50 ಸಹ ವಿನಿಯೋಗವಾಗುತ್ತಿಲ್ಲ. ಕೊನೇ ಹಂತದಲ್ಲಿ ಮಾವು ಕಟಾವು ಮಾಡುತ್ತಿರುವವರಿಗೆ ಯೋಜನೆಯ ಪ್ರಯೋಜನ ಕಲ್ಪಿಸಲು ಒತ್ತಾಯ ಕೇಳಿಬಂದಿದೆ.
* ಅಕ್ರಮಗಳಿಗೆ ಇಲ್ಲ ಅವಕಾಶ
ತೋತಾಪುರಿ ಮಾವು ಮಾರಾಟ ಮಾಡುವ ರೈತರಿಗೆ ಬೆಂಬಲ ಬೆಲೆ ಯೋಜನೆಯ ಪ್ರಯೋಜನ ದೊರಕಿಸಿಕೊಡುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ತೋಟಗಾರಿಕೆ, ಕಂದಾಯ, ಎಪಿಎಂಸಿ ಅಧಿಕಾರಿ, ಸಿಬ್ಬಂದಿ ನಿಯೋಜಿಸಿದ್ದರು. ಚೆಕ್ ಪೋಸ್ಟ್ ನಿರ್ಮಾಣ, ನೋಂದಣಿ, ರೈತರಿಂದ ದಾಖಲೆ ಸ್ವೀಕರಿಸಲು ಕೌಂಟರ್ಗಳನ್ನು ಸ್ಥಾಪಿಸಿದರು. ಗೊಂದಲಗಳನ್ನು ನಿವಾರಣೆ ಮಾಡಲು ಪ್ರತ್ಯೇಕ ಹೆಲ್ಪ್ ಡೆಸ್ಕ್ ಸಹ ತೆರೆದಿದ್ದರು.
ಇದರಲ್ಲಿ ಅಕ್ರಮಗಳು ನಡೆಯಲು ಅವಕಾಶ ನೀಡದಂತೆ ಕ್ರಮವಹಿಸಿದ್ದು, ಇದು ಯಶಸ್ವಿಯೂ ಆಗಿದ್ದು, ನೋಂದಣಿಯಾಗಿ ಮಾರಾಟ ಮಾಡಿರುವ ರೈತರ ಖಾತೆಗೆ ಹಣ ಜಮೆಯಾಗುವ ನಿರೀೆ ಇದೆ.
* ಕೊನೆಯಲ್ಲಿ ಉತ್ತಮ ದರ
ಬೆಂಬಲ ಬೆಲೆ ಘೋಷಣೆ ಆದಾಗ ಆರಂಭದಲ್ಲಿ ರೈತರು ಮಾರುಕಟ್ಟೆಗೆ ಮಾವನ್ನು ಕಡಿಮೆ ತಂದರು, ಬೆಲೆ ಘೋಷಣೆ ಮಾಡುತ್ತಿದ್ದಂತೆ ಮಾರುಕಟ್ಟೆಯಲ್ಲಿ ಖರೀದಿ ದರವು 2.5 ರೂ.ಗೆ ಕುಸಿಯಿತು. ದಿನಗಳು ಕಳೆದಂತೆ ಕೊನೆ ಳಿಗೆಯಲ್ಲಿ ಮಾರುಕಟ್ಟೆಯಲ್ಲಿ ತೋತಾಪುರಿ ಮಾವು ಕೆಜಿ 9 ರೂ.ರಿಂದ 11 ರೂ.ತನಕ ಮಾರಾಟವಾಗುತ್ತಿದೆ. ಇದರ ಜತೆಗೆ ನೀಲಂ ತಳಿಗೂ ಉತ್ತಮ ಬೇಡಿಕೆ ಸೃಷ್ಟಿಯಾಗಿದೆ.
ಕೋಟ್...
ಸರ್ಕಾರಗಳು ಸೂಕ್ತಕಾಲಕ್ಕೆ ಮಧ್ಯ ಪ್ರವೇಶ ಮಾಡಿ ಮಾವಿಗೆ ಬೆಂಬಲ ಬೆಲೆ ಘೋಷಣೆ ಮಾಡಿ ರೈತರ ನೆರವಿಗೆ ಧಾವಿಸಿದೆ. ಯೋಜನೆ ಪ್ರಯೋಜನೆ ಅರ್ಹರಿಗೆ ತಲುಪಿಸಲು ಕ್ರಮವಹಿಸಲಾಗಿದ್ದು, ಈಗಾಗಲೇ ನೋಂದಣಿಯಾಗಿರುವ ರೈತರ ಖಾತೆಗೆ ಹಣ ಜಮಾ ಆಗಲಿದೆ.
- ಡಾ.ಎಂ.ಆರ್.ರವಿ, ಜಿಲ್ಲಾಧಿಕಾರಿ, ಕೋಲಾರ.
ಕೋಟ್...
ಸರ್ಕಾರ ಮಾವಿಗೆ ಬೆಂಬಲ ಬೆಲೆ ನಿಗದಿಪಡಿಸಿ 100 ಕೋಟಿ ರೂ. ಮೀಸಲಿರಿಸಿದ್ದು, ಆ ಪೈಕಿ ಶೇ.50 ಸಹ ಉಪಯೋಗ ಆಗುತ್ತಿಲ್ಲ. ಇನ್ನೂ ಮಾವನ್ನು ಕಟಾವು ಮಾಡದೆ ಉಳಿಸಿಕೊಂಡವರಿಗೂ ಯೋಜನೆಯ ಪ್ರಯೋಜನ ದೊರೆಯುವಂತೆ ಸರ್ಕಾರ ಕ್ರಮವಹಿಸಬೇಕು.
- ರಮೇಶ್ ಬಾಬು, ಕಾರ್ಯದರ್ಶಿ, ಮಾವು ಎ್ಪಿಒ, ಶ್ರೀನಿವಾಸಪುರ