

ಮೂಡಲಗಿ: ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಲು ಗ್ರಾಮೀಣ ಯುವಕ ಸಂಘಗಳು ಪೂರಕವಾಗಿದ್ದು, ಕ್ರೀಡೆಗೆ ಬೇಕಾದ ಉತ್ತಮ ವಾತಾವರಣ ಕಲ್ಪಿಸಿಕೊಡುತ್ತವೆ ಎಂದು ಮೂಡಲಗಿ ದಿವಾಣಿ ಹಾಗೂ ಜೆಎಂಎ್ಸಿ ನ್ಯಾಯಾಧೀಶೆ ಜ್ಯೋತಿ ಪಾಟೀಲ ಹೇಳಿದರು.
ಪಟ್ಟಣದ ಎಲ್.ವೈ. ಅಡಿಹುಡಿ ಶಾಲೆಯಲ್ಲಿ ನೆಹರು ಯುವ ಕೇಂದ್ರ, ರಾಜ್ಯ ಯುವ ಸಂಘಗಳ ಒಕ್ಕೂಟ ಬೆಳಗಾವಿ, ಡಾ ಅಂಬೇಡ್ಕರ್ ಕ್ರೀಡಾ ಮತ್ತು ಸಮಾಜ ಸೇವಾ ಸಂಘ ಢವಳೇಶ್ವರ, ಮಂಜುನಾಥ ಸೈನಿಕ ತರಬೇತಿ ಕೇಂದ್ರ ಮೂಡಲಗಿ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ತಾಲೂಕುಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಉತ್ಸಾಹಿ ಯುವಜನ ಸಂಘಗಳಿರುವಲ್ಲಿ ಕ್ರೀಡಾಪಟುಗಳು ಏಳಿಗೆ ಕಾಣಲು ಸಾಧ್ಯ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಮಾತನಾಡಿ, ನೆಹರು ಯುವ ಕೇಂದ್ರ ಸಂಘಟನೆ ಕ್ರೀಡಾಪಟುಗಳಿಗೆ ಅಗತ್ಯ ಪ್ರೋತ್ಸಾಹ ನೀಡಲಿದೆ ಎಂದರು.
ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಸಿದ್ದಣ್ಣ ದುರದುಂಡಿ ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ಎಲ್.ವೈ. ಅಡಿಹುಡಿ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಆರ್.ಆರ್. ಭಾಗೋಜಿ, ಎಲ್.ಬಿ. ಒಡೆಯರ, ಎಂ.ಆರ್. ಗೋಣಿ, ಪಿಎಸ್‌ಐ ರಾಜು ಪೂಜೇರಿ, ಹಣಮಂತ ಹಾವಣ್ಣವರ, ಸುಭಾಸ ಗೊಡ್ಯಾಗೋಳ, ಯಲ್ಲಾಲಿಂಗ ವಾಳದ, ಕೆ.ಪಿ. ಕುಡತೆ, ಪ್ರವೀಣ ಮ್ಯಾಗಾಡಿ, ಶಶಿ ಪಟಗುಂದಿ, ಧನಪಾಲ ಮ್ಯಾಗಾಡಿ, ಸಚಿನ ಕಾಂಬಳೆ, ರವಿ ಕರಿಗಾರ, ಹನುಮಂತ ಮ್ಯಾಗಾಡಿ, ಮುಖ್ಯಶಿಕ್ಷಕ ಶಶಿಧರ ಆರಾಧ್ಯ, ಶಿಲ್ಪಾ ಗಾಡದ, ದುರ್ಗಪ್ಪ ಮ್ಯಾಗಾಡಿ ಇತರರು ಇದ್ದರು.