ಗ್ರಾಮಾಂತರ ಕ್ರೀಡಾಪಟುಗಳು ಅಂತಾರಾಷ್ಟ್ರಿಯ ಮಟ್ಟದಲ್ಲಿ ಸಾಧನೆ ಮಾಡುವಂತಾಗಲಿ

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ರಾಹುಲ್ ದ್ರಾವಿಡ್ ಟ್ರೋಫಿ 2025 ಟೂರ್ನಿಮೆಂಟ್‌ಗೆ ಶಾಸಕ ಕೆ.ಎಂ.ಉದಯ್ ಚಾಲನೆ ನೀಡಿದರು. ಸಿದ್ದರಾಜು, ಅಭಿಷೇಕ, ಪ್ರಜ್ವಲ್, ಚಿರಂಜೀವಿ, ರೋಹಿತ್, ಮಣಿ, ಕಿರಣ, ಹರ್ಷ, ಉಮೇಶ್, ಶರತ್ ಸಂತೋಷ್ ಇದ್ದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ರಾಹುಲ್ ದ್ರಾವಿಡ್ ಟ್ರೋಫಿ 2025 ಟೂರ್ನಿಮೆಂಟ್‌ಗೆ ಶಾಸಕ ಕೆ.ಎಂ.ಉದಯ್ ಚಾಲನೆ ನೀಡಿದರು. ಸಿದ್ದರಾಜು, ಅಭಿಷೇಕ, ಪ್ರಜ್ವಲ್, ಚಿರಂಜೀವಿ, ರೋಹಿತ್, ಮಣಿ, ಕಿರಣ, ಹರ್ಷ, ಉಮೇಶ್, ಶರತ್ ಸಂತೋಷ್ ಇದ್ದರು.
Published on

ಮದ್ದೂರು: ಗ್ರಾಮಾಂತರ ಪ್ರದೇಶದ ಕ್ರೀಡಾಪಟುಗಳು ರಾಷ್ಟ್ರ ಮತ್ತು ಅಂತಾರಾಷ್ಟ್ರಿಯ ಮಟ್ಟದಲ್ಲಿ ಸಾಧನೆ ಮಾಡುವ ಮೂಲಕ ಗಮನ ಸೆಳೆಯಬೇಕೆಂದು ಶಾಸಕ ಕೆ.ಎಂ.ಉದಯ್ ಕಿವಿಮಾತು ಹೇಳಿದರು.

ಮದ್ದೂರು ಪ್ರೀಮಿಯರ್ ಲೀಗ್ ಸೀಸನ್ 1 ರ ಪ್ರಯುಕ್ತ ಮದ್ದೂರಮ್ಮ ಕ್ರೀಡಾ ಬಳಗ ವತಿಯಿಂದ  ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ರಾಹುಲ್ ದ್ರಾವಿಡ್ ಟ್ರೋಫಿ 2025 ಟೂರ್ನಿಗೆ ಚಾಲನೆ ನೀಡಿ ಮಾತನಾಡಿದರು. ಯುವ ಜನಾಂಗ ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ತೋರುವ ಜತೆಗೆ ಕಠಿಣ ಪರಿಶ್ರಪಟ್ಟರೆ ಉತ್ತಮ ಸಾಧನೆ ಮಾಡಬಹುದು. ಈ ನಿಟ್ಟಿನಲ್ಲಿ ನಿರಂತರವಾಗಿ ಅಭ್ಯಾಸ ಹಾಗೂ ಉತ್ತಮ ಮಾರ್ಗದರ್ಶನ ಪಡೆದುಕೊಳ್ಳುವ ಅವಶ್ಯಕತೆ ಇದೆ ಎಂದರು.

ಕ್ರಿಕೆಟ್ ಪಂದ್ಯ ಮೂರು ದಿನ ನಡೆದಿದ್ದು, ಮಂಡ್ಯ, ರಾಮನಗರ ಜಿಲ್ಲೆಗಳಿಂದ ಒಟ್ಟು 16 ಟೀಂಗಳು ಭಾಗವಹಿಸಿದ್ದವು.

ಬಹುಮಾನ ವಿವರ: ಎಡಿಬಿ11 ಟೀಂ ತಂಡ ಪ್ರಥಮ ಸ್ಥಾನ 1 ಲಕ್ಷ ರೂ. ನಗದು ಹಾಗೂ ಪಾರಿತೋಷಕ, ನಿಪ್ಪು ವಾರಿಯರ್ಸ್ ದ್ವಿತೀಯ ಸ್ಥಾನ 50,000 ರೂ. ನಗದು ಹಾಗೂ ಪಾರಿತೋಷಕ, ಕಲ್ಲಹಳ್ಳಿ ರಾಕರ್ಸ್ ಮೂರನೇ ಸ್ಥಾನ ಪಡೆಯುವ ಮೂಲಕ 25,000 ರೂ. ನಗದು ಹಾಗೂ ಪಾರಿತೋಷಕವನ್ನು ತನ್ನದಾಗಿಸಿಕೊಂಡಿತು.

ಉತ್ತಮ ಬ್ಯಾಟ್ಸ್‌ಮ್ಯಾನ್ ಎಡಿಬಿ11 ತಂಡದ ಆಟಗಾರ ಅಭಿ, ಕಲ್ಲಹಳ್ಳಿ ರಾಕರ್ಸ್ ತಂಡದ ಬೌಲರ್ ರಕ್ಷಿತ್ ಅವರಿಗೆ ವಿಶೇಷ ಬಹುಮಾನ ನೀಡಿ ಅಭಿನಂದಿಸಲಾಯಿತು. ಮನ್ ಮುಲ್ ನಿರ್ದೇಶಕ ಹರೀಶ್‌ಬಾಬು, ಪುರಸಭಾ ಸದಸ್ಯ ಸಿದ್ದರಾಜು, ಮುಖಂಡರಾದ ಅಭಿಷೇಕ, ಪ್ರಜ್ವಲ್, ರಾಕೇಶ್, ವಿಠಲ್, ಶಶಿ, ಚಿರಂಜೀವಿ, ರಘುನಂದನ್, ರೋಹಿತ್, ಮಣಿ, ಕಿರಣ, ಹರ್ಷ, ಉಮೇಶ್, ಶರತ್ ಸಂತೋಷ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net