

ತೋರಣಗಟ್ಟಿ: ಗ್ರಾಮದ ನಾಗಲಿಂಗೇಶ್ವರ ಮಠದಲ್ಲಿ ಶ್ರಾವಣ ಮಾಸದ ನಿಮಿತ್ತ ತಿಂಗಳಪರ್ಯಂತ ಹಮ್ಮಿಕೊಂಡಿದ್ದ ಭಜನಾ ಮಂಗಲೋತ್ಸವ ಕಾರ್ಯಕ್ರಮ ಸಡಗರದಿಂದ ಈಚೆಗೆ ಜರುಗಿತು.
ಸಾನ್ನಿಧ್ಯ ವಹಿಸಿದ್ದ ಕೊರಕೋಪ ಮಠದ ರೇವಣ್ಣಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ಯುವಜನಾಂಗ ಸಂಸ್ಕೃತಿ ಉಳಿವಿಗೆ ಶ್ರಮಿಸಬೇಕು ಎಂದರು.
ಒಂದು ತಿಂಗಳ ಪರ್ಯಂತ ಭಜನೆ ಹಾಗೂ ಅನ್ನಪ್ರಸಾದ ಸೇವೆ ಕೈಗೊಂಡ ಭಕ್ತರನ್ನು ಸತ್ಕರಿಸಲಾಯಿತು. ಮಹಾಂತಯ್ಯ ಸ್ವಾಮೀಜಿ, ಪಡದಯ್ಯ ಸ್ವಾಮೀಜಿ, ಶಿವಪ್ಪ ಮುನವಳ್ಳಿ, ಮಲ್ಲಪ್ಪ ಶಿಂಗಾರಗೊಪ್ಪ, ಮಲ್ಲಿಕಾರ್ಜುನ ಶಿಂಗಾರಗೊಪ್ಪ, ಬಸವರಾಜ ಶಿಂಗಾರಗೊಪ್ಪ, ರಾಜು ಮುನವಳ್ಳಿ, ಬಾಳಪ್ಪ ಯರಗಟ್ಟಿ, ಶಿದ್ದಲಿಂಗಪ್ಪ ಬಿಜಲಿ ಇತರರು ಇದ್ದರು.