ಮೇ 17-19 ರಾಜ್ಯ ಮಟ್ಟದ ಫಿಡೇ ರೇಟೆಡ್ ಚೆಸ್ ಚಾಂಪಿಯನ್‌ಶಿಪ್

chess
Published on

ಮಂಗಳೂರು: ದಕ್ಷಿಣ ಕನ್ನಡ ಚೆಸ್ ಅಸೋಸಿಯೇಶನ್ ವತಿಯಿಂದ ರಾಜ್ಯ ಮಟ್ಟದ 17ರ ವಯೋಮಿತಿಯ ಫಿಡೇ ರೇಟೆಡ್ ಚೆಸ್ ಚಾಂಪಿಯನ್ ಶಿಪ್ ಪಂದ್ಯಾವಳಿಯನ್ನು ಮೇ 17 ರಿಂದ 19ರ ತನಕ ಮಂಗಳೂರು ಪುರಭವನದ (ಮಿನಿ) ಸಭಾಂಗಣದಲ್ಲಿ ಆಯೋಜಿಸಲಾಗಿದೆ.


ರಾಜ್ಯದ 17ವರ್ಷ ವಯೋಮಿತಿ ಹಾಗೂ ಅದರ ಕೆಳಗಿನ ವಯೋಮಿತಿಯವರು ಭಾಗವಹಿಸ ಬಹುದಾಗಿದೆ. ವಿಜೇತರಿಗೆ ಒಟ್ಟು 1ಲಕ್ಷ ರೂ. ನಗದು ಬಹುಮಾನ ಹಾಗು ಟ್ರೋಫಿ ವಿತರಿಸಲಾಗುವುದು. ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕವಾಗಿ ಸ್ಪರ್ಧೆ ನಡೆಯಲಿದೆ.


ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ವಿಜೇತರಾದ ಪ್ರಥಮ ಹಾಗೂ ದ್ವಿತೀಯ ಸ್ಥಾನಿಗಳಿಗೆ ರಾಷ್ಟ್ರ ಮಟ್ಟದಲ್ಲಿ ಆಡುವ ಅವಕಾಶ ಲಭಿಸಲಿದೆ.
ಸ್ಪರ್ಧೆಯಲ್ಲಿ ಭಾಗವಹಿಸುವವರು ಮುಂಚಿತವಾಗಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳುವುದು ಕಡ್ಡಾಯ. ನೊಂದಣಿಗೆ ಡಿಡಿಡಿ.್ಚಛಿಠ್ಛಛಿಛಿ.್ಚಟಞ ಸಂಪರ್ಕಿಸಬಹುದು ಎಂದು ಚೆಸ್ ಅಸೋಸಿಯೇಶನ್ ಅಧ್ಯಕ್ಷ ರಮೇಶ್ ಕೋಟೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net