ಮಠಗಳು ವೇದ ಮತ್ತು ಸಂಸ್ಕಾರ ಕಲಿಸುವ ಪೀಠಗಳು: ಕೂಡಲಿ ಶೃಂಗೇರಿ ಶ್ರೀಗಳ ಅಭಿಮತ

mylara
Published on

ಬೆಂಗಳೂರು : ಮಠ ಎಂದರೆ ಕೇವಲ ಆಸ್ತಿ, ಪರಂಪರೆ, ಜಾಗೆಯ ಗುರುತು ಹೇಳುವ ಸ್ಥಳವಲ್ಲ ಬದಲಾಗಿ ವೇದಗಳ ಸಾರವನ್ನು ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಜನರಿಗೆ ತಿಳಿಸುವ ಕೇಂದ್ರಗಳು ಎಂದು ಕೂಡಲಿ ಶೃಂಗೇರಿ ಮಹಾಸಂಸ್ಥಾನದ ಶ್ರೀ ಅಭಿನವ ಶಂಕರ ಭಾರತಿ ಸ್ವಾಮಿಗಳು ಅಭಿಪ್ರಾಯಿಸಿದ್ದಾರೆ.

ಬೆಂಗಳೂರಿನ ಶಂಕರಪುರಂನ ಶ್ರೀ ಚಂದ್ರಶೇಖರ ಭಾರತೀಯ ಕಲ್ಯಾಣ ಮಂಟಪ ಸಮುಚ್ಚಯದಲ್ಲಿ ಶ್ರೀಮೈಲಾರಲಿಂಗೇಶ್ವರ ಟ್ರಸ್ಟ್ ಹಮ್ಮಿಕೊಂಡಿದ್ದ ಮೂರು ದಿನಗಳ ಶ್ರೀ ಚಿಕ್ಕಯ್ಯ ದೊಡ್ಡಯ್ಯ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಇಂದಿನ ಸಾಮಾಜಿಕ ಪರಿಸ್ಥಿತಿಯಲ್ಲಿ ಮಠಗಳು ರಾಜಕೀಯ ವ್ಯವಸ್ಥೆಯನ್ನು ಸೇರಿದಂತೆ ಎಲ್ಲ ವ್ಯವಸ್ಥೆಗಳಿಗೆ ಮಾರ್ಗದರ್ಶನ ನೀಡುವ ಪೀಠಗಳಾಗಬೇಕು ಆದರೆ ಈಗ ಅದು ಬದಲಾಗಿ ಮತ ತಂದು ಕೊಡುವ ಕೇಂದ್ರಗಳಂತಾಗಿವೆ. ಈ ಹಿಂದೆ ನಮ್ಮ ದೇಶದಲ್ಲಿ ಆಶ್ರಮ ವ್ಯವಸ್ಥೆ ಇತ್ತು. ಆದರೆ ಕಾಲಂತರದಲ್ಲಿ ಮಿಶಿನರಿಗಳ ಪ್ರವೇಶದಿಂದ ರಾಜರನ್ನು ಸಹ ಮತ ಪರಿವರ್ತನೆ ಮಾಡುವ ಸನ್ನಿವೇಶಗಳು ಜರಗಿದವು. ಹೀಗೆ ಧರ್ಮಕ್ಕೆ ಸಂಕಷ್ಟ ಬಂದಾಗ ಆದಿ ಜಗದ್ಗುರು ಶಂಕರಾಚಾರ್ಯರ ಅವತಾರಾಯಿತು. ಶ್ರೀಶಂಕರರು ಹತ್ತು ರೀತಿಯ ಸನ್ಯಾಸಗಳನ್ನು ಸೃಷ್ಟಿ ಮಾಡುವ ಮೂಲಕ ಧರ್ಮ ರಕ್ಷಣೆಯ ಕಾರ್ಯಕ್ಕೆ ಮುಂದಾದರು ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರ ಆನಂದವನದ ಶ್ರೀ ಗುರುದತ್ತಸ್ವಾಮಿ ಚಕ್ರವರ್ತಿಗಳು, ಮೈಲಾರಲಿಂಗ ಟ್ರಸ್ಟ್ ಪದಾಧಿಕಾರಿಗಳು ಉಪಸ್ಥತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net