ಕರ್ಮದ ಕುರಿತ 'ಮೆಟಡೊರ್​' ... ಒಂದೇ ಚಿತ್ರ; ಐದು ಕಥೆಗಳು

Matador 2
Published on

ಬೆಂಗಳೂರು: ಯೋಗರಾಜ್​ ಭಟ್​, ಜಯತೀರ್ಥ, ಶಶಾಂಕ್​ ಸೇರಿದಂತೆ ಐವರು ನಿರ್ದೇಶಕರು ಒಂದು ಆ್ಯಂಥಾಲಜಿ ಸಿನಿಮಾ ಮಾಡುತ್ತಿದ್ದಾರೆ ಎಂಬ ಸುದ್ದಿ ಇತ್ತು. 'ಪೆಂಟಗನ್​' ಎಂಬ ಐದು ವಿಭಿನ್ನ ಕಥೆಗಳಿರುವ ಚಿತ್ರವನ್ನು ಗುರು ದೇಶಪಾಂಡೆ ನಿರ್ಮಿಸುತ್ತಿದ್ದ ವಿಚಾರವೂ ಸುದ್ದಿಯಾಗಿತ್ತು. ಈ ಎರಡೂ ಚಿತ್ರಗಳು ಬಿಡುಗಡೆಯಾಗುವ ಮುನ್ನವೇ, ಕನ್ನಡದಲ್ಲಿ 'ಮೆಟಡೊರ್​' ಎಂಬ ಇನ್ನೊಂದು ಆ್ಯಂಥಾಲಜಿ ಸಿನಿಮಾ ಸಿದ್ಧವಾಗಿದೆ. ಈ ಶುಕ್ರವಾರ (ಜೂನ್​ 03) ಬಿಡುಗಡೆಯಾಗುತ್ತಿದೆ.

'ಮೆಟಡೊರ್​' ನಿರ್ದೇಶಿಸಿರುವವರು ಸುದರ್ಶನ್​ ಜಿ ಶೇಖರ್​. ನಿರ್ಮಿಸಿದವರು ಕಿರಣ್​ ಕುಮಾರ್​. ಇದೊಂದು ಸಂಪೂರ್ಣ ಹೊಸಬರ ಚಿತ್ರ. ಕವಿತಾ ಗೌಡ ಒಂದು ಪ್ರಮೋಷನಲ್​ ಹಾಡಿನಲ್ಲಿ ಕಾಣಿಸಿಕೊಂಡಿರುವುದು ಬಿಟ್ಟರೆ, ಮಿಕ್ಕಂತೆ ಸಂಪೂರ್ಣ ಹೊಸಬರೇ ತುಂಬಿದ್ದಾರೆ.

'ಇದೊಂದು ಕರ್ಮದ ಕುರಿತಾದ ಚಿತ್ರ. ಐದು ಕಥೆಗಳಿವೆ. ಐದೂ ಬೇರೆಬೇರೆ ಜಾನರ್​ನ ಕಥೆಗಳು. ಯಾವುದೇ ಪಾತ್ರಗಳು ಪರಸ್ಪರ ಸಂಧಿಸುವುದಿಲ್ಲ. ಆದರೆ, ಐದೂ ಕಥೆಗಳು ಇಂಟರ್​ಕನೆಕ್ಟ್​ ಆಗುತ್ತವೆ. ಮೈಸೂರಿನ ಸುತ್ತಮುತ್ತ ಚಿತ್ರೀಕರಣ ಮಾಡಿದ್ದೇವೆ. ಒಂದು ಮೆಟಡೊರ್​ ಇಟ್ಟುಕೊಂಡು ಚಿತ್ರದ ಪ್ರಚಾರ ಮಾಡುತ್ತಿದ್ದೇವೆ' ಎನ್ನುತ್ತಾರೆ ಸುದರ್ಶನ್​.

'ಮೆಟಡೊರ್​'ನಲ್ಲಿ ಕಿರಣ್​ ಕುಮಾರ್​, ರವಿ ಮೈಸೂರು, ಶ್ರೇಯಾ, ವಿಠಲ್​ ಭಟ್​ ಮುಂತಾದವರು ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net