ಐಸ್​ ಕ್ರೀಮ್​ ಮೇಲೆ ಹಸ್ತಮೈಥುನ ಮಾಡಿ ಮಾರಾಟ! ಈ ವಿಕೃತ ವ್ಯಾಪಾರಿಗೆ ಮಹಿಳೆಯರೇ ಟಾರ್ಗೆಟ್​

2 Min Read
Ice Cream Vendor (1)

ವಾರಂಗಲ್​: ಈ ಪ್ರಪಂಚದಲ್ಲಿ ಎಂತೆಂಥಾ ವಿಚಿತ್ರ ಹಾಗೂ ದುಷ್ಟ ಜನರಿದ್ದಾರೆ ಎಂಬುದಕ್ಕೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿರುವ ವಿಡಿಯೋ ತಾಜಾ ನಿದರ್ಶನವಾಗಿದೆ. ತೆಲಂಗಾಣದ ವಾರಂಗಲ್​ನಲ್ಲಿ ನಡೆದಿರುವ ಈ ಘಟನೆ ಎಷ್ಟು ಅಸಹ್ಯವಾಗಿದೆ ಅಂದರೆ, ಎಂಥವರ ಮುಖದಲ್ಲೂ ಒಮ್ಮೆ ಕೋಪ ಬರಿಸುತ್ತದೆ.

ಹಸ್ತಮೈಥುನ ಮಾಡಿ ಐಸ್​ ಕ್ರೀಮ್​ ಮೇಲೆ ಸ್ಖಲನ ಮಾಡುತ್ತಿದ್ದ ದುಷ್ಟ ವ್ಯಾಪಾರಿಯೊಬ್ಬನನ್ನು ತೆಲಂಗಾಣದ ವಾರಂಗಲ್​ ಪೊಲೀಸರು ಬಂಧಿಸಿದ್ದಾರೆ. ಅಸಹ್ಯ ಹುಟ್ಟಿಸುವ ವಿಡಿಯೋ ವೈರಲ್​ ಆದ ಬಳಿಕ ಕಾಮುಕ ವ್ಯಾಪಾರಿಯನ್ನು ಬಂಧಿಸಿ, ಕಂಬಿ ಹಿಂದೆ ತಳ್ಳಲಾಗಿದೆ.

ಬಂಧಿತನನ್ನು ಕಲುರಾಮ್​ ಕುರ್ಬಿಯಾ ಎಂದು ಗುರುತಿಸಲಾಗಿದೆ. ಈತ ರಾಜಸ್ಥಾನದ ನಿವಾಸಿ. ಆರೋಪಿ ಕಲೂರಾಮ್ ವಾರಂಗಲ್​ನ​ ನೆಕೊಂಡೈಲ್ ಪ್ರದೇಶದ ರಸ್ತೆಬದಿಯಲ್ಲಿ ಬಹಳ ದಿನಗಳಿಂದ ಐಸ್ ಕ್ರೀಮ್ ಮಾರಾಟ ಮಾಡುತ್ತಿದ್ದಾನೆ. ಮಹಿಳೆಯರು ಹಾಗೂ ಮಕ್ಕಳು ಈತನ ನಿತ್ಯ ಗ್ರಾಹಕರು ಎನ್ನುತ್ತಾರೆ ಸ್ಥಳೀಯರು.

ಎರಡು ದಿನಗಳ ಹಿಂದೆ ಈತನ ಹಸ್ತಮೈಥುನದ ವಿಡಿಯೋ ಬಿಡುಗಡೆಯಾಗಿತ್ತು. ಕೆಲವೇ ಗಂಟೆಗಳಲ್ಲಿ ಈ ವಿಡಿಯೋ ವೈರಲ್​ ಆಗಿತ್ತು. ಇದರ ಬೆನ್ನಲ್ಲೇ ದೂರು ಸಹ ದಾಖಲಾಗಿತ್ತು. ತನಿಖೆ ಆರಂಭಿಸಿದ ಪೊಲೀಸರು ಆರೋಪಿ ಕಲುರಾಮ್​ ಎಂಬುದು ಸ್ಪಷ್ಟವಾದ ಬೆನ್ನಲ್ಲೇ ಬಂಧಿಸಿದ್ದಾರೆ.

ಇದೇ ಸಂದರ್ಭದಲ್ಲಿ ಅನೇಕ ಮಂದಿ ಕಲುರಾಮ್​ ವಿರುದ್ಧ ಪ್ರತಿಭಟನೆ ಆರಂಭಿಸಿದ್ದಾರೆ. ಸಾರ್ವಜನಿಕ ಪ್ರದೇಶದಲ್ಲಿ ಅಶ್ಲೀಲತೆ ಪ್ರದರ್ಶಿಸಿದ ಆರೋಪದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕಲುರಾಮ್​ ಮಾರಾಟ ಮಾಡಿದ ಐಸ್​ ಕ್ರೀಮ್​ ಒಂದರ ಸ್ಯಾಂಪಲ್​ ಅನ್ನು ಆಹಾರ ನಿರೀಕ್ಷಕರು ಸಂಗ್ರಹ ಮಾಡಿ, ಪರೀಕ್ಷಿಸಿದ ಬಳಿಕ ತಪ್ಪು ಮಾಡಿರುವುದು ಬಯಲಾಗಿದೆ. ಬಳಿಕ ಕಲುರಾಮ್​ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

See also  ಹೊಳೆಗೆ ಹಾರಿದ್ದ ವ್ಯಾಪಾರಿ ಶವವಾಗಿ ಪತ್ತೆ : ಆತ್ಮಹತ್ಯೆಗೆ ಮೊದಲು ಸ್ನೇಹಿತರಿಗೆ ವಾಟ್ಸಾಪ್ ಸಂದೇಶ

ಆರೋಪಿ ಕಲುರಾಮ್​ ಲೈಂಗಿಕ ವಿಕೃತಿಗೆ ದಾಸನಾಗಿರುವುದಾಗಿ ಶಂಕಿಸಲಾಗಿದೆ. ಹೀಗಾಗಿ ವಾರಂಗಲ್​ ಪೊಲೀಸರು ಆತನ ಹಿನ್ನೆಲೆಯನ್ನು ಕೆದಕುತ್ತಿದ್ದಾರೆ. ಈ ಮುಂಚೆ ಆತ ವ್ಯಾಪಾರ ಮಾಡಿದ ಸ್ಥಳಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದರ ನಡುವೆ ವಿಡಿಯೋ ಈಗಲೂ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. (ಏಜೆನ್ಸೀಸ್​)

ವಿರಾಟ್​ ಕೊಹ್ಲಿಯನ್ನು ಐಪಿಎಲ್​ನಿಂದ ಬ್ಯಾನ್​ ಮಾಡ್ಬೇಕು! ಕೆ.ಎಲ್​. ರಾಹುಲ್​ ಶಾಕಿಂಗ್​ ಹೇಳಿಕೆ

ದಯವಿಟ್ಟು ನನ್ನನ್ನು ಆ ರೀತಿ ಕರೆಯಬೇಡಿ… ಅಭಿಮಾನಿಗಳ ಬಳಿ ವಿರಾಟ್​ ಕೊಹ್ಲಿ ಮನವಿ

ಬೈಕ್​ ಮುಂದೆ ಬಂದು ದಿಢೀರ್​ ನಾಪತ್ತೆ! ಹೆಲ್ಮೆಟ್​ ಕ್ಯಾಮೆರಾದಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ

Share This Article