More

  ಬೈಕ್​ ಮುಂದೆ ಬಂದು ದಿಢೀರ್​ ನಾಪತ್ತೆ! ಹೆಲ್ಮೆಟ್​ ಕ್ಯಾಮೆರಾದಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ

  ಕೊಚ್ಚಿ: ಕಾರಿನ ಹಿಂಬದಿ ಸೀಟಿನಲ್ಲಿ ಯಾರೂ ಇಲ್ಲದಿದ್ದರೂ ಎಐ ಕ್ಯಾಮೆರಾದಲ್ಲಿ ನಿಗೂಢ ಮಹಿಳೆಯ ಚಿತ್ರ ಪತ್ತೆಯಾದ ಸುದ್ದಿ ಕೆಲವು ದಿನಗಳ ಹಿಂದೆ ಕೇರಳದಲ್ಲಿ ಭಾರೀ ಸುದ್ದಿಯಾಗಿತ್ತು. ಮಹಿಳೆಯ ಚಿತ್ರಣವನ್ನು ದೆವ್ವ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಮಾಡಲಾಗಿತ್ತು. ದೆವ್ವ ಅಥವಾ ಅಗೋಚರ ಶಕ್ತಿಗಳನ್ನು ನಂಬುವ ಅನೇಕ ಜನರು ಇರುವುದರಿಂದ, ಇಂತಹ ಫೋಟೋ ಮತ್ತು ವಿಡಿಯೋಗಳು ಜಾಲತಾಣದಲ್ಲಿ ಸುಲಭವಾಗಿ ವೈರಲ್ ಆಗಿಬಿಡುತ್ತದೆ.

  ಇದೀಗ ವಿಡಿಯೋವೊಂದು ವೈರಲ್​ ಆಗುತ್ತಿದೆ. ಈ ವಿಡಿಯೋವನ್ನು ಫಿಲಿಪ್ಪೈನ್ಸ್​ನಲ್ಲಿ ಸೆರೆಹಿಡಿಯಲಾಗಿದ್ದು, ಇದೀಗ ಭಾರತದಲ್ಲಿ ಭಾರಿ ಸದ್ದು ಮಾಡುತ್ತಿದೆ. ಈ ಭಯಾನಕ ದೃಶ್ಯ ಬೈಕ್​ ಸವಾರನೊಬ್ಬನ ಹೆಲ್ಮೆಟ್​ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ರಸ್ತೆಯಲ್ಲಿ ದೆವ್ವ ನೋಡಿದ್ದಾಗಿ ಆತ ಹೇಳಿಕೊಂಡಿದ್ದಾರೆ. ಮಾರ್ಚ್​ 2ರಂದು ಈ ಘಟನೆ ನಡೆದಿದೆ.

  ರಾತ್ರಿ ಹೊತ್ತು ಖಾಲಿ ರಸ್ತೆಯಲ್ಲಿ ಬೈಕ್​ ಮುಂದೆ ಬಂದ ಆಕೃತಿ ದಿಢೀರ್​ ನಾಪತ್ತೆಯಾಗುವುದನ್ನು ವಿಡಿಯೋದಲ್ಲಿ ಕಾಣಬಹುದು. ಬೈಕ್​ ಸವಾರ ವೇಗದಿಂದ ಬರುತ್ತಿರುತ್ತಾನೆ. ಆಕೃತಿಯನ್ನು ನೋಡಿ ದಿಢೀರ್​ ಬ್ರೇಕ್​ ಹಾಕಿದರೂ ಕೂಡ ಆ ಆಕೃತಿ ಇದ್ದಕ್ಕಿದ್ದಂತೆ ನಾಪತ್ತೆಯಾಗುತ್ತದೆ. ಇದಿಷ್ಟು ದೃಶ್ಯ ಬೈಕ್​ ಸವಾರ ಹೆಲ್ಮೆಟ್​ ಕ್ಯಾಮೆರಾದಲ್ಲಿ ಸೆರೆಯಾಗಿದೆ.

  ಬ್ರೇಕ್​ ಹಾಕಿದ ಬಳಿಕ ಬೈಕ್‌ನಲ್ಲಿದ್ದವರು ಸುತ್ತಮುತ್ತ ನೋಡಿದರೂ ಯಾರೊಬ್ಬರೂ ಕಾಣುವುದಿಲ್ಲ. ಈ ವೇಳೆ ಇದ್ದಕ್ಕಿದ್ದಂತೆ ತಣ್ಣನೆಯ ಗಾಳಿ ಬೀಸಿತು ಎಂದು ಬೈಕ್ ಸವಾರ ಹೇಳಿದ್ದಾರೆ. ಇದು ದೆವ್ವ ಎಂದು ಅವರು ನಂಬಿದ್ದಾರೆ. ವೀಡಿಯೋ ವೈರಲ್ ಆದ ಬಳಿಕ ಹಲವರು ಇದನ್ನು ಎಡಿಟ್ ಮಾಡಲಾಗಿದೆಯೇ ಎಂಬ ಅನುಮಾನವನ್ನೂ ವ್ಯಕ್ತಪಡಿಸಿದ್ದಾರೆ.

  ಕೇರಳದ ಘಟನೆ ಏನು?
  ಸೀಟ್​ ಬೆಲ್ಟ್​ ಧರಿಸಿಲ್ಲ ಅಂತ ಎಐ ಚಾಲಿತ ಕ್ಯಾಮೆರಾ ಟ್ರಾಫಿಕ್​ ಉಲ್ಲಂಘನೆಯನ್ನು ಪತ್ತೆಹಚ್ಚಿತ್ತು. ಬಳಿಕ ಕಾರು ಮಾಲಿಕರಿಗೆ ಚಲನ್ ನೀಡಿದಾಗ ಎಐ ಕ್ಯಾಮೆರಾದ ಸೆರೆಹಿಡಿದಿದ್ದ ಫೋಟೋ ನೋಡಿ ಮಾಲೀಕ ಗಾಬರಿಗೊಂಡರು. ಏಕೆಂದರೆ, ಕಾರಿನಲ್ಲಿ ಇದ್ದಿದ್ದು ಇಬ್ಬರೇ, ಆದರೆ, ಚಲನ್​ನ ಫೋಟೋದಲ್ಲಿ ಮೂವರಿದ್ದು, ಇದು ನಿಗೂಢಕ್ಕೆ ಕಾರಣವಾಗಿತ್ತು. ಚೆರುವತ್ತೂರು ಮೂಲದ ಕೈತಕ್ಕಾಡ್ ಮೂಲದ ಆದಿತ್ಯನ್ ಸೀಟ್ ಬೆಲ್ಟ್ ಧರಿಸದೆ ವಾಹನ ಚಲಾಯಿಸಿದ್ದಕ್ಕಾಗಿ ದಂಡ ವಿಧಿಸಲಾಗಿತ್ತು. ಪಯ್ಯನ್ನೂರಿನಲ್ಲಿ ಅಳವಡಿಸಲಾಗಿದ್ದ ಎಐ ಕ್ಯಾಮೆರಾದಲ್ಲಿ ನಿಗೂಢ ಮಹಿಳೆಯ ಚಿತ್ರ ಸೆರೆಯಾಗಿತ್ತು. ಟ್ರಾಫಿಕ್​ ಪೊಲೀಸರು ನೀಡಿರುವ ನೋಟೀಸ್‌ನಲ್ಲಿರುವ ಚಿತ್ರವು ಕಾರಿನ ಹಿಂಬದಿಯ ಸೀಟಿನಲ್ಲಿ ಇನ್ನೊಬ್ಬ ಮಹಿಳೆಯ ಆಕೃತಿಯನ್ನು ತೋರಿಸುತ್ತದೆ. ಆದರೆ ಅಂತಹ ವ್ಯಕ್ತಿ ಕಾರಿನಲ್ಲಿರಲಿಲ್ಲ ಎಂದು ಆದಿತ್ಯನ್ ಮತ್ತು ಆತನ ಕುಟುಂಬದವರು ವಾದಿಸಿದ್ದರು. ಹಾಗದರೆ ಆ ಮಹಿಳೆ ಯಾರು ಎಂಬುದು ದೊಡ್ಡ ಪ್ರಶ್ನೆಯಾಗಿತ್ತು ಮತ್ತು ಕೇರಳದಲ್ಲಿ ಭಾರಿ ಚರ್ಚೆಯಾಗಿತ್ತು. (ಏಜೆನ್ಸೀಸ್​)

  ವಿರಾಟ್​ ಕೊಹ್ಲಿಯನ್ನು ಐಪಿಎಲ್​ನಿಂದ ಬ್ಯಾನ್​ ಮಾಡ್ಬೇಕು! ಕೆ.ಎಲ್​. ರಾಹುಲ್​ ಶಾಕಿಂಗ್​ ಹೇಳಿಕೆ

  ಕಾರಿನೊಳಗೆ ಇರಲೇ ಇಲ್ಲ ಮಹಿಳೆ ಆದ್ರೂ AI ಕ್ಯಾಮೆರಾದಲ್ಲಿ ಸೆರೆ! ಹಾಗಾದ್ರೆ ಯಾರು ಆಕೆ? ಏನಿದು ನಿಗೂಢ?

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts