More

    ಕಾರಿನೊಳಗೆ ಇರಲೇ ಇಲ್ಲ ಮಹಿಳೆ ಆದ್ರೂ AI ಕ್ಯಾಮೆರಾದಲ್ಲಿ ಸೆರೆ! ಹಾಗಾದ್ರೆ ಯಾರು ಆಕೆ? ಏನಿದು ನಿಗೂಢ?

    ಕಣ್ಣೂರು: ಕೇರಳದಲ್ಲೊಂದು ವಿಚಿತ್ರ ಪ್ರಕರಣ ವರದಿಯಾಗಿದೆ. ಸೀಟ್​ ಬೆಲ್ಟ್​ ಧರಿಸಿಲ್ಲ ಅಂತ ಎಐ ಚಾಲಿತ ಕ್ಯಾಮೆರಾ ಟ್ರಾಫಿಕ್​ ಉಲ್ಲಂಘನೆಯನ್ನು ಪತ್ತೆಹಚ್ಚಿತ್ತು. ಬಳಿಕ ಕಾರು ಮಾಲಿಕರಿಗೆ ಚಲನ್ ನೀಡಿದಾಗ ಎಐ ಕ್ಯಾಮೆರಾದ ಸೆರೆಹಿಡಿದಿದ್ದ ಫೋಟೋ ನೋಡಿ ಗಾಬರಿಗೊಂಡಿದ್ದಾರೆ. ಏಕೆಂದರೆ, ಕಾರಿನಲ್ಲಿ ಇದ್ದಿದ್ದು ಇಬ್ಬರೇ, ಆದರೆ, ಚಲನ್​ನ ಫೋಟೋದಲ್ಲಿ ಮೂವರಿದ್ದು, ಇದು ನಿಗೂಢಕ್ಕೆ ಕಾರಣವಾಗಿದೆ.

    ಚೆರುವತ್ತೂರು ಮೂಲದ ಕೈತಕ್ಕಾಡ್ ಮೂಲದ ಆದಿತ್ಯನ್ ಸೀಟ್ ಬೆಲ್ಟ್ ಧರಿಸದೆ ವಾಹನ ಚಲಾಯಿಸಿದ್ದಕ್ಕಾಗಿ ದಂಡ ವಿಧಿಸಲಾಗಿದೆ. ಪಯ್ಯನ್ನೂರಿನಲ್ಲಿ ಅಳವಡಿಸಲಾಗಿದ್ದ ಎಐ ಕ್ಯಾಮೆರಾದಲ್ಲಿ ಈ ಮೇಲಿನ ಚಿತ್ರ ಸೆರೆಯಾಗಿದೆ. ಟ್ರಾಫಿಕ್​ ಪೊಲೀಸರು ನೀಡಿರುವ ನೋಟೀಸ್‌ನಲ್ಲಿರುವ ಚಿತ್ರವು ಕಾರಿನ ಹಿಂಬದಿಯ ಸೀಟಿನಲ್ಲಿ ಇನ್ನೊಬ್ಬ ಮಹಿಳೆಯ ಆಕೃತಿಯನ್ನು ತೋರಿಸುತ್ತದೆ. ಆದರೆ ಅಂತಹ ವ್ಯಕ್ತಿ ಕಾರಿನಲ್ಲಿರಲಿಲ್ಲ ಎಂದು ಆದಿತ್ಯನ್ ಮತ್ತು ಆತನ ಕುಟುಂಬದವರು ವಾದಿಸಿದ್ದಾರೆ. ಹಾಗದರೆ ಆ ಮಹಿಳೆ ಯಾರು ಎಂಬುದು ಇದೀಗ ದೊಡ್ಡ ಪ್ರಶ್ನೆಯಾಗಿದೆ.

    ಚಲನ್ ಮೇಲೆ ವಾಹನದಲ್ಲಿ ಇಲ್ಲದವರ ಫೋಟೋ ಮುದ್ರಿಸಿರುವುದು ಮೋಟಾರು ವಾಹನ ಇಲಾಖೆಗೂ ಗೊಂದಲ ಮೂಡಿಸಿದೆ. ಚೆರುವತ್ತೂರಿನಿಂದ ಪಯ್ಯನ್ನೂರಿಗೆ ಹೋಗುವ ಮಾರ್ಗಮಧ್ಯೆ ಕೆಲೋತ್ತುವಿನಲ್ಲಿದ್ದ ಎಐ ಕ್ಯಾಮೆರಾದಲ್ಲಿ ಇದನ್ನು ಸೆರೆಹಿಡಿಯಲಾಗಿದೆ. ಕಾರಿನಲ್ಲಿದ್ದ ಆದಿತ್ಯನ್, ಆತನ ತಾಯಿ ಮತ್ತು ಸಹೋದರಿ ಸೀಟ್ ಬೆಲ್ಟ್ ಧರಿಸಿರಲಿಲ್ಲ. ಕಾರಿನ ಹಿಂದಿನ ಸೀಟಿನಲ್ಲಿ ಇಬ್ಬರು ಮಕ್ಕಳಿದ್ದರು. ಆದರೆ, ಚಲನ್‌ನಲ್ಲಿರುವ ಚಿತ್ರದಲ್ಲಿ ಅವರು ಕಾಣಿಸುತ್ತಿಲ್ಲ. ಬದಲಾಗಿ ಇನ್ನೊಬ್ಬ ಮಹಿಳೆ ಹಿಂದಿನ ಸೀಟಿನಲ್ಲಿ ಕುಳಿತಿರುವುದನ್ನು ಕಾಣಬಹುದು. ಆದರೆ ಕಾರಿನಲ್ಲಿ ಅಂತಹ ವ್ಯಕ್ತಿ ಇರಲಿಲ್ಲ ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ.

    ಬಹುಶಃ ಇದು ಮುಂದಿನ ಸೀಟಿನಲ್ಲಿ ಕುಳಿತ ಮಹಿಳೆಯ ಪ್ರತಿಬಿಂಬವಾಗಿರಬಹುದು ಅಥವಾ ಎಐ ಕ್ಯಾಮೆರಾದಲ್ಲಿ ಸೆರೆಯಾದ ಮತ್ತೊಂದು ವಾಹನದಲ್ಲಿದ್ದ ಮಹಿಳೆಯ ಚಿತ್ರವು ತಾಂತ್ರಿಕ ದೋಷದಿಂದ ಆದಿತ್ಯನ್ ಪಡೆದ ಚಲನ್‌ನಲ್ಲಿ ಅಚ್ಚು ಹಾಕಿರಬಹುದು ಎಂದು ಮೋಟಾರು ವಾಹನ ಇಲಾಖೆ ಶಂಕಿಸಿದೆ. ಈ ಸಂಬಂಧ ತನಿಖೆ ನಡೆಯುತ್ತಿದೆ.

    ಇದರ ನಡುವೆ ಕಾರಿನಲ್ಲಿರುವ ಹೆಣ್ಣಿನ ಕುರಿತು ನಾನಾ ಚರ್ಚೆಗಳು ನಡೆಯುತ್ತಿವೆ. ಚಿತ್ರದಲ್ಲಿ ಭೂತದ ಆಕೃತಿ ಸೆರೆಯಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನಡೆಯುತ್ತಿದೆ. ಇತ್ತೀಚೆಗಷ್ಟೇ ಆ ಪ್ರದೇಶದಲ್ಲಿ ಸಾವನ್ನಪ್ಪಿದ ಮಹಿಳೆಯ ರೂಪವೇ ಎಂದು ನಕಲಿ ಆಡಿಯೋ ಕೂಡ ಹರಿದಾಡುತ್ತಿದೆ. (ಏಜೆನ್ಸೀಸ್​)

    ಚಾಮರಾಜನಗರದಲ್ಲಿ ಅರಣ್ಯ ಸಿಬ್ಬಂದಿ-ಕಳ್ಳಬೇಟೆಗಾರರ ನಡುವೆ ಗುಂಡಿನ ಚಕಮಕಿ: ಓರ್ವ ಸಾವು, ಬಂದೂಕು ವಶ

    ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ಬರ್ಬರ ಹತ್ಯೆ; ಸರ್ಕಾರಿ ಮಹಿಳಾ ಅಧಿಕಾರಿ ಮನೆಗೆ ನುಗ್ಗಿ ಕುತ್ತಿಗೆ ಕೊಯ್ದು ಕೊಲೆ

    ಬಿಹಾರದ ಮೇಕ್​ ಇನ್​ ಇಂಡಿಯಾ ಯಶೋಗಾಥೆ: ಸ್ಥಳೀಯ ಸಮುದಾಯಗಳ ಜೀವನಾಡಿಯಾದ ಲೋಕೋ ಕಾರ್ಖಾನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts