More

    ಬಿಹಾರದ ಮೇಕ್​ ಇನ್​ ಇಂಡಿಯಾ ಯಶೋಗಾಥೆ: ಸ್ಥಳೀಯ ಸಮುದಾಯಗಳ ಜೀವನಾಡಿಯಾದ ಲೋಕೋ ಕಾರ್ಖಾನೆ

    ಪಟನಾ: ಭಾರತವನ್ನು ಸ್ವಾವಲಂಬಿ ರಾಷ್ಟ್ರ ಮಾಡುವ ನಿಟ್ಟಿನಲ್ಲಿ ಆರಂಭಿಸಿರುವ ಮೇಕ್​ ಇನ್​ ಇಂಡಿಯಾ ಯೋಜನೆಯೂ ಯಶಸ್ಸಿನ ಹಾದಿಯತ್ತ ಮುನ್ನುಗ್ಗುತ್ತಿದೆ. ದೇಶದಲ್ಲಿ ಉದ್ಯೋಗಗಳನ್ನು ಸೃಷ್ಟಿಸಿ ಸ್ಥಳೀಯತೆಯನ್ನು ಬಲಪಡಿಸಲು ಸಹಕಾರಿಯಾಗಿರುವ ಈ ಅದ್ಭುತ ಯೋಜನೆಯ ಯಶಸ್ಸಿಗೆ ಬಿಹಾರದ ಮಾಧೇಪುರ ಒಂದು ತಾಜಾ ಉದಾಹರಣೆಯಾಗಿದೆ.

    ಮಾಧೇಪುರ ಎಲೆಕ್ಟ್ರಿಕ್ ಲೋಕೋಮೋಟಿವ್ ಪ್ರೈವೆಟ್ ಲಿಮಿಟೆಡ್ (ಎಂಇಎಲ್​ಪಿಎಲ್​) ಕಂಪನಿಯನ್ನು ಭಾರತೀಯ ರೈಲ್ವೆ ಇಲಾಖೆ ಮತ್ತು ಫ್ರಾನ್ಸ್​ನ ಪ್ರಮುಖ ತಯಾರಕಾ ಕಂಪನಿ ಅಲ್‌ಸ್ಟೋಮ್ ನಡುವೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಈಶಾನ್ಯ ಬಿಹಾರದಲ್ಲಿ ನಿರ್ಮಿಸಲಾಗಿದೆ. ಭಾರತ ಸರ್ಕಾರದ ಮೇಕ್ ಇನ್ ಇಂಡಿಯಾ ಯೋಜನೆ ಉಪಕ್ರಮಕ್ಕೆ ಅನುಗುಣವಾಗಿ, ಅಲ್‌ಸ್ಟೋಮ್ ಕಂಪನಿ ಮಾಧೇಪುರದಲ್ಲಿ ಭಾರೀ ಸಾಗಣೆ ಉದ್ದೇಶಗಳಿಗಾಗಿ ಸುಮಾರು 12,000 ಹಾರ್ಸ್​ಪವರ್​ (ಎಚ್​ಪಿ) ಲೋಕೋಗಳನ್ನು ತಯಾರಿಸುತ್ತಿದೆ. ಈ ವರ್ಷದ ಸೆಪ್ಟೆಂಬರ್​ವರೆಗೆ 360 ಹೆಚ್ಚಿನ ಹಾರ್ಸ್​ಪವರ್​ (ಎಚ್​ಪಿ) ಲೋಕೋಗಳನ್ನು ಈಗಾಗಲೇ ಹೊರತಂದಿದೆ.

    ಸ್ಥಳೀಯರಿಗೆ ಉದ್ಯೋಗಾವಕಾಶ
    ಈ ಅತ್ಯಾಧುನಿಕ ಕಾರ್ಖಾನೆಯು ಸಾಕಷ್ಟು ಸ್ಥಳೀಯ ಉದ್ಯೋಗವನ್ನು ಸೃಷ್ಟಿ ಮಾಡಿದೆ. ಪುರುಷರು ಮಾತ್ರವಲ್ಲದೆ, ಮಹಿಳೆಯರಿಗೂ ಉದ್ಯೋಗಾವಕಾಶ ದೊರೆತಿದ್ದು, ಸಂಜನಾ ಎಂಬಾಕೆ ಮನೆಯಿಂದ ಹೊರಬಂದು ಈ ಆಧುನಿಕ ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿದ ಮೊದಲ ಯುವತಿ ಎನಿಸಿಕೊಂಡಿದ್ದಾಳೆ. ಈ ಕಾರ್ಖಾನೆಯಲ್ಲಿ ಕೆಲಸ ಮಾಡಿದ ನಂತರ ನಾನು ಇಂಗ್ಲಿಷ್‌ನಲ್ಲಿ ಮಾತನಾಡಲು ಕಲಿತಿದ್ದೇನೆ ಮತ್ತು ತಾಂತ್ರಿಕ ಜ್ಞಾನವನ್ನು ಪಡೆದುಕೊಂಡೆ ಎಂದು ಧೃಡಸಂಕಲ್ಪದಿಂದ ಸಂಜನಾ ಹೇಳಿದರು. ಬಿಹಾರದ ದೂರದ ಪಟ್ಟಣದಲ್ಲಿರುವ ವಿಸ್ತಾರವಾದ ಎಲೆಕ್ಟ್ರಿಕ್ ಇಂಜಿನ್ ಫ್ಯಾಕ್ಟರಿಯಲ್ಲಿ ಮೊದಲ ಶಿಫ್ಟ್‌ನಲ್ಲಿ ಕರ್ತವ್ಯಕ್ಕೆ ಸೇರಿದ ಗುಡಿಯಾ, ರೋಹಿತ್, ಪ್ರೀತಿ ಮತ್ತು ಬಿಪಿನ್ ಸೇರಿದಂತೆ ಸಂಜನಾರಂತಹ ಅನೇಕರು ಇದ್ದಾರೆ.

    Loco 2

    ಹಿಂದೆಂದೂ ಕಾರ್ಖಾನೆಯನ್ನೇ ನೋಡದಿದ್ದ ನನಗೆ ಆರಂಭದಲ್ಲಿ ಸ್ವಲ್ಪ ಆತಂಕವಿತ್ತು’ ಎನ್ನುತ್ತಾರೆ ಮಾಧೇಪುರ ಲೋಕೋ ಸೌಲಭ್ಯದಲ್ಲಿ ಕೆಲಸ ಮಾಡುವ ಗುಡಿಯಾ. ಈಕೆ ಹತ್ತಿರದ ಗ್ರಾಮದವಳಾಗಿದ್ದು, ಸಹಾಯಕಳಾಗಿ ಕೆಲಸ ಮಾಡುತ್ತಿದ್ದಾರೆ. ಸಂಜನಾ ಕೂಡ ಆರಂಭದಲ್ಲಿ ಆತಂಕಕ್ಕೆ ಒಳಗಾಗಿದ್ದರು. ಆದರೆ, ಸಿಬ್ಬಂದಿ ಹಾಗೂ ಪಾಲಕರ ಬೆಂಬಲದಿಂದ ಎಲ್ಲವನ್ನು ನಿಭಾಯಿಸಿದೆ ಎನ್ನುತ್ತಾರೆ ಸಂಜನಾ. ಅಂದಹಾಗೆ ಸಂಜನಾ, ಹತ್ತಿರದ ಗಣೇಶಸ್ಥಾನ ಗ್ರಾಮದವರು. ಆಕೆ ಮೂರು ವರ್ಷಗಳ ಹಿಂದೆ ಲೋಕೋ ಫ್ಯಾಕ್ಟರಿಯಲ್ಲಿ ಅಪ್ರೆಂಟಿಸ್ ಆಗಿ ಸೇರಿಕೊಂಡರು.

    ಬಿಹಾರದಲ್ಲಿರುವ ಅತ್ಯಂತ ಆಧುನಿಕ ಲೋಕೋ ಕಾರ್ಖಾನೆಯು ರೈಲ್ವೇ ವಲಯದಲ್ಲಿ ಅತಿ ದೊಡ್ಡ ವಿದೇಶಿ ನೇರ ಹೂಡಿಕೆಯಾಗಿದ್ದು, ದೇಶದ ಆರ್ಥಿಕತೆಯ ಮೇಲೆ ಗುಣಾತ್ಮಕ ಪರಿಣಾಮವನ್ನು ಉಂಟುಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಸ್ಥಳೀಯರ ಪ್ರಕಾರ, ಕಾರ್ಖಾನೆಯು ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ ಮಾಧೇಪುರದಲ್ಲಿ ಮಾರುಕಟ್ಟೆ ಸಂಕೀರ್ಣವೂ ಸಹ ಬಂದಿತು ಎನ್ನುತ್ತಾರೆ. ಇಲ್ಲಿ ಮೊದಲು ಒಂದು ಸರಿಯಾದ ಮಾರುಕಟ್ಟೆಯೂ ಇರಲಿಲ್ಲ ಮತ್ತು ಜನರು ಎಲ್ಲದಕ್ಕೂ ರಾಜಧಾನಿ ಪಾಟನಾಗೆ ಹೋಗಬೇಕಾಗಿತ್ತು ಎನ್ನುತ್ತಾರೆ.

    ಸುರಕ್ಷತೆ, ಸಮಯಪಾಲನೆ ಮತ್ತು ಸಮಯೋಚಿತ ವಿತರಣೆಯು ಕಾರ್ಖಾನೆಯ ಸಿಬ್ಬಂದಿಗೆ ನಿತ್ಯ ನಿಯಮಗಳಾಗಿವೆ ಮತ್ತು ತಂತ್ರಜ್ಞಾನವನ್ನು ಹೆಚ್ಚಿಸಲು ನಿಯಮಿತ ಪ್ರಯತ್ನಗಳು ನಡೆಯುತ್ತಿವೆ. ಎಂಇಎಲ್​ಪಿಎಲ್ ಕಂಪನಿಯು ಫ್ರಾನ್ಸ್​ನ ಅಲ್‌ಸ್ಟೋಮ್ ಮತ್ತು ಭಾರತೀಯ ರೈಲ್ವೆ ಇಲಾಖೆ ನಡುವಿನ ಜಂಟಿ ಉದ್ಯಮವಾಗಿದ್ದು, ಕ್ರಮವಾಗಿ ಶೇ. 74 ಮತ್ತು 26ರಷ್ಟು ಈಕ್ವಿಟಿ ಪಾಲನ್ನು ಹೊಂದಿದೆ.

    ವಿಶ್ವದ ಆರನೇ ದೇಶ
    ನಾವು ಮಾಧೇಪುರದಲ್ಲಿರುವ ನಮ್ಮ ಉತ್ಪಾದನಾ ತಾಣವನ್ನು ‘ಮೇಕ್ ಇನ್ ಇಂಡಿಯಾ’ದ ಪ್ರಬಲವಾದ ಅನುಮೋದನೆಗಳಲ್ಲಿ ಒಂದೆಂದು ಪರಿಗಣಿಸುತ್ತೇವೆ. ಈ ಶಕ್ತಿಶಾಲಿ ಇ-ಲೋಕಗಳನ್ನು ದೇಶೀಯವಾಗಿ ತಯಾರಿಸುವ ಮೂಲಕ, ಹೆಚ್ಚಿನ ಹಾರ್ಸ್​ಪವರ್​ ಇಂಜಿನ್‌ಗಳನ್ನು ಸ್ಥಳೀಯವಾಗಿ ಉತ್ಪಾದಿಸುವ ವಿಶ್ವದ ಆರನೇ ದೇಶವಾಗಿದೆ ಎಂದು ಅಲ್ಸ್ಟೋಮ್ ಇಂಡಿಯಾ (ರೋಲಿಂಗ್ ಸ್ಟಾಕ್ & ಕಾಂಪೊನೆಂಟ್ಸ್) ದ ಮ್ಯಾನೇಜಿಂಗ್ ಡೈರೆಕ್ಟರ್ ಅನಿಲ್ ಸೈನಿ ಹೇಳಿದರು.

    Loco 1

    ಈ ಮಾಧೇಪುರ ಕಾರ್ಖಾನೆಯಲ್ಲಿ ತಿಂಗಳಿಗೆ ಸುಮಾರು ಒಂಬತ್ತರಿಂದ 10 ಲೋಕೋಗಳನ್ನು ತಯಾರಿಸಲಾಗುತ್ತಿದೆ. ಒಂದು ವರ್ಷದಲ್ಲಿ 100 ಲೋಕೋ ನಿರ್ಮಾಣದ ಗುರಿ ಇದೆ. ಸುಮಾರು 326 ಎಕರೆ ವಿಶಾಲ ಪ್ರದೇಶದಲ್ಲಿ ಆಧುನಿಕ ಲೋಕೋ ಕಾರ್ಖಾನೆಯು 120 ಎಕರೆಗಳು ಮತ್ತು ಸಿಬ್ಬಂದಿ ಕಾಲನಿ 90 ಎಕರೆಗಳನ್ನು ಆಕ್ರಮಿಸಿಕೊಂಡಿದೆ. ಶ್ರೀಪುರ, ಚಕ್ಲಾ, ಗಣೇಶಸ್ಥಾನ ಮತ್ತು ತುನಿಯಾಹಿ ಸೇರಿದಂತೆ ಸಮೀಪದ ಏಳು ಗ್ರಾಮಗಳಿಂದ ಹೆಚ್ಚಿನ ಭೂಮಿಯನ್ನು ಕಾರ್ಖಾನೆಗಾಗಿ ಸ್ವಾಧೀನಪಡಿಸಿಕೊಳ್ಳಲಾಗಿದೆ.

    ಸ್ಥಳೀಯರಿಗೆ ಆರ್ಥಿಕ ಬಲ
    ಶಿಕ್ಷಣ, ಆರೋಗ್ಯ ರಕ್ಷಣೆ, ಮಹಿಳಾ ಸಬಲೀಕರಣ ಮತ್ತು ಸ್ಥಳೀಯ ಸಮುದಾಯಗಳನ್ನು ಬೆಂಬಲಿಸಲು ಕೌಶಲ್ಯಗಳನ್ನು ಒಳಗೊಂಡಂತೆ ಈ ಲೋಕೋ ಕಾರ್ಖಾನೆಯಿಂದ ಮಾಧೇಪುರ ಮತ್ತು ಸುತ್ತಮುತ್ತಲಿನ ಏಳು ಹಳ್ಳಿಗಳಲ್ಲಿ ಸಮುದಾಯವನ್ನು ಉನ್ನತೀಕರಿಸುವಲ್ಲಿ ನಾವು ಸಕ್ರಿಯವಾಗಿ ಹೂಡಿಕೆ ಮಾಡುತ್ತಿದ್ದೇವೆ ಎಂದು ಹೇಳಿದ ಸೈನಿ, ಈ ಪ್ರದೇಶದಲ್ಲಿನ ನಮ್ಮ ಉಪಕ್ರಮಗಳು ಮೂಲಕ ನಾವು 25,000ಕ್ಕೂ ಅಧಿಕ ಜನರ ಜೀವನವನ್ನು ಸುಧಾರಿಸಿದ್ದೇವೆ ಎಂದರು.

    ಈ ಕಾರ್ಖಾನೆಯು 2028 ರವರೆಗೆ ರೈಲ್ವೆ ಇಲಾಖೆಗೆ ಒಟ್ಟು 800 ಎಲೆಕ್ಟ್ರಿಕ್ ಲೋಕೋಗಳನ್ನು ತಯಾರಿಸಿ ತಲುಪಿಸುವ ನಿರೀಕ್ಷೆಯನ್ನು ಹೊಂದಿದೆ. (ಏಜೆನ್ಸೀಸ್​)

    ತೀವ್ರ ಹದಗೆಟ್ಟ ದೆಹಲಿ ಗಾಳಿ: ಆವರಿಸಿರುವ ಹೊಗೆಗೆ ಕೆಂಪುಕೋಟೆಯೂ ಕಣ್ಮರೆ, ಡ್ರೋನ್​ ಕ್ಯಾಮೆರಾದಲ್ಲಿ ಭೀಕರ ದೃಶ್ಯ ಸೆರೆ

    ದೀಪಾವಳಿ ಗಿಫ್ಟ್​; ಉದ್ಯೋಗಿಗಳಿಗೆ ಬುಲೆಟ್ ಬೈಕ್‌, ಎಲ್​​ಇಡಿ ಟಿವಿ, ಬಟ್ಟೆಗಳನ್ನು ಉಡುಗೊರೆಯಾಗಿ ನೀಡಿದ ಚಹಾ ತೋಟದ ಮಾಲೀಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts