ದೀಪಾವಳಿ ಗಿಫ್ಟ್​; ಉದ್ಯೋಗಿಗಳಿಗೆ ಬುಲೆಟ್ ಬೈಕ್‌, ಎಲ್​​ಇಡಿ ಟಿವಿ, ಬಟ್ಟೆಗಳನ್ನು ಉಡುಗೊರೆಯಾಗಿ ನೀಡಿದ ಚಹಾ ತೋಟದ ಮಾಲೀಕ

blank

ತಮಿಳುನಾಡು: ದೀಪಾವಳಿ ಎಂದರೆ ಬೆಳಕಿನ ಹಬ್ಬ. ಇಂತಹ ಹಬ್ಬವನ್ನು ಹೆಚ್ಚು ಸಂತೋಷದಿಂದ ಆಚರಿಸಲು ಅನೇಕ ಕಂಪನಿಗಳು ಮತ್ತು ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಉಡುಗೊರೆಗಳನ್ನು ನೀಡುತ್ತಾರೆ. ಹೀಗೆ ನೀಲಗಿರಿಯ ಎಸ್ಟೇಟ್ ಮಾಲೀಕರೊಬ್ಬರು ತಮ್ಮ ಉದ್ಯೋಗಿಗಳಿಗೆ ಬೈಕ್‌ಗಳು, ಎಲ್‌ಸಿಡಿ ಟೆಲಿವಿಷನ್ ಸೆಟ್‌ಗಳು ಮತ್ತು ನಗದು ಬೋನಸ್‌ಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ದೀಪಾವಳಿಯನ್ನು ಸ್ವಲ್ಪ ಪ್ರಕಾಶಮಾನವಾಗಿ ಮಾಡಿದ್ದಾರೆ.

ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೋಟಗಿರಿ ಪ್ರದೇಶದಲ್ಲಿ 315 ಎಕರೆ ಚಹಾ ತೋಟವನ್ನು ಬೆಳೆಯಲಾಗುತ್ತಿದೆ. ಇದರ ಮಾಲೀಕರಾಗಿರುವ ಶಿವಕುಮಾರ್ ಎಂಬ 42 ವರ್ಷದ ವ್ಯಕ್ತಿ 10 ವರ್ಷಗಳ ಹಿಂದೆ 60 ಎಕರೆಯಲ್ಲಿ ಚಹಾ ಕೃಷಿ ಆರಂಭಿಸಿದ್ದರು. ಕಠಿಣ ಪರಿಶ್ರಮ ಮತ್ತು ಉತ್ತಮ ಫಲಿತಾಂಶದೊಂದಿಗೆ, ಈಗ 315 ಎಕರೆಗೆ ಕೃಷಿಯನ್ನು ವಿಸ್ತರಿಸಲಾಗಿದೆ. ಗಾರ್ಮೆಂಟ್ಸ್ ಉತ್ಪನ್ನಗಳನ್ನೂ ಆರಂಭಿಸಿದ್ದಾರೆ. ಅಲ್ಲಿಯೂ ಯಶಸ್ವಿಯಾದರು.. ಅದರೊಂದಿಗೆ ಹಲವು ಉದ್ಯಮಗಳನ್ನೂ ಆರಂಭಿಸಿದರು.

ತಮ್ಮ ಯಶಸ್ಸಿನಲ್ಲಿ ಹಾದಿಯಲ್ಲಿ ಬಹುದಿನಗಳಿಂದ ದುಡಿಯುತ್ತಿರುವ ಸಿಬ್ಬಂದಿಗೂ ಕಷ್ಟವಾಗುತ್ತಿರುವುದನ್ನು ಮನಗಂಡ ಮಾಲೀಕರು ಅವರ ಅಡಿಯಲ್ಲಿ ಕೆಲಸ ಮಾಡುವ 15 ನಿರ್ವಾಹಕರು ಮತ್ತು ಮೇಲ್ವಿಚಾರಕರಿಗೆ ಬುಲೆಟ್ ಬೈಕ್‌ಗಳನ್ನು, ದುಬಾರಿ ಬೆಲೆಯ ಎಲ್ ಇಡಿ ಟಿವಿಗಳನ್ನೂ ನೀಡಲಾಗಿದೆ. ಅಲ್ಲದೆ, ಅವರೊಂದಿಗೆ ಕೆಲಸ ಮಾಡುವ ಇತರ 625 ಸಣ್ಣ ಪ್ರಮಾಣದ ಸಿಬ್ಬಂದಿಗೆ ಟಿವಿಗಳು ಮತ್ತು ಬಟ್ಟೆಗಳನ್ನು ಒದಗಿಸಲಾಗಿದೆ.

ಈ ಮೂಲಕ ತಮಿಳುನಾಡಿನ ಸಾಮಾಜಿಕ ಜಾಲತಾಣದಲ್ಲಿ ಶಿವಕುಮಾರ್ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ತಮ್ಮ ಸಿಬ್ಬಂದಿಯ ಶ್ರಮವನ್ನು ಮಾತ್ರ ಬಳಸಿಕೊಳ್ಳುವ ಉದ್ಯೋಗದಾತರಿಗೆ ಶಿವಕುಮಾರ್ ಸಾಮಾಜಿಕ ಜಾಲತಾಣದಲ್ಲಿ ರಿಯಲ್ ಹೀರೋ ಎಂದು ಹೇಳಿದ್ದಾರೆ.

ಹರಿಯಾಣದ ಫಾರ್ಮಾ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ಕಾರುಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ಅಚ್ಚರಿ ಮೂಡಿಸಿದೆ. ಹರಿಯಾಣದ ಪಂಚಕುಲದಲ್ಲಿರುವ ಫಾರ್ಮಾ ಕಂಪನಿಯೊಂದರ ನಿರ್ದೇಶಕ ಎಂಕೆ ಭಾಟಿಯಾ ತಮ್ಮ ಉದ್ಯೋಗಿಗಳಿಗೆ ಟಾಟಾ ಪಂಚ್ ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಕಂಪನಿಯ 12 ಉದ್ಯೋಗಿಗಳನ್ನು ‘ಸ್ಟಾರ್ ಪರ್ಫಾಮರ್ಸ್’ ಎಂದು ಗುರುತಿಸಿ ಅವರಿಗೆ ದೀಪಾವಳಿ ಬಂಪರ್ ಉಡುಗೊರೆಯಾಗಿ ಕಾರುಗಳನ್ನು ನೀಡಿದರು. ಆದರೆ, ಆ 12 ಮಂದಿಯಲ್ಲಿ ಒಬ್ಬ ಆಫೀಸ್ ಬಾಯ್ ಇದ್ದಾನೆ. ಭವಿಷ್ಯದಲ್ಲಿ ಇನ್ನೂ ಕೆಲವು ಉದ್ಯೋಗಿಗಳಿಗೆ ಕಾರುಗಳನ್ನು ಉಡುಗೊರೆಯಾಗಿ ನೀಡುವುದಾಗಿ ಅವರು ಈ ಸಂದರ್ಭದಲ್ಲಿ ಘೋಷಿಸಿದರು. ಸದ್ಯ ಈ ಸುದ್ದಿ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ

Share This Article

2025ರಲ್ಲಿ ಈ 3 ರಾಶಿಯವರಿಗೆ ರಾಜಯೋಗ!? ಅನೇಕ ರೀತಿಯಲ್ಲಿ ಹಣದ ಹರಿವು, ಐಷಾರಾಮಿ ಜೀವನ | Royal Life

Royal Life : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ…

ಜೇನುತುಪ್ಪ ಜತೆ ಹುರಿದ ಶುಂಠಿ ತಿಂದರೆ ಗಂಟಲು ನೋವು ಮಾಯಾ! ಹೀಗಿವೆ ಪ್ರಯೋಜನಗಳು

ಬೆಂಗಳೂರು: ಜೇನುತುಪ್ಪ ಮತ್ತು ಶುಂಠಿ ಆರೋಗ್ಯಕ್ಕೆ ತುಂಬಾ ಪ್ರಯೋಜನ ಎಂಬ ವಿಷಯ ಬಹುತೇಕರಿಗೆ ತಿಳಿದಿದೆ. ಈ…

ಸಾಮಾನ್ಯವಾಗಿ ಮಾಡುವ ಈ ತಪ್ಪುಗಳಿಂದಲೇ ಲೈಂಗಿಕ ಜೀವನದಲ್ಲಿ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತೆ ಎಚ್ಚರ! Relationship Tips

Relationship Tips : ಪರಸ್ಪರ ತಿಳುವಳಿಕೆಯುಳ್ಳ ಉತ್ತಮ ಲೈಂಗಿಕ ಜೀವನವು ಸಂತೋಷದ ದಾಂಪತ್ಯಕ್ಕೆ ಕಾರಣವಾಗುತ್ತದೆ. ಲೈಂಗಿಕ…