More

    ದೀಪಾವಳಿಗಾ? ಸಂಕ್ರಾಂತಿಗಾ? ‘ಮಾಸ್ಟರ್​’ ಬಿಡುಗಡೆ ಗೊಂದಲ ಮುಂದುವರೆದಿದೆ

    ತಮಿಳಿನಲ್ಲಿ ಈ ವರ್ಷದ ಬಹುನಿರೀಕ್ಷಿತ ಚಿತ್ರವೆಂದರೆ, ಅದು ವಿಜಯ್​ ಮತ್ತು ವಿಜಯ್​ ಸೇತುಪತಿ ಅಭಿನಯದ ‘ಮಾಸ್ಟರ್​’. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಚಿತ್ರ ಬಿಡುಗಡೆಯಾಗಿಯೇ ಮೂರು ತಿಂಗಳಾಗಿರಬೇಕಿತ್ತು. ಆದರೆ, ಅಷ್ಟರಲ್ಲಿ ಲಾಕ್​ಡೌನ್​ ಘೋಷಣೆಯಾಗಿದ್ದರಿಂದ, ಚಿತ್ರದ ಬಿಡುಗಡೆ ಮುಂದಕ್ಕೆ ಹೋಯಿತು.

    ಚಿತ್ರದ ರಿಲೀಸ್​ ಮುಂದಕ್ಕೇನೋ ಹೋಯಿತು? ಆ ನಂತರ ಯಾವಾಗ ಎಂದು ಚಿತ್ರತಂಡದವರಿಗೂ ಸ್ಪಷ್ಟತೆ ಇರಲಿಲ್ಲ, ವಿಜಯ್​ ಅವರ ಅಭಿಮಾನಿಗಳಿಗೂ ಇರಲಿಲ್ಲ. ಕೊನೆಗೆ ಜೂನ್​ 22ಕ್ಕೆ ಬಿಡುಗಡೆ ಮಾಡಿದರೆ ಹೇಗೆ ಎಂಬ ಯೋಚನೆ, ಚಿತ್ರತಂಡದವರಿಗೆ ಬಂತು.

    ಇದನ್ನೂ ಓದಿ: ‘ಮರ್ಡರ್​’ ಸಿನಿಮಾ ವಿವಾದದ ಬೆನ್ನಲ್ಲೇ ಆರ್​ಜಿವಿ ಕೊಟ್ಟರು ಹೀಗೊಂದು ಸ್ಪಷ್ಟನೆ

    ಜೂನ್​ 22ಕ್ಕೇ ಬಿಡುಗಡೆ ಯಾಕೆ ಎಂದರೆ ಅಂದು ವಿಜಯ್​ ಅವರ ಹುಟ್ಟುಹಬ್ಬ. ಆ ಸಂದರ್ಭದಲ್ಲಿ ಚಿತ್ರ ಬಿಡುಗಡೆ ಮಾಡಿದರೆ, ವಿಜಯ್​ ಅಭಿಮಾನಿಗಳೂ ಖುಷಿಯಾಗುತ್ತಾರೆ ಎಂಬುದು ಚಿತ್ರತಂಡದ ನಂಬಿಕೆಯಾಗಿತ್ತು. ಆದರೆ, ಬಿಡುಗಡೆಯ ದಿನಾಂಕ ಹತ್ತಿರ ಬಂದರೂ, ಲಾಕ್​ಡೌನ್​ ತೆರವಾಗಲಿಲ್ಲ. ಚಿತ್ರ ಪ್ರದರ್ಶನ ಪ್ರಾರಂಭವಾಗಲೃ ಇಲ್ಲ.

    ಈಗಲೂ ಈ ಗೊಂದಲವೇನೋ ಮುಂದುವರೆದಿದೆ. ಆದರೆ, ಚಿತ್ರತಂಡದವರು ಈ ಬಾರಿ ಎರಡು ಡೇಟ್​ಗಳನ್ನಿಟ್ಟುಕೊಂಡು, ಆ ಎರಡು ದಿನಾಂಕಗಳಂದು ಚಿತ್ರ ಬಿಡುಗಡೆ ಮಾಡುವುದಕ್ಕೆ ಯೋಚಿಸುತ್ತಿದ್ದಾರೆ. ಇಷ್ಟಕ್ಕೂ ಆ ದಿನಾಂಕ ಯಾವುದು ಎಂಬ ಪ್ರಶ್ನೆ ಸಹಜವೇ.

    ಒಂದು ಪಕ್ಷ ಸೆಪ್ಟೆಂಬರ್​ ಹೊತ್ತಿಗೆ, ದೇಶದಲ್ಲಿ ಕರೊನಾ ನಿಯಂತ್ರಣಕ್ಕೆ ಬಂದರೆ, ದೀಪಾವಳಿಗೆ (ನವೆಂಬರ್​ 14) ಚಿತ್ರ ಬಿಡುಗಡೆಯಾಗಲಿದೆಯಂತೆ. ಹಾಗೇನಾದರೂ ಆದರೆ, ಆಯುಧ ಪೂಜೆಗೆ ಚಿತ್ರದ ಟ್ರೇಲರ್​ ಬಿಡುಗಡೆ ಮಾಡಿ, ದೀಪಾವಳಿಗೆ ದೊಡ್ಡ ಮಟ್ಟದಲ್ಲಿ ಚಿತ್ರವನ್ನು ತೆರೆಗೆ ತರಬೇಕು ಎಂದು ಚಿತ್ರತಂಡ ಯೋಚಿಸಿದೆ.

    ಇದನ್ನೂ ಓದಿ: ರಜನಿ ಬಳಿಕ ದಳಪತಿ ವಿಜಯ್​ ಮನೆಗೆ ಬಾಂಬ್​ ಬೆದರಿಕೆ..

    ಒಂದು ಪಕ್ಷ ಅಷ್ಟರಲ್ಲಿ ತಹಬದಿಗೆ ಬರದಿದ್ದರೆ, ಮುಂದಿನ ಸಂಕ್ರಾಂತಿಗೆ ಚಿತ್ರವನ್ನು ಬಿಡುಗಡೆ ಮಾಡುವುದು ಚಿತ್ರತಂಡದ ಯೋಚನೆ. ಹೇಗೂ ಮುಂದಿನ ಸಂಕ್ರಾಂತಿಗೆ ಬಿಡುಗಡೆಯಾಗುವಂತಹ ಯಾವುದೇ ದೊಡ್ಡ ತಮಿಳು ಚಿತ್ರವಿಲ್ಲ. ಇದನ್ನು ಎನ್​ಕ್ಯಾಶ್​ ಮಾಡಿಕೊಳ್ಳಲು ಯೋಚಿಸಿರುವ ಚಿತ್ರತಂಡವು. ಕ್ರಿಸ್ಮಸ್​ಗೆ ಟ್ರೇಲರ್​ ಬಿಡುಗಡೆ ಮಾಡಿ, ಸಂಕ್ರಾಂತಿಗೆ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಚಿಂತನೆ ನಡೆಸಿದೆ.

    ಹೀಗೆ ಚಿತ್ರತಂಡದವರು ಎರಡೆರೆಡು ದಿನಾಂಕಗಳನ್ನಿಟ್ಟುಕೊಂಡಿದ್ದರೂ, ಸದ್ಯಕ್ಕೆ ಯಾವುದನ್ನೂ ಅಧಿಕೃತವಾಗಿ ಘೋಷಿಸಿಲ್ಲ. ಇನ್ನಷ್ಟು ದಿನ ಕಾದು ನೋಡಿ, ಆ ನಂತರ ಬಿಡುಗಡೆ ದಿನಾಂಕವನ್ನು ಘೋಷಿಸುವ ಸಾಧ್ಯತೆ ಇದೆ.

    ರಾಗಿ ಮುದ್ದೆ ತಿನ್ನೋದು ಹೇಳಿಕೊಟ್ಟಿದ್ದೇ ಡಾ. ರಾಜಕುಮಾರ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts