ದೆಹಲಿಯ ರಿಥಾಲಾ ಮೆಟ್ರೋ ನಿಲ್ದಾಣದ ಬಳಿ ಭಾರಿ ಬೆಂಕಿ ಅವಘಡ; ನೂರಾರು ಶೆಡ್ ಭಸ್ಮ, ಓರ್ವ ಸಾವು| Massive fire

ವಿಜಯವಾಣಿ - 2025-11-08T124940.532
Published on

ನವದೆಹಲಿ: ದೆಹಲಿಯ ರಿಥಾಲಾ ಮೆಟ್ರೋ ನಿಲ್ದಾಣದ ಬಳಿ ಶುಕ್ರವಾರ(ನ. 07) ರಾತ್ರಿ ಭಾರಿ ಅಗ್ನಿ ಅವಘಡ(Massive fire) ನಡೆದಿದ್ದು,  ಸುಮಾರು 500 ಗುಡಿಸಲುಗಳಿಗೆ ಬೆಂಕಿ ತಗುಲಿ, ಓರ್ವ ಮೃತಪಟ್ಟಿದ್ದು, ಮತ್ತೋರ್ವ ಗಾಯಗೊಂಡಿದ್ದಾನೆ. ಇಂದು ಬೆಳಗಿನ ಜಾವ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ವರದಿಯಾಗಿದೆ.

ರಾತ್ರಿ 10 ಗಂಟೆ ಸುಮಾರಿಗೆ ಸಿಲಿಂಡರ್ ಸ್ಫೋಟದಿಂದ ಘಟನೆ ಸಂಭವಿಸಿದೆ. ಮುನ್ನಾ ಎಂಬ ವ್ಯಕ್ತಿ ಬೆಂಕಿಗೆ ಆಹುತಿಯಾದರೆ, ರಾಜೇಶ್ ಎಂದು ಗುರುತಿಸಲ್ಪಟ್ಟ ಇನ್ನೊಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯರು ತಮ್ಮ ವಸ್ತುಗಳನ್ನು ಉಳಿಸಲು ಮತ್ತು ಸುರಕ್ಷಿತ ಸ್ಥಳಗಳಿಗೆ ತೆರಳಲು ಪರದಾಡಿದರು ಎನ್ನಲಾಗದೆ.

ಅಗ್ನಿಶಾಮಕದಳ ಅಧಿಕಾರಿಗಳ ಪ್ರಾಥಮಿಕ ಮಾಹಿತಿಯ ಪ್ರಕಾರ, 400 ರಿಂದ 500 ಗುಡಿಸಲುಗಳು ಸುಟ್ಟುಹೋಗಿವೆ.  ರಾತ್ರಿ 10.56 ಕ್ಕೆ ಬೆಂಕಿಯ ಬಗ್ಗೆ ಮಾಹಿತಿ ಬಂದಿದ್ದು, ಬಳಿಕ ಹವು ಅಗ್ನಿಶಾಮಕ ವಾಹನಗಳು, ರೋಬೋಟ್‌ಗಳನ್ನು ಸ್ಥಳಕ್ಕೆ ರವಾನಿಸಲಾಗಿತ್ತು. ಪೊಲೀಸರು ಆ ಪ್ರದೇಶವನ್ನು ಸುತ್ತುವರೆದಿದ್ದರು. ಬೆಳಗಿನ ಜಾವ ಬೆಂಕಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net