

ಲಕ್ನೋ: ಬೆಂಕಿ ಅವಗಡದಿಂದ ಪಾರಾಗಲು ಮೂರನೇ ಮಹಡಿಯಿಂದ ಕೆಳಗೆ ಜಿಗಿದಿರುವ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ.
ಬಿಸ್ರಖ್ ಪೊಲೀಸ್ ಠಾಣೆ ವ್ಯಾಪ್ತಿಯ ಗ್ಯಾಲಕ್ಸಿ ಪ್ಲಾಜಾ ಶಾಪಿಂಗ್ ಕಾಂಪ್ಲೆಕ್ಸ್‌ನ ಮೂರನೇ ಮಹಡಿಯಲ್ಲಿ ಅನಿರೀಕ್ಷಿತ ಬೆಂಕಿ ಕಾಣಿಸಿಕೊಂಡಿದ್ದು, ಮೂರನೇ ಮಹಡಿಯ ಕಿಟಕಿಯಲ್ಲಿ ನೇತಾಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕೆಲ ಹೊತ್ತಿನ ಬಳಿಕ ಬೆಂಕಿ, ಹೊಗೆ ಹೆಚ್ಚಾಗುತ್ತಿದ್ದಂತೆ ಅಲ್ಲಿಂದ ಕೆಳಗೆ ಜಿಗಿದಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.
ಆದರೆ, ಈ ಘಟನೆಯಲ್ಲಿ ಎಷ್ಟು ಮಂದಿ ಗಾಯಗೊಂಡಿದ್ದಾರೆ, ಎಷ್ಟು ಜೀವಹಾನಿ ಸಂಭವಿಸಿದೆ ಎಂಬುದು ತಿಳಿದಿಲ್ಲ. ಆದರೆ ಕಾಂಪ್ಲೆಕ್ಸ್‌ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಅಪಘಾತ ಸಂಭವಿಸಿರಬಹುದು ಎಂದು ಹೇಳಲಾಗಿದ್ದು, ಸುದ್ದಿ ತಿಳಿದ ಬಳಿಕ ಅಗ್ನಿಶಾಮಕ ದಳದವರು ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಹತೋಟಿಗೆ ತರಲು ಹರಸಾಹಸ ಪಡುತ್ತಿದ್ದಾರೆ. ಈ ಮಾಲ್ ನೋಯ್ಡಾದ ವಿಸ್ತೃತ ಭಾಗದಲ್ಲಿರುವ ಪ್ರಸಿದ್ಧ ವಸತಿ ಸೊಸೈಟಿಯಾದ ಗೌರ್ ಸಿಟಿ-1 ನಲ್ಲಿದ್ದು, ನೂರಾರು ಫ್ಲಾಟ್‌ಗಳಲ್ಲದೆ, ಇದು ಅನೇಕ ಅಂಗಡಿಗಳು, ಫುಡ್ ಕೋರ್ಟ್‌ಗಳು, ರೆಸ್ಟೋರೆಂಟ್‌ಗಳು, ಜಿಮ್ ಮತ್ತು ಕ್ಲಬ್‌ಗಳನ್ನು ಸಹ ಹೊಂದಿದೆ.(ಏಜೆನ್ಸೀಸ್)