ವೈಜಾಗ್ ಸ್ಟೀಲ್ ಪ್ಲಾಂಟ್ ನಲ್ಲಿ ಭಾರೀ ಅಗ್ನಿ ಅವಘಡ

fire
Published on

ವಿಶಾಖಪಟ್ಟಣಂ: ಇಲ್ಲಿನ ವೈಜಾಗ್ ಉಕ್ಕು ಕಾರ್ಯಾಗಾರದಲ್ಲಿ ಶನಿವಾರ ಸಂಜೆ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಆತಂಕ ಮೂಡಿಸಿದೆ.

ವಿಶಾಖಪಟ್ಟಣದ ಉಕ್ಕುನಗರದಲ್ಲಿರುವ ವೈಜಾಗ್ ಸ್ಟೀಲ್ ಪ್ಲಾಂಟ್ ನಲ್ಲಿ ಶನಿವಾರ ಸಂಜೆ ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಂಡ ಬೆಂಕಿ ಕ್ರಮೇಣ ಭಾರಿ ಅಗ್ನಿ ದುರಂತಕ್ಕೆ ಕಾರಣವಾಗಿದೆ.

ಉಕ್ಕಿನ ಸ್ಥಾವರದ ಕೊಕೊವೆನ್ ವಿಭಾಗದ ನ್ಯಾಫ್ತಲಿನ್ ಘಟಕದಲ್ಲಿ ವೆಲ್ಡಿಂಗ್ ಕೆಲಸ ನಡೆಯುತ್ತಿದ್ದ ವೇಳೆ ಅವಘಡ ಸಂಭವಿಸಿದ್ದು, ನ್ಯಾಫ್ತಲಿನ್ ಗೆ ಬೆಂಕಿ ತಗುಲಿ ಯಂತ್ರೋಪಕರಣಗಳು, ವಿದ್ಯುತ್ ಉಪಕರಣಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಭಾರೀ ಆಸ್ತಿ ಹಾನಿಯಾಗಿರುವ ಮಾಹಿತಿ ಮೇರೆಗೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net