ಪ್ರಬಲ ಭೂಕಂಪನಕ್ಕೆ ಕುಸಿದು ಬಿದ್ದ ಕಟ್ಟಡಗಳು; ನಾಲ್ವರು ಬಲಿ, 120ಕ್ಕೂ ಹೆಚ್ಚು ಮಂದಿಗೆ ಗಾಯ

Trukey
Published on

ಟರ್ಕಿಶ್​ ಕರಾವಳಿ ಪ್ರದೇಶ ಮತ್ತು ಗ್ರೀಕ್​ ದ್ವೀಪ್​ ಸಾಮೋಸ್ ನಡುವಿನ ಪ್ರದೇಶದಲ್ಲಿ ಬಲವಾಗಿ ಭೂಕಂಪನ ಉಂಟಾಗಿದ್ದು ನಾಲ್ವರು ಮೃತಪಟ್ಟಿದ್ದು, 120ಕ್ಕೂ ಹೆಚ್ಚುಮಂದಿ ಗಾಯಗೊಂಡಿದ್ದಾರೆ.

ಟರ್ಕಿಯ ಪಶ್ಚಿಮ ಇಜ್ಮಿರ್ ಪ್ರಾಂತ್ಯದಲ್ಲಿ ಹಲವು ಕಟ್ಟಡಗಳು ಕುಸಿದುಬಿದ್ದಿದೆ. ರಸ್ತೆ ಸಂಪರ್ಕ ಕಡಿತವಾಗಿದೆ. ಅನೇಕ ಕಟ್ಟಡಗಳಿಗೆ ಹಾನಿಯಾಗಿದೆ. ವಿದ್ಯುತ್​ ಸಂಪರ್ಕವೂ ಕಡಿತಗೊಂಡಿದೆ.

ಇಜ್ಮಿರ್ ನಲ್ಲಿಯೇ ನಾಲ್ವರು ಮೃತಪಟ್ಟಿದ್ದಾರೆ. ಒಟ್ಟಾರೆ 120ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ಟರ್ಕಿ ಆರೋಗ್ಯ ಸಚಿವ ಟ್ವೀಟ್ ಮಾಡಿದ್ದಾರೆ. ಇಜ್ಮಿರ್​​ನಲ್ಲಿ ಸದ್ಯ 38 ಆಂಬುಲೆನ್ಸ್​ಗಳು, ಎರಡು ಹೆಲಿಕಾಪ್ಟರ್​ ಆಂಬುಲೆನ್ಸ್​ಗಳು, 35 ವೈದ್ಯಕೀಯ ತಂಡ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದ್ದಾರೆ. ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 6.9 ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net