

ಕಾಸರಗೋಡು: ನಗರದಲ್ಲಿ ತ್ಯಾಜ್ಯ ನಿರ್ವಹಣಾ ಚಟುವಟಿಕೆಗಳಲ್ಲಿ ಸಾರ್ವಜನಿಕರ ಭಾಗವಹಿಸುವಿಕೆ ಮತ್ತು ನಗರವನ್ನು ಸ್ವಚ್ಛವಾಗಿಡಲು ಸುಂದರ ನಗರ-ಸ್ವಚ್ಛ ನಗರ ಎಂಬ ಘೋಷಣೆಯೊಂದಿಗೆ ಕಾಸರಗೋಡು ನಗರದಲ್ಲಿ ಸಾಮೂಹಿಕ ಓಟ ‘ವಾಕಥಾನ್’ ಇತ್ತೀಚೆಗೆ ಆಯೋಜಿಸಲಾಯಿತು.
ಕಾಸರಗೋಡು ನಗರಸಭಾ ಅಧ್ಯಕ್ಷ ಅಬ್ಬಾಸ್ ಬೀಗಂ ಚಾಲನೆ ನೀಡಿದರು. ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಖಾಲಿದ್ ಪಚ್ಚಕ್ಕಾಡ್ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಸಹೀರ್ಆಸಿಫ್, ಮಿಥುನ್ ಕೃಷ್ಣನ್, ಡಾ.ಕೆ.ವಿ.ಸೂರಜ್, ಸಿ.ಎಂ.ಬೈಜು, ಮಹೇಶ್ ರೆಡ್ಡಿ ಕೋಡೂರು, ಟಿ.ಎಸ್.ಪರಸ್ಸಿನ್ ರಾಜ್, ಎ.ವಿ.ಮಧುಸೂದನನ್, ಕೆ.ಪಿ.ನೀತುರಾಮ್ ಇದ್ದರು. ನಗರಸಭಾ ಕಚೇರಿ ವಠಾರದಿಂದ ಓಟ ಆರಂಭಗೊಂಡಿತು. ಕೇರಳ ಘನತ್ಯಾಜ್ಯ ನಿರ್ವಹಣಾ ಯೋಜನೆ ಸಹಯೋಗ ವಹಿಸಿತ್ತು.