ಬೆಳ್ಮಣ್​ನಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ

billava sangha
ಬ್ರಹ್ಮಶ್ರೀ ನಾರಾಯಣಗುರು ಸಂದ ವತಿಯಿಂದ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಎಸ್​.ಕೆ ಸಾಲ್ಯಾನ್​ ಉದ್ಘಾಟಿಸಿದರು. ಪ್ರಮುಖರಾದ ಡಾ.ಮೋಹನ್​ಕುಮಾರ್​, ಪ್ರಮಲ್​ ಕುಮಾರ್​ ಮೊದಲಾದವರಿದ್ದರು.
Published on

ಕಾರ್ಕಳ: ಬೆಳ್ಮಣ್​ ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂದ ವತಿಯಿಂದ 27ನೇ ವರ್ಷದ ಸಾಮೂಹಿಕ ಸತ್ಯನಾರಾಯಣ ಪೂಜೆ ಅರ್ಚಕ ಜಯ ಶಾಂತಿ ನೇತೃತ್ವದಲ್ಲಿ ಸಂಪನ್ನಗೊಂಡಿತು.

ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಮೋಹನ್​ಕುಮಾರ್​ ಶುಭಹಾರೈಸಿದರು. ಕಾರ್ಕಳ ಬಿಲ್ಲವ ಸಂದ ಅಧ್ಯಕ್ಷ ಪ್ರಮಲ್​ ಕುಮಾರ್​ ಮಾತನಾಡಿದರು.

ಸಂದ ಅಧ್ಯಕ್ಷ ವಿ.ಕೆ ನಂದಳಿಕೆ ಅಧ್ಯಕ್ಷತೆ ವಹಿಸಿದ್ದರು.

ಗಿನ್ನೆಸ್​ ದಾಖಲೆಗೆ ಸೇರ್ಪಡೆಗೊಂಡ ಸತೀಶ್​ ಪೂಜಾರಿ, ಅಂತಾರಾಷ್ಟ್ರೀಯ ಪವರ್​ಲಿಫ್ಟರ್​ ಅಕ್ಷತಾ ಪೂಜಾರಿ, ದೇಹದಾರ್ಢ್ಯಪಟು ಆಕಾಶ್​ ವಸಂತ ಕುಮಾರ್​, ಸ್ಯಾಕ್ಸೊಫೋನ್​ ವಾದಕ ಸೀತಾರಾಮ ಸುವರ್ಣ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಗಾಯಕ ಸಚಿತ್​ ಪೂಜಾರಿ, ಕರಾಟೆಪಟು ವಿಜೇತಾ ಪೂಜಾರಿ, ಯಕ್ಷಗಾನ ಕಲಾ ಸಾಧಕ ಡಾ.ಮೋಹನ್​ ಕುಮಾರ್​, ಪ್ರಸಿದ್ಧ ವಾಸ್ತುತ ಪ್ರಮಲ್​ ಕುಮಾರ್​ ಅವರನ್ನು ಗೌರವಿಸಲಾಯಿತು.

ಸಂದ ಗೌರವಾಧ್ಯಕ್ಷ ಎಸ್​.ಕೆ ಸಾಲ್ಯಾನ್​ ಮತ್ತಿತರರಿದ್ದರು. ದಿನೇಶ್​ ಸುವರ್ಣ ಸನ್ಮಾನಿತರನ್ನು ಪರಿಚಯಿಸಿದರು. ಸಂಜೀವ ಕೆ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net