ಹಸೆಮಣೆಯೇರಿದ 10 ದಂಪತಿಗಳು : ಕುಕ್ಕೆಯಲ್ಲಿ ಮಾಂಗಲ್ಯ ಭಾಗ್ಯ ಸರಳ ಸಾಮೂಹಿಕ ವಿವಾಹ

New Project (3)
Published on

ಸುಬ್ರಹ್ಮಣ್ಯ: ಕರ್ನಾಟಕ ಸರ್ಕಾರ, ಹಿಂದು ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮದಾಯ ದತ್ತಿ ಇಲಾಖೆ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಮಾಂಗಲ್ಯ ಭಾಗ್ಯ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ಸೋಮವಾರ ಆದಿ ಸುಬ್ರಹ್ಮಣ್ಯದ ಕಲ್ಯಾಣ ಮಂಟಪದಲ್ಲಿ ನಡೆಯಿತು. 10 ನವಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

ಪೂರ್ವಾಹ್ನ ಗಂಟೆ 11ರಿಂದ 12ರ ನಡುವಿನ ವೃಷಭ ಲಗ್ನ ಸುಮುಹೂರ್ತದಲ್ಲಿ ವಿವಾಹ ನೆರವೇರಿತು. ವಿವಿಧೆಡೆಯ 10 ನವಜೋಡಿಗಳು ಹಾರ ಬದಲಾಯಿಸುವುದರೊಂದಿಗೆ ಸಪ್ತಪದಿ ತುಳಿದರು. ಕ್ಷೇತ್ರ ಪುರೋಹಿತ ಮಧುಸೂದನ ಕಲ್ಲೂರಾಯ ನೇತೃತ್ವದಲ್ಲಿ ಪುರೋಹಿತ ವರ್ಗದವರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.

ಶಾಸಕಿ ಭಾಗೀರಥಿ ಮುರುಳ್ಯ, ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬಲಡ್ಕ, ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜು, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಲೋಲಾಕ್ಷ ಕೈಕಂಬ, ಅಚ್ಯುತ ಗೌಡ ಬಳ್ಪ, ದೇವಳದ ಕೆ.ಎಂ.ಗೋಪಿನಾಥ್ ನಂಬೀಶ, ಕಂದಾಯ ಇಲಾಖಾ ಅಧಿಕಾರಿಗಳು, ದೇವಳದ ಸಿಬ್ಬಂದಿ, ನವಜೋಡಿಗಳ ಮನೆಯವರು, ಸ್ನೇಹಿತರು ಭಾಗವಹಿಸಿ ವಧು-ವರರಿಗೆ ಶುಭಹಾರೈಸಿದರು.

ಹಸೆಮಣೆಯೇರಿದ ಜೋಡಿಗಳು: ಕಿಶೋರ್ ಕೆ.ಜಿ. ಕೊರತ್ತೋಡಿ ಮತ್ತು ಕಾವ್ಯಶ್ರೀ ಪಿ. ಬಾಳುಗೋಡು, ರಘು ಮಂಡೆಕೋಲು ಮತ್ತು ಚಂದ್ರಾವತಿ ಕಬಕ, ಮಂಜುನಾಥ ಸುಬ್ರಹ್ಮಣ್ಯ ಮತ್ತು ಪ್ರಮೀಳಾ ಸಕಲೇಶಪುರ, ರಂಜಿತ್ ಗುಂಡ್ಯ ಮತ್ತು ದಿವ್ಯ ಪೆರ್ಲಂಪಾಡಿ, ನವೀನ ವಿಟ್ಲ ಮತ್ತು ಸ್ವಾತಿ ಮಕರ್ಂಜ, ಸಂತೋಷ್ ಬಂಟ್ವಾಳ ಮತ್ತು ವಾರಿಜಾ ಬಂಟ್ವಾಳ, ಸದಾನಂದ ಬಾಳಿಲ ಮತ್ತು ರಮ್ಯ ಎಸ್. ಕಳಂಜ, ಸಚಿನ್‌ರಾಜ್ ಕೊಲ್ಲಮೊಗ್ರು ಮತ್ತು ದಿವ್ಯ ನಾಲ್ಕೂರು, ಪವಿತ್ ಕೋಡಿಂಬಾಳ ಮತ್ತು ಪುಷ್ಪ ಕಲ್ಲುಗುಡ್ಡೆ, ಶ್ರೀಧರ ನಿಡ್ಲೆ ಮತ್ತು ಸುಶೀಲ ನಿಡ್ಲೆ ಮೊದಲಾದ ಒಟ್ಟು ಹತ್ತು ನವ ಜೋಡಿಗಳು ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

ದೇವಳದಿಂದ ಸವಲತ್ತು

ಸರಳ ಸಾಮೂಹಿಕ ವಿವಾಹದಲ್ಲಿ ವಿವಾಹವಾದ ವಧುವಿಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ವತಿಯಿಂದ ರೂ.48000 ಮೌಲ್ಯದ ತಾಳಿ, ಕಂಠಿ ಹಾಗೂ ಕಾಲುಂಗುರ, ಸೀರೆ, ರವಿಕೆ ಹಾಗೂ ಹಾರ ಇತ್ಯಾದಿ ಖರೀದಿಸಲು 10,000 ರೂ. ಮತ್ತು ವರನಿಗೆ ಶರ್ಟ್, ವೇಸ್ಟಿ, ಪೇಟ ಖರೀದಿಸಲು 5,000 ರೂ. ಮೊತ್ತ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net