ಚನ್ನಬಸವ ಕುಟುಂಬಕ್ಕೆ 50 ಸಾವಿರ ರೂ. ವಿತರಣೆ

26102020 Maski Basanagowda turvial
Published on

ಅಚ್ಚುಕಟ್ಟು ಪ್ರದೇಶದ ಕಾಡಾ ಅಧ್ಯಕ್ಷ ಆರ್.ಬಸನಗೌಡ ತುರ್ವಿಹಾಳರಿಂದ ಸಾಂತ್ವನ

ಮಸ್ಕಿ: 15 ದಿನಗಳ ಹಿಂದೆ ಮಸ್ಕಿ ಹಳ್ಳದಲ್ಲಿ ಪ್ರವಾಹಕ್ಕೆ ಸಿಲುಕಿ ಕೊಚ್ಚಿಕೊಂಡ ಹೋದ ಚನ್ನಬಸವ ಮಡಿವಾಳರ ಕುಟುಂಬಕ್ಕೆ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಕಾಡಾ ಅಧ್ಯಕ್ಷ ಆರ್.ಬಸನಗೌಡ ತುರ್ವಿಹಾಳ ವಯಕ್ತಿಕವಾಗಿ 50 ಸಾವಿರ ರೂ. ಸಹಾಯಧನ ಸೋಮವಾರ ವಿತರಿಸಿದರು.

ಪಟ್ಟಣದ ಮುದಗಲ್ ಕ್ರಾಸ್ ಹತ್ತಿರದ ಚನ್ನಬಸವ ಮನೆಗೆ ಭೇಟಿ ನೀಡಿ ಅವರ ಪತ್ನಿ ನೇತ್ರಮ್ಮ ಮತ್ತು ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರವಾಹದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಚನ್ನಬಸವನ ಕುಟುಂಬ ತುಂಬ ತೊಂದರೆಯಲ್ಲಿದೆ. ಮನೆಗೆ ಆದಾರ ಸ್ಥಂಭವಾಗಿದ್ದವರನ್ನು ಕಣ್ಣೆದುರಿನಲ್ಲಿ ಕಳೆದುಕೊಂಡು ಕುಟುಂಬ ಸಂಕಷ್ಟ ಅನುಭವಿಸುತ್ತಿದೆ. ಅವರ ನೋವಿನಲ್ಲಿ ನಾವು ಬಾಗಿಯಾಗುತ್ತೇವೆ. ಯುವಕನ ಕುಟುಂಬಕ್ಕೆ ಸರ್ಕಾರದಿಂದ ಬರುವ ಪರಿಹಾರ ಕೊಡಿಸಲಾಗುವುದು ಎಂದರು.

ಮಸ್ಕಿ ತಾಪಂ ಅಧ್ಯಕ್ಷ ಶಿವಣ್ಣ ನಾಯಕ ವೆಂಕಟಾಪುರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಅಪ್ಪಾಜಿಗೌಡ ಪಾಟೀಲ್, ಸಿದ್ದಣ್ಣ ಹೂವಿನಾಬಾವಿ, ಅಭಿಜೀತ್ ಮಾಲಿ ಪಾಟೀಲ್, ಮಹಾಂತೇಶ ಜಾಲವಾಡಗಿ, ನಾಗರಾಜ ಗುಡಿಸಲಿ, ಸದಾಂ, ಶರಣು ನಾಯಕ, ಈರಣ್ಣ ನಾಯಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net