More

    ಹೈಸ್ಕೂಲ್​ ವಿದ್ಯಾರ್ಥಿ ಜತೆ ಸೆಕ್ಸ್​ ಮಾಡಿ ಸಿಕ್ಕಿಬಿದ್ದ ಶಿಕ್ಷಕಿ: ಜಾಮೀನು ನೀಡಿ ಷರತ್ತು ವಿಧಿಸಿದ ಕೋರ್ಟ್​!

    ಮಾಂಟ್ಗೊಮೆರಿ: ಹೈಸ್ಕೂಲ್​ ವಿದ್ಯಾರ್ಥಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿ ಬಂಧನಕ್ಕೊಳಗಾಗಿದ್ದ ವಿವಾಹಿತ ಗಣಿತ ಶಿಕ್ಷಕಿಯನ್ನು ಜಾಮೀನಿನ ಮೂಲಕ ಬಿಡುಗಡೆ ಮಾಡಲಾಗಿದೆ. ಪೊಲೀಸರ ಮುಂದೆ ತಪ್ಪೊಪ್ಪಿಕೊಂಡ ಹಿನ್ನೆಲೆಯಲ್ಲಿ ಜಾಮೀನು ನೀಡಲಾಗಿದೆ.

    ಈ ಘಟನೆ ಯುನೈಟೆಡ್​ ರಾಜ್ಯ ಅಲಬಾಮಾದಲ್ಲಿ ವರದಿಯಾಗಿದೆ. ಆರೋಪಿ ಶಿಕ್ಷಕಿಯನ್ನು ಅಸ್ತಾನ್​ ಅಲಾನಾ ಮ್ಯಾಕ್​ಕ್ಲಸ್ಕಿ (27) ಎಂದು ಗುರುತಿಸಲಾಗಿದೆ. ಈಕೆಯನ್ನ ಲೌಡರ್​ಡೇಲ್​ ಕೌಂಟಿ ಶೆರಿಫ್​ ಆಫೀಸ್​ ಬುಧವಾರ ಬಂಧಿಸಿತ್ತು. 50 ಸಾವಿರ ಡಾಲರ್​ ಬಾಂಡ್​ ಮೇಲೆ ಬಿಡುಗಡೆ ಮಾಡಲಾಗಿದೆ.

    ಮ್ಯಾಕ್​ಕ್ಲಸ್ಕಿ, 17 ವರ್ಷದೊಳಗಿನ ವಿದ್ಯಾರ್ಥಿ ಜತೆ ಲೈಂಗಿಕ ದುರ್ನಡತೆಯ ಎರಡು ಆರೋಪಗಳನ್ನು ಎದುರಿಸಿದ್ದರು. ಬಿಡುಗಡೆ ವೇಳೆ ಷರತ್ತೊಂದನ್ನು ನೀಡಲಾಗಿದ್ದು, ಸಂತ್ರಸ್ತನೊಂದಿಗೆ ಯಾವುದೇ ಸಂಪರ್ಕ ಇಟ್ಟುಕೊಳ್ಳಬಾರದೆಂದು ಹೇಳಿದೆ. ಈ ಪ್ರಕರಣವೇನಾದರೂ ಸಾಬೀತಾದರೆ, ಆರೋಪಿ 2 ರಿಂದ 20 ವರ್ಷ ಜೈಲು ಮತ್ತು ಶಾಶ್ವತ ಕಲಿಕಾ ಪರವಾನಗಿ ರದ್ದು ಶಿಕ್ಷೆಗೆ ಗುರಿಯಾಗಲಿದ್ದಾರೆ.

    ಇದನ್ನೂ ಓದಿರಿ: ಸೌದಿ ಅರೇಬಿಯಾದಲ್ಲಿ ದುರಂತ ಸಾವಿಗೀಡಾದ ಕೇರಳ ಮೂಲದ ಇಬ್ಬರು ನರ್ಸ್​..!

    ಮ್ಯಾಕ್​ಕ್ಲಸ್ಕಿ, ಕಿಲ್ಲನ್​ನಲ್ಲಿರುವ ಬ್ರೂಕ್ಸ್​ ಹೈಸ್ಕೂಲ್​ನಲ್ಲಿ ಸೆವೆಂಥ್​ ಗ್ರೇಡ್​ ಗಣಿತ ಶಿಕ್ಷಕಿ. ಈಕೆಯ ಮೇಲಿನ ಪ್ರಕರಣವನ್ನು ಅಲಬಾಮಾ ಕಾನೂನು ಜಾರಿ ಸಂಸ್ಥೆ ತನಿಖೆ ನಡೆಸುತ್ತಿದೆ. ಘಟನೆ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಲೌಡರ್​ಡೇಲ್​ ಕೌಂಟಿ ಶಾಲೆ, ತನಿಖೆಯು ಪ್ರಗತಿಯಲ್ಲಿರುವುದರಿಂದ ಪ್ರಕರಣದ ಬಗ್ಗೆ ನಾವೇನು ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದಿದೆ.

    ಮ್ಯಾಕ್​ಕ್ಲಸ್ಕಿ ಕಳೆದ ಮೂರು ವರ್ಷಗಳಿಂದ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. ಫೇಸ್‌ಬುಕ್ ಪೋಸ್ಟ್‌ಗಳ ಪ್ರಕಾರ, ಮ್ಯಾಕ್​ಕ್ಲಸ್ಕಿಗೆ 2011ರಲ್ಲಿ ಲೌಡರ್ ಡೇಲ್ ಕೌಂಟಿಯ ವಿದ್ಯಾರ್ಥಿವೇತನದ ಡಿಸ್ಟಿಂಗ್ವಿಶ್ಡ್ ಯಂಗ್ ವುಮನ್ ಪ್ರಶಸ್ತಿ ನೀಡಲಾಗಿತ್ತು. (ಏಜೆನ್ಸೀಸ್​)

    ಬಿಗ್​ಬಾಸ್​ ಶೋ ಆರಂಭದಲ್ಲೇ ಕೇಳಿಬಂತು ಅಪಸ್ವರ: ಕಲರ್ಸ್​ ಕನ್ನಡಕ್ಕೆ ಜನರಿಟ್ಟ ಬೇಡಿಕೆ ಏನು?

    ಗ್ರಾಮ ವಾಸ್ತವ್ಯ ಕಾಟಾಚಾರಕ್ಕೆ ನಡೆಯದಿರಲಿ; ಜನಮತ

    ದುಬಾರಿ ದುನಿಯಾ: ಎಲ್​ಪಿಜಿ ಸಿಲಿಂಡರ್ ಬೆಲೆಯಲ್ಲಿ ಮತ್ತೆ 25 ರೂ. ಹೆಚ್ಚಳ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts