ಮಾರುಕಟ್ಟೆಯಲ್ಲಿ ಟೊಮ್ಯಾಟೊ ಬೆಲೆ ಚೇತರಿಕೆ, ರೈತರ ಮೊಗದಲ್ಲಿ ಮೂಡಿದ ಸಂತಸ

Kanakagiri Tomato Rate
ಕನಕಗಿರಿಯ ಸಗಟು ಮಾರುಕಟ್ಟೆಯಲ್ಲಿ ಬುಧವಾರ ಟೊಮ್ಯಾಟೊ ಹರಾಜು ನಡೆಯಿತು.
Published on

ಕನಕಗಿರಿ: ಪಟ್ಟಣದ ಮಾರುಕಟ್ಟೆಯಲ್ಲಿ ಜು.10 ಸೋಮವಾರ 24 ಕೆಜಿಯ ಟೊಮ್ಯಾಟೊ ಬಾಕ್ಸ್‌ಗೆ 1400 ರೂ. ಮಾರಾಟವಾಗಿದ್ದು, ಆದರೆ ಬುಧವಾರ ಬಾಕ್ಸ್‌ಗೆ 2000 ರೂ. ಹರಾಜಾಗಿ ಬೆಲೆಯಲ್ಲಿ ಚೇತರಿಕೆ ಕಂಡಿದ್ದರಿಂದ ರೈತರು ಸಂತಸಗೊಂಡಿದ್ದಾರೆ.

ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ ಜು.3ರಂದು ನಡೆದ ಹರಾಜಿನಲ್ಲಿ 24 ಕೆಜಿಯ ಟೊಮ್ಯಾಟೊ ಬಾಕ್ಸ್‌ಗೆ 2900 ರೂ. ಮಾರಾಟವಾಗಿ ದಾಖಲೆ ನಿರ್ಮಿಸಿತ್ತು. 20 ಬಾಕ್ಸ್ ತಂದಿದ್ದ ರೈತರೊಬ್ಬರು ಕೈ ತುಂಬ ಹಣ ಪಡೆದಿದ್ದರು.

ಆದರೆ, ಇದು ಗ್ರಾಹಕರಿಗೆ ಕೈ ಸುಡುವ ದರದಲ್ಲಿ ದೊರೆತಿತ್ತು. ಜು.10 ಸೋಮವಾರ ಏಕಾಏಕಿ ಬೆಲೆ ಕುಸಿತ ಕಂಡಿದ್ದು, ಬಾಕ್ಸ್‌ಗೆ 1400 ರೂ.ಮಾರಾಟವಾಗಿದೆ. ದರದಲ್ಲಿ ಅರ್ಧಕ್ಕರ್ಧ ಬೆಲೆ ಕುಸಿತಗೊಂಡಿದ್ದರಿಂದ ರೈತರು ನಿರಾಸೆಗೊಂಡಿದ್ದರು.

ಜು.12 ಬುಧವಾರ ಹರಾಜಿನಲ್ಲಿ ಬಾಕ್ಸ್‌ಗೆ 1900-2000 ರೂ. ಟೊಮ್ಯಾಟೊ ಮಾರಾಟವಾಗಿದೆ. ಗ್ರಾಹಕರಿಗೆ ಒಂದು ಕೆಜಿಗೆ 80-100 ರೂ.ದರದಲ್ಲಿ ದೊರೆಯಲಿದೆ. ಟೊಮ್ಯಾಟೊ ಬೆಳೆದ ರೈತ ಈ ಹಿಂದಿನ ವರ್ಷಕ್ಕಿಂತ ಹೆಚ್ಚಿನ ಖುಷಿಯಲ್ಲಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net