ತೋಟಗಾರಿಕೆ ಪಿತಾಮಹ ಡಾ. ಎಂ.ಎಚ್. ಮರೀಗೌಡ ಜಯಂತಿ

mng-8aug-mari gouda
Published on



ಮಂಗಳೂರು : ತೋಟಗಾರಿಕೆ ಪಿತಾಮಹಾರಾದ ದಿವಂಗತ ಡಾ. ಎಂ.ಎಚ್. ಮರೀಗೌಡ ಇವರ ಜನ್ಮ ದಿನೋತ್ಸವವನ್ನು ರಾಷ್ಟ್ರೀಯ ತೋಟಗಾರಿಕೆ ದಿನವಾಗಿ ಗುರುವಾರ ಜಿಲ್ಲಾ ಪಂಚಾಯಿತಿಯ ತೋಟಗಾರಿಕೆ ಉಪನಿರ್ದೇಶಕರ ಕಚೇರಿಯಲ್ಲಿ ಆಚರಿಸಲಾಯಿತು.
ತೋಟಗಾರಿಕೆ ಉಪನಿರ್ದೇಶಕ ಡಿ. ಮಂಜುನಾಥ್ ಅವರು ಮಾತನಾಡಿ ಡಾ. ಎಂ.ಎಚ್. ಮರೀಗೌಡರು ತೋಟಗಾರಿಕೆ ಇಲಾಖೆಯನ್ನು ಅಭಿವೃದ್ಧಿಪಡಿಸಿ, ಕರ್ನಾಟಕ ರಾಜ್ಯವನ್ನು ಮಾದರಿ ತೋಟಗಾರಿಕೆ ಬೆಳೆಗಳ ರಾಜ್ಯವನ್ನಾಗಿ ಅಭಿವೃದ್ಧಿಪಡಿಸಿದ್ದರು. ತೋಟಗಾರಿಕೆಗೆ ನೀಡಿದ ಕೊಡುಗೆಯನ್ನು ಮನಗಂಡು ಇಲಾಖೆಯು ಅವರ ಹುಟ್ಟು ಹಬ್ಬವನ್ನು ರಾಷ್ಟ್ರೀಯ ತೋಟಗಾರಿಕೆ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ ಎಂದರು.
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಪ್ರಮೋದ್ ಸಿ.ಎಂ., ಪ್ರದೀಪ್ ಡಿಸೋಜ ಉಪಸ್ಥಿತರಿದ್ದರು. ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಕೆ. ಪ್ರವೀಣ್ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net