More

    ಸೆ. 16ಕ್ಕೆ ಮಹಿಳಾ ಪ್ರಧಾನ ‘ಮರ್ದಿನಿ’ ಚಿತ್ರ ಬಿಡುಗಡೆ

    ಬೆಂಗಳೂರು: ಒಂದು ಕಾಲಕ್ಕೆ ಮಾಲಾಶ್ರೀ ಅಭಿನಯದ ಸಾಕಷ್ಟು ಪೊಲೀಸ್​ ಚಿತ್ರಗಳು ಬಿಡುಗಡೆಯಾಗಿದ್ದು ನೆನಪಿರಬಹುದು. ಆ ನಂತರ ಬೇರೆ ನಟಿಯರು ಸಹ ಪೊಲೀಸ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದುಂಟು. ಇತ್ತೀಚೆಗೆ, ಆ ಟ್ರೆಂಡ್​ ಕಡಿಮೆಯಾಗುತ್ತಿದ್ದು, ಅಂತಹ ಚಿತ್ರಗಳನ್ನು ನೆನಪಿಸುವುದಕ್ಕೆ ‘ಮರ್ದಿನಿ’ ಎಂಬ ಹೊಸ ಚಿತ್ರವೊಂದು ನಿರ್ಮಾಣವಾಗಿ, ಬಿಡುಗಡೆಯಾವುದಕ್ಕೆ ಸಜ್ಜಾಗಿದೆ.

    ಇದನ್ನೂ ಓದಿ: ಲೈಗರ್​ ಸಿನಿಮಾ ಸೋಲು: ನಟಿ ಅನಸೂಯ ವಿರುದ್ಧ ಮುಗಿಬಿದ್ದ ವಿಜಯ್​ ದೇವರಕೊಂಡ ಫ್ಯಾನ್ಸ್!

    ‘ಮರ್ದಿನಿ’ ಚಿತ್ರದ ಮೂಲಕ ರಿತನ್ಯ ಹೂವಣ್ಣ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಅಂಕಿತ್ ಫಿಲಂಸ್ ಲಾಂಛನದಲ್ಲಿ ಭಾರತಿ ಜಗ್ಗಿ ಈ ಚಿತ್ರವನ್ನು ನಿರ್ಮಿಸಿದ್ದು, ಕಿರಣ್ ಕುಮಾರ್ ವಿ ನಿರ್ದೇಶಿಸಿದ್ದಾರೆ. ಈ ಚಿತ್ರದ ಟ್ರೇಲರ್ ಹಾಗೂ ಹಾಡಿನ ಬಿಡುಗಡೆ ಸಮಾರಂಭ ಇತ್ತೀಚಿಗೆ ನಡೆಯಿತು.

    ಸೆ. 16ಕ್ಕೆ ಮಹಿಳಾ ಪ್ರಧಾನ 'ಮರ್ದಿನಿ' ಚಿತ್ರ ಬಿಡುಗಡೆ

    ಈ ಚಿತ್ರದ ಕುರಿತು ಮಾತನಾಡುವ ಕಿರಣ್​ ಕುಮಾರ್​, ‘ಅಡುಗೆಮನೆಯಿಂದ ಆರ್ಮಿ ತನಕ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆ ಯಾರಿಗೂ ಕಡಿಮೆ ಇಲ್ಲದಂತೆ ಕಾರ್ಯ ನಿರ್ವಹಿಸುತ್ತಿದ್ದಾಳೆ. ಇತ್ತೀಚೆಗೆ ಕೋವಿಡ್​ ಸಮಯದಲ್ಲಿ ಸಾವಿರಾರು ಆಶಾ ಕಾರ್ಯಕರ್ತೆಯರು ತಮ್ಮ ಪ್ರಾಣಪಣಕ್ಕಿಟ್ಟು ಸೇವೆ ಸಲ್ಲಿಸಿದ್ದು ನಮ್ಮ ಕಣ್ಣ ಮುಂದೆ ಇದೆ. ಈ ಎಲ್ಲಾ ಅಂಶಗಳನಿಟ್ಟುಕೊಂಡು, ಸಿನಿಮಾ ಮಾಡಿದ್ದೇನೆ. ಚಿತ್ರವು ಸೆಪ್ಟೆಂಬರ್ 16ರಂದು ಬಿಡುಗಡೆಯಾಗುತ್ತಿದೆ’ ಎನ್ನುತ್ತಾರೆ.

    ನಿರ್ಮಾಪಕ ಜಗ್ಗಿ, ಸುದೀಪ್​ ಅವರ ಅಭಿಮಾನಿಯಂತೆ. ಕಳೆದ 18 ವರ್ಷಗಳಿಂದ ಚಿತ್ರರಂಗದೊಂದಿಗೆ ನಂಟಿದೆಯಂತೆ. ‘ಸಾವಿರಾರು ಚಿತ್ರಗಳಿಗೆ ಸ್ಟ್ಯಾಂಡಿಸ್‌ ಹಾಗೂ ಬ್ಯಾನರ್​ಗಳನ್ನು ಮಾಡಿದ್ದೇನೆ. ಸಿನಿಮಾ ನಿರ್ಮಾಣ ಮಾಡಿ, ಹೊಸ ಕಲಾವಿದರಿಗೆ ಅವಕಾಶ ನೀಡಬೇಕೆಂದು ನನ್ನ ಆಸೆಯಿತ್ತು. ‘ಮರ್ದಿನಿ’ ಚಿತ್ರದ ಮೂಲಕ ಈಡೇರಿದೆ’ ಎನ್ನುತ್ತಾರೆ ನಿರ್ಮಾಪಕ ಜಗ್ಗಿ.
    ಈ ಚಿತ್ರಕ್ಕೆ ಆಡಿಷನ್ ಮೂಲಕ ಆಯ್ಕೆಯಾದ ರಿತನ್ಯಾ, ಖಡಕ್ ಪೊಲೀಸ್ ಅಧಿಕಾರಿಯಾಗಿ‌ ಕಾಣಿಸಿಕೊಂಡಿದ್ದಾರಂತೆ. ಇನ್ನು, ಚಿತ್ರಕ್ಕೆ ಕಥೆ ಬರೆಯುವುದರ ಜತೆಗೆ ಮುಖ್ಯಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ ಅಕ್ಷಯ್​. ರಿತನ್ಯಾ ಹಾಗೂ ಅಕ್ಷಯ್​ ಜತೆಗೆ ಇಂಚರ ಹಾಗೂ ಸುಷ್ಮಿತ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

    ಇದನ್ನೂ ಓದಿ: ಸಂಪ್ರದಾಯ ಮತ್ತು ಆಧುನಿಕತೆಯ ಸಂಘರ್ಷ: ‘ಡೊಳ್ಳು’ ಸಿನಿಮಾ ವಿಮರ್ಶೆ

    ‘ಮರ್ದಿನಿ’ ಚಿತ್ರಕ್ಕೆ ಹಿತನ್​ ಹಾಸನ್​ ಸಂಗೀತ, ಕರಣ್​ ಗಜ ಸಂಭಾಷಣೆ ಹಾಗೂ ವಿಶ್ವ ಸಂಕಲನ ಮಾಡಿದ್ದಾರೆ.

    ಅಭಿಷೇಕ್​ ಅಂಬರೀಷ್​ ಅಭಿನಯದ ನಾಲ್ಕನೇ ಚಿತ್ರದ ಮೋಷನ್​ ಪೋಸ್ಟರ್​ ಬಿಡುಗಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts