

ಮಂಗಳೂರು: ದ.ಕನ್ನಡ ಜಿಲ್ಲಾ ಮರಾಟಿ ಸಮಾಜ ಸೇವಾ ಸಂಘ ಮಂಗಳೂರು ಇದರ ವಾರ್ಷಿಕ ಮಹಾಸಭೆ, ಸಾರ್ವಜನಿಕ ಸತ್ಯನಾರಾಯಣ ಪೂಜೆ ಹಾಗೂ ಪಿಎಚ್.ಡಿ ಪದವಿ ಪಡೆದ ದಂಪತಿಗೆ ಸನ್ಮಾನ ಬಾಳಂ ಭಟ್ ಸಭಾಂಗಣದಲ್ಲಿ ಭಾನುವಾರ ನಡೆಯಿತು.
ಸಂಘದ ಅಧ್ಯಕ್ಷ ರವಿಪ್ರಸಾದ್ ನಾಯ್ಕ ಕಯ್ಯರು ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರಪತಿ ಪದಕ ಪುರಸ್ಕೃತ ಸೂಪರಿಟೆಂಡೆಂಟ್ ಆಫ್ ಪೊಲೀಸ್ ಹರಿಶ್ಚಂದ್ರ ನಾಯ್ಕ, ಎಂಆರ್ಪಿಎಲ್ ಮುಖ್ಯ ಪ್ರಬಂಧಕ (ಆಡಳಿತ) ಸತೀಶ್ ಮುಖ್ಯ ಅತಿಥಿಗಳಾಗಿದ್ದರು.
ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಯಲ್ಲಿ ಶೇ.80ಕ್ಕಿಂತ ಹೆಚ್ಚು ಅಂಕ ಪಡೆದ ಮಕ್ಕಳನ್ನು ಹಾಗೂ ರಾಷ್ಟ್ರೀಯ ಯೋಗಪಟು ತನ್ವಿ ತಂಟೆಪ್ಪಾಡಿ ಅವರ ಸಾಧನೆಯನ್ನು ಗೌರವಿಸಲಾಯಿತು. ಪಿಎಚ್.ಡಿ ಪಡೆದ ಡಾ.ದಿನೇಶ್ ಹಾಗೂ ಡಾ.ರಶ್ಮಿ ದಿನೇಶ್ ದಂಪತಿಯನ್ನು
ಗೌರವಿಸಲಾಯಿತು.
ಹರಿಶ್ಚಂದ್ರ ನಾಯ್ಕ, ಸತೀಶ್ ಹಾಗೂ ಮರಾಟಿ ಭಾಷೆಯನ್ನು ಸಮುದಾಯಕ್ಕೆ ತಿಳಿಸುವ ಕೃಷ್ಣ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಸಂಘದ ಮಾಜಿ ಅಧ್ಯಕ್ಷ ಬಿ.ರಾಮನಾಯ್ಕ (ನಟ್ಟಿ) ರವರು ಸಂಘದ ನಿವೇಶನ ಹಾಗೂ ಕಟ್ಟಡದ ಬಗ್ಗೆ ಮಾಹಿತಿ ನೀಡಿದರು.
2023-24ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಮಹಾಲಿಂಗ ನಾಯ್ಕ (ಆಸ್ಪಿನ್ವಾಲ್) ನಡೆಸಿಕೊಟ್ಟರು. ಅಧ್ಯಕ್ಷ ರವಿಪ್ರಸಾದ್ ನಾಯ್ಕ, ಕಾರ್ಯದರ್ಶಿ ಮಹಾಲಿಂಗ ನಾಯ್ಕ ಗುರುಪುರ, ಕೊಶಾಧಿಕಾರಿ ಜಯಶಂಕರ್ ನಾಯ್ಕ ಹಾಗೂಕಾರ್ಯಕಾರಿ ಸಮಿತಿಗೆ 27 ಮಂದಿ, ಇಬ್ಬರು ಗೌರವ ಸಲಹೆಗಾರರು, ಮಹಿಳಾ ಅಧ್ಯಕ್ಷೆಯನ್ನು ಆಯ್ಕೆ ಮಾಡಲಾಯಿತು.
ಸಂಘದ ಪ್ರಧಾನ ಕಾರ್ಯದರ್ಶಿ ಮಹಾಲಿಂಗ ನಾಯ್ಕ (ಆಸ್ಟಿನ್ವಾಲ್) ವರದಿ ವಾಚಿಸಿದರು. ಸುಂದರ ಲೆಕ್ಕಪತ್ರ ಮಂಡಿಸಿದರು. ವನಿತಾ ಸುಂದರ್ ಕಾರ್ಯಕ್ರಮ ನಿರೂಪಿಸಿದರು. ತನಿಯಪ್ಪ ನಾಯ್ಕ ವಂದಿಸಿದರು.