ಸಾಸ್ತಾನದಲ್ಲಿ ಮ್ಯಾರಾಥಾನ್‌ಗೆ ಚಾಲನೆ

kota
Published on

ಕೋಟ: ಸಾಸ್ತಾನ ಅನ್ನೋನ್ಯತಾ ಗೂಡ್ಸ್ ವಾಹನ ಚಾಲಕ ಮತ್ತು ಮಾಲೀಕರು, ಪಾಂಡೇಶ್ವರ ಚೇತನಾ ಸ್ಪ್ರಿಂಟರ್ಸ್ ಸಹಯೋಗದಲ್ಲಿ ಡ್ರಗ್ಸ್‌ಮುಕ್ತ ಸಮಾಜಕ್ಕಾಗಿ ಮ್ಯಾರಥ್ಯಾನ್ ಕಾರ್ಯಕ್ರಮ ಸಾಸ್ತಾನ ಬಸ್ ನಿಲ್ದಾಣದ ಹತ್ತಿರ ಇತ್ತೀಚಿಗೆ ನಡೆಯಿತು.

ಅಂತಾರಾಷ್ಟ್ರೀಯ ಮಾಸ್ಟರ್ ಅಥ್ಲೀಟ್ ಕೋಟ ದಿನೇಶ್ ಗಾಣಿಗ ಹಾಗೂ ಪಾಂಡೇಶ್ವರ ರಕ್ತೇಶ್ವರಿ ದೇಗುಲದ ಧರ್ಮದರ್ಶಿ ಕೆ.ವಿ.ರಮೇಶ್ ರಾವ್ ಜಂಟಿಯಾಗಿ ಚಾಲನೆ ನೀಡಿದರು.

ಹಂಗಾರಕಟ್ಟೆ ಸಾಸ್ತಾನ ರೋಟರಿ ಕ್ಲಬ್ ಅಧ್ಯಕ್ಷೆ ಜ್ಯೋತಿ ಉದಯ್‌ಕುಮಾರ್, ಸಾಸ್ತಾನ ಸಿಎ ಬ್ಯಾಂಕ್ ನಿರ್ದೇಶಕಿ ಲೀಲಾವತಿ ಗಂಗಾಧರ್, ಉದ್ಯಮಿ ಅನ್ವರ್ ಮಟಪಾಡಿ, ಕ್ರೀಡಾಪಟು ವಿಠ್ಠಲ್ ಶೆಟ್ಟಿಗಾರ್,ಅನ್ನೋನ್ಯತಾ ಗೂಡ್ಸ್, ಸಾಸ್ತಾನ ವಾಹನ ಚಾಲಕ ಮತ್ತು ಮಾಲೀಕ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ, ಕಾಂಗ್ರೆಸ್ ಮುಖಂಡ ದಿನೇಶ್ ಹೆಗ್ಡೆ ಮೊಳಹಳ್ಳಿ, ರೋಟರಿ ಕ್ಲಬ್ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು. ರಜಾಕ್ ಗುಂಡ್ಮಿ ಕಾರ್ಯಕ್ರಮ ನಿರೂಪಿಸಿದರು. ಕ್ರೀಡಾಪಟು ಗಣೇಶ್ ಪಾಂಡೇಶ್ವರ ಸಂಯೋಜಿಸಿದರು. ಸಾಸ್ತಾನದಿಂದ ಪಾಂಡೇಶ್ವರ ಮಾರ್ಗವಾಗಿ ಬೆಣ್ಣೆಕುದ್ರು ಬಾರಕೂರು ಮೂಲಕ ಮ್ಯಾರಾಥಾನ್ ಸಾಗಿ ಸಾಸ್ತಾನಕ್ಕೆ ಮರಳಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net