

ಜನ "ಕೆಜಿಎಎಫ್ 2' ಚಿತ್ರದ ಗುಂಗಿನಿಂದಲೇ ಇನ್ನೂ ಹೊರಬಂದಿಲ್ಲವೋ ಅಥವಾ ಮಳೆಯ ಆರ್ಭಟವೋ ಅಥವಾ ಐಪಿಎಲ್ ಎಫೆಕ್ಟೋ ಗೊತ್ತಿಲ್ಲ ... ಕಾರಣ ಏನೇ ಇರಲಿ, "ಕೆಜಿಎಫ್ 2' ನಂತರ ಯಾವೊಂದು ಚಿತ್ರಕ್ಕೂ ಜನ ದೊಡ್ಡ ಮಟ್ಟದಲ್ಲಿ ಚಿತ್ರಮಂದಿರಗಳಿಗೆ ಬಂದು ಚಿತ್ರ ನೋಡಿಲ್ಲ. ಹೀಗಿರುವಾಗ ಇಂದು 10ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗುತ್ತಿವೆ. ಈ ಚಿತ್ರಗಳ ಗತಿ ಏನೋ?
ಕನ್ನಡ ಚಿತ್ರರಂಗದಲ್ಲಿ ವಾರಕ್ಕೆ ಎಂಟರಿಂದ ಹತ್ತು ಚಿತ್ರಗಳು ಬಿಡಗುಡೆಯಾಗುವುದು ಹೊಸದೇನಲ್ಲ. ಈ ವರ್ಷವೇ ಎರಡು ಬಾರಿ ವಾರವೊಂದಕ್ಕೆ ಎಂಟಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾದ ಉದಾಹರಣೆಗಳಿವೆ. ಈ ವಾರ 10ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ನಿರ್ಮಾಣವಾಗಲಿದೆ. ಬರೀ ಈ ವಾರವಷ್ಟೇ ಅಲ್ಲ, ಮುಂದಿನ ವಾರ, ಮುಂದಿನ ತಿಂಗಳು ಸಹ ದೊಡ್ಡ ಸಂಖ್ಯೆಯಲ್ಲಿ ಚಿತ್ರಗಳು ಬಿಡಗುಡೆಯಾಗುತ್ತಿವೆ. ಈಗಾಗಲೇ ಮುಂದಿನ ವಾರ ಐದು ಚಿತ್ರಗಳು ಘೋಷಣೆಯಾಗಿದ್ದು, ಅಂತಿಮವಾಗಿ ಎಷ್ಟು ಬಿಡುಗಡೆಯಾಗಲಿವೆ ಎಂಬ ಕುತೂಹಲ ಎಲ್ಲರಿಗೂ ಇದೆ.
2020ರಲ್ಲಿ 200 ಚಿತ್ರಗಳ ಸೆನ್ಸಾರ್ ಆಗಿತ್ತು. 2021ರಲ್ಲಿ ಆ ಸಂಖ್ಯೆ ಇನ್ನಷ್ಟು ಹೆಚ್ಚಾಯಿತು. ಆದರೆ, ಈ ಎರಡೂ ವರ್ಷಗಳ ಕಾಲ 80 ಮತ್ತು 110 ಚಿತ್ರಗಳು ಮಾತ್ರ ಬಿಡುಗಡೆಯಾಗಿವೆ. ಮಿಕ್ಕಂತೆ ಬಿಡುಗಡೆಯಾಗಬೇಕಾದ ಚಿತ್ರಗಳ ಸಂಖ್ಯೆಯೇ 200ರಷ್ಟಿದೆ ಎಂದು ಹೇಳಲಾಗುತ್ತಿದೆ. ಬಹುಶಃ ಎಲ್ಲ ಸರಿಯಾಗಿದ್ದರೆ, ಈ ವರ್ಷದ ಆರಂಭದಲ್ಲೇ ಬಿಡುಗಡೆಯ ಭರಾಟೆ ಹೆಚ್ಚಿರುತ್ತಿತ್ತು. ಆದರೆ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡದೊಡ್ಡ ಚಿತ್ರಗಳ ಬಿಡುಗಡೆಗೆ ಇದ್ದುದರಿಂದ, ಹಲವು ಚಿತ್ರಗಳು ಮುಂದೂಡಲ್ಪಟ್ಟವು. ಈಗ "ಕೆಜಿಎ್ 2', "ಆರ್ಆರ್ಆರ್', "ಜೇಮ್ಸ್' ಸೇರಿದಂತೆ ಬಹಳಷ್ಟು ಪ್ಯಾನ್ ಇಂಡಿಯಾ ಚಿತ್ರಗಳು ಬಿಡುಗಡೆಯಾಗಿವೆ. "777 ಚಾಲಿರ್' ಮತ್ತು "ವಿಕ್ರಾಂತ್ ರೋಣ' ಬರುವುದಕ್ಕೆ ಸ್ವಲ್ಪ ಸಮಯವಿದೆ. ಈ ಸಮಯವನ್ನು ಉಪಯೋಗಿಸಿಕೊಳ್ಳುವುದಕ್ಕೆ ಬಹಳಷ್ಟು ಮಧ್ಯಮ ಮತ್ತು ಕಡಿಮೆ ಬಜೆಟ್ನ ಚಿತ್ರಗಳು ಮುಂದಾಗಿವೆ. ಅದೇ ಕಾರಣಕ್ಕೆ ಎಲ್ಲರೂ ಚಿತ್ರ ಬಿಡುಗಡೆ ಮಾಡುವುದಕ್ಕೆ ನಾ ಮುಂದು ತಾ ಮುಂದು ಎಂದು ಹೊರಟಿದ್ದಾರೆ.
ಇದು ಸಹಜ. ಚಿತ್ರಗಳೇನೋ ಬಿಡುಗಡೆಯಾಗುತ್ತಿವೆ, ಜನ ನೋಡುತ್ತಿದ್ದಾರಾ? ಎಂಬ ಪ್ರಶ್ನೆಗೆ ಉತ್ತರ ಹುಡುಕುವುದು ಕಷ್ಟ. ಏಪ್ರಿಲ್ 14ಕ್ಕೆ "ಕೆಜಿಎ್ 2' ಬಿಡುಗಡೆಯಾಗಿ ಗೆದ್ದಿದ್ದು ಕೊನೆ, ಆ ನಂತರ ಯಾವೊಂದು ಚಿತ್ರ ಸಹ ಗೆದ್ದ ಉದಾಹರಣೆ ಇಲ್ಲ. ಆ ನಂತರವೂ ಒಂದಿಷ್ಟು ಒಳ್ಳೆಯ ಕಂಟೆಂಟ್ ಇರುವ ಚಿತ್ರಗಳು ಬಿಡುಗಡೆಯಾಗಿವೆ. ನೋಡಿದ ಜನ ಮೆಚ್ಚಿದ್ದಾರೆ. ಆದರೆ, ಕಲೆಕ್ಷನ್ ಮಾತ್ರ ಇಲ್ಲ. ಇದು "ಕೆಜಿಎ್ 2' ಚಿತ್ರದ ಎೆಕ್ಟ್ ಎನ್ನಲಾಗುತ್ತಿದೆ. ಜನ ಆ ಚಿತ್ರದ ಹ್ಯಾಂಗೋವರ್ನಿಂದ ಇನ್ನೂ ಹೊರಬಂದಿಲ್ಲವಾದ್ದರಿಂದ, ಬೇರೆ ಚಿತ್ರಗಳತ್ತ ಬರುತ್ತಿಲ್ಲ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ಸಮಾರಂಭವೊಂದರಲ್ಲಿ ಸಾಧು ಕೋಕಿಲ ಸಹ ಇದೇ ಮಾತು ಹೇಳಿದ್ದರು. "ಕೆಜಿಎ್ 2' ಗುಂಗಿನಿಂದ ಹೊರಬಂದು ಚಿತ್ರ ನೋಡಿ ಎಂದಿದ್ದರು.
"ಕೆಜಿಎ್2' ಒಂದು ಪ್ರಮುಖ ಕಾರಣವೇನೋ ಹೌದು. ಅದರ ಜತೆಗೆ ಇನ್ನೊಂದಿಷ್ಟು ಕಾರಣಗಳಿವೆ. ಕಳೆದ ಕೆಲವು ದಿನಗಳಿಂದ ಪ್ರತಿ ರಾತ್ರಿ ಮಳೆ ಬರುತ್ತಿದೆ. ಐಪಿಎಲ್ ಒಂದು ನಿರ್ಣಾಯಕ ಹಂತಕ್ಕೆ ಬಂದಿದ್ದು, ಯಾರು ಕಪ್ ಗೆಲ್ಲಬಹುದು ಎಂಬ ಕುತೂಹಲ ಹೆಚ್ಚಾಗಿದೆ. ಶಾಲೆಗಳು ಪ್ರಾರಂಭವಾಗಿ ಯೂನಿಾಮ್ರ್, ಬುಕ್ಸ್ ತಲೆಬಿಸಿ ಜಾಸ್ತಿಯಾಗಿದೆ. ಹೀಗೆ ಪ್ರತಿ ವಯೋಮಾನದವರಿಗೂ ಅವರದ್ದೇ ಆದ ಯೋಚನೆ ಮತ್ತು ಸಮಸ್ಯೆಗಳಿವೆ. ಇಂಥ ಸಮಯದಲ್ಲಿ ಚಿತ್ರರಂಗದ ಕಡೆ ಯಾರಿಗೆ ತಾನೆ ಗಮನ ಹಾಗೂ ಸಮಯ ಇರುವುದಕ್ಕೆ ಸಾಧ್ಯ ಹೇಳಿ? ನೋಡಿದರೂ ಒಂದೋ, ಎರಡೋ ಚಿತ್ರಗಳು ನೋಡಬಹುದು. ಇಷ್ಟೊಂದು ಸಂಖ್ಯೆಯಲ್ಲಿ ಬಿಡುಗಡೆಯಾದರೆ, ನೋಡುವುದಕ್ಕೂ ಸಾಧ್ಯವಾಗುವುದಿಲ್ಲ.
ಹಾಗಾಗಿ, ಹೊಸಹೊಸ ಚಿತ್ರಗಳು ಬಿಡುಗಡೆಯಾಗುತ್ತಿದ್ದರೂ ಜನ ಮಾತ್ರ ಚಿತ್ರಮಂದಿರಗಳತ್ತ ಹೆಜ್ಜೆ ಹಾಕುವುದು ಕಡಿಮೆಯಾಗುತ್ತಿದೆ. ಆದರೆ, ಹಣ ಹಾಕಿ ಚಿತ್ರ ನಿರ್ಮಾಣ ಮಾಡಿದವರು, ನೂರೆಂಟು ಕನಸುಗಳನ್ನು ಕಟ್ಟಿಕೊಂಡವರು, ಚಿತ್ರರಂಗದಲ್ಲಿ ಏನೋ ಸಾಧಿಸಬೇಕೆಂದುಕೊಂಡವರ ಕಥೆ ಏನು? ಈ ಪ್ರಶ್ನೆಗೆ ಉತ್ತರ ಹುಡುಕುವುದು ಕಷ್ಟ.
ಈ ವಾರ 10 ಪ್ಲಸ್ ಚಿತ್ರಗಳು
ಈ ವಾರ ಧನಂಜಯ್ ಅಭಿನಯದ "21 ಅವರ್ಸ್', ಮನೋರಂಜನ್ ಅಭಿನಯದ "ಪ್ರಾರಂಭ', ಸಿದ್ಧಾರ್ಥ್ ಮಹೇಶ್ ಅಭಿನಯದ "ಗರುಡ', ಅನು ಪ್ರಭಾಕರ್ ಅಭಿನಯದ "ಸಾರಾ ವಜ್ರ', ರತ್ ನಿರ್ಮಾಣದ "ಸಕುಟುಂಬ ಸಮೇತ', ಹೊಸಬರ "ಕಂಡ್ಹಿಡಿ ನೋಡೋಣ', "ಕಟ್ಟಿಂಗ್ ಶಾಪ್', "ಆ್ಯಂಗರ್', "ಪ್ರೀತ್ಸು', "ದಾರಿ ಯಾವುದಯ್ಯ ವೈಕುಂಠಕೆ', "ಚಕ್ರಾಧಿಪತಿ' ಸೇರಿದಂತೆ 10ಕ್ಕೂ ಹೆಚ್ಚು ಚಿತ್ರಗಳಿವೆ.