
ಕುಂದಾಪುರ: ಉಡುಪಿ ಜಿಲ್ಲಾ ಮಕ್ಕಳ 10ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯಾಗಿ ಕುಂದಾಪುರ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿನಿ ಮನ್ವಿತಾ ಎಸ್.ಆಯ್ಕೆಯಾಗಿದ್ದಾಳೆ
ನಾಲ್ಕನೇ ವಯಸ್ಸಿನಲ್ಲೇ ಯಕ್ಷಗಾನ ನೃತ್ಯ ಪ್ರದರ್ಶನ ನೀಡಿ ಗಮನ ಸೆಳೆದಿದ್ದ ಮನ್ವಿತಾ ಪ್ರಸ್ತುತ ಸೀನಿಯರ್ ವಿಭಾಗದಲ್ಲಿ ತರಬೇತಿ ಪಡೆಯುತ್ತಿದ್ದಾಳೆ. ಭಾಷಣ ಹಾಗೂ ನಿರೂಪಣೆ ಇಷ್ಟದ ಕ್ಷೇತ್ರವಾಗಿದ್ದು, ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಜಿಲ್ಲಾಮಟ್ಟಕ್ಕೂ ಆಯ್ಕೆಯಾಗಿದ್ದಾಳೆೆ.
2023-24ನೇ ಸಾಲಿನ ಮಕ್ಕಳ ಜಿಲ್ಲಾ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದ ನಿರೂಪಣೆ ಮಾಡಿ ಮೆಚ್ಚುಗೆ ಪಡೆದಿದ್ದು, ಕುಂದಾಪುರ ತಾಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನ ತಾರ್ಕಣಿ-2024 ಪ್ರಯುಕ್ತ ನಡೆಸಿದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ. ಪ್ರಸಕ್ತ ಸಾಲಿನ ಕಾರಂತ ಪ್ರತಿಷ್ಠಾನದ ಬಾಲಪುರಸ್ಕಾರಕ್ಕೂ ಆಯ್ಕೆಯಾಗಿದ್ದಾಳೆ. ಸೂರ್ಯಕಾಂತ ಬಿ.ಬಸ್ರೂರು ಹಾಗೂ ಲತಾ ದಂಪತಿ ಪುತ್ರಿ.