ಲಾಟರಿ ಮೂಲಕ ಒಲಿದ ಅಧ್ಯಕ್ಷೆ ಸ್ಥಾನ

301122 Utakanuru GP Selection
ಮಾನ್ವಿ ತಾಲೂಕಿನ ಉಟಕನೂರು ಗ್ರಾಪಂ ಅಧ್ಯಕ್ಷೆಯಾಗಿ ರತ್ನಮ್ಮ ಅಮರೇಶ ಹೆಬ್ಬಾಳ ಹಾಗೂ ಉಪಾಧ್ಯಕ್ಷರಾಗಿ ಚಾರ್ಲಿ ಉದ್ಭಾಳ್ ಬುಧವಾರ ಆಯ್ಕೆಯಾದರು.
Published on

ಮಾನ್ವಿ: ಉಟಕನೂರು ಗ್ರಾಪಂ ಅಧ್ಯಕ್ಷೆಯಾಗಿ ರತ್ನಮ್ಮ ಅಮರೇಶ ಹೆಬ್ಬಾಳ ಲಾಟರಿ ಮೂಲಕ ಆಯ್ಕೆಯಾದರೆ, ಉಪಾಧ್ಯಕ್ಷರಾಗಿ ಚಾರ್ಲಿ ಉದ್ಭಾಳ್ 11 ಮತಗಳನ್ನು ಪಡೆದು ಆಯ್ಕೆಯಾದರು ಎಂದು ತಾಪಂ ಇಒ ಮತ್ತು ಚುನಾವಾಧಿಕಾರಿ ಅಣ್ಣರಾವ್ ಪ್ರಕಟಿಸಿದರು.

ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರತ್ನಮ್ಮ ಅಮರೇಶ ಹೆಬ್ಬಾಳ ಮತ್ತು ಶಾರದಮ್ಮ ಪ್ರಾಣೇಶ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಚಾರ್ಲಿ ಉದ್ಬಾಳ ಮತ್ತು ಈರಮ್ಮ ಅಮರಪ್ಪ ನಾಮಪತ್ರ ಸಲ್ಲಿಸಿದ್ದರು. ಒಟ್ಟು 19 ಸದಸ್ಯ ಬಲದ ಪಂಚಾಯಿತಿಯಲ್ಲಿ ರತ್ನಮ್ಮ ಹಾಗೂ ಶಾರದಮ್ಮಗೆ ತಲಾ 9 ಮತಗಳು ಲಭಿಸಿದವು. ಒಂದು ಮತ ಕುಲಗೆಟ್ಟಿತ್ತು. ಸಮವಾಗಿ ಮತಗಳನ್ನು ಪಡೆದಿದ್ದರಿಂದ ಲಾಟರಿ ಮೂಲಕ ಅಧ್ಯಕ್ಷೆ ಆಯ್ಕೆ ಪ್ರಕ್ರಿಯೆ ನಡೆಯಿತು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಚಾರ್ಲಿ ಉದ್ಬಾಳಗೆ 11 ಮತಗಳು, ಈರಮ್ಮ ಅಮರಪ್ಪಗೆ 8 ಮತಗಳು ಲಭಿಸಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net