ಶಿಥಿಲಾವಸ್ಥೆಯಲ್ಲಿ ನವರಾತ್ರಿ ಮಂಟಪ

2blrp1.
Published on

ಬೇಲೂರು: ವಿಶ್ವ ವಿಖ್ಯಾತ ಕಲಾ ತಾಣ, ಅಂತಾರಾಷ್ಟ್ರೀಯ ಪ್ರವಾಸಿ ತಾಣ ಮತ್ತು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿರುವ ಶ್ರೀ ಚನ್ನಕೇಶವಸ್ವಾಮಿ ದೇಗುಲದ ಪಕ್ಕದಲ್ಲಿರುವ ನವರಾತ್ರಿ ಮಂಟಪ(ಕಲ್ಲು ಚಾವಡಿ ಮಂಟಪ) ಶಿಥಿಲಾವಸ್ಥೆ ತಲುಪಿದೆ.ಪುರಾತತ್ವ ಇಲಾಖೆ ಅಧಿಕಾರಿಗಳ ನಿರ್ಲಕ್ಷೃ ಕಾರಣ ಮಂಟಪ ದಿನದಿಂದ ದಿನಕ್ಕೆ ಅವನತಿ ಹಾದಿಯತ್ತ ಸಾಗುತ್ತಿದೆ. ಇದನ್ನು ಮುಂದಿನ ಪೀಳಿಗೆಗೆ ಉಳಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.
ದೇಗುಲದ ಪಕ್ಕದಲ್ಲೇ ಇರುವ, ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ಇಲ್ಲಿನ ನವರಾತ್ರಿ ಮಂಟಪ 900 ವರ್ಷದ ಇತಿಹಾಸ ಹೊಂದಿದೆ. ಚನ್ನಕೇಶವಸ್ವಾಮಿ ದೇಗುಲ ನಿರ್ಮಾಣದ ಸಮಯದಲ್ಲೇ ಮಂಟಪವೂ ನಿರ್ಮಾಣವಾಗಿದೆ. ದಸರಾ ಸಂದರ್ಭ ನವರಾತ್ರಿ ಉತ್ಸವಗಳು ಹಾಗೂ ವೈಭವಯುತವಾಗಿ ದೇವರ ಉತ್ಸವ ಮೂರ್ತಿಗಳ ಪೂಜಾಕಾರ್ಯ ಈ ಮಂಟಪದಲ್ಲೇ ಶತಮಾನಗಳಿಂದ ನಡೆದಿದೆ. ನಿರ್ವಹಣೆ ಇಲ್ಲದ ಕಾರಣ ಈ ನವರಾತ್ರಿ ಮಂಟಪದ ಕೊಠಡಿಯ ಗೋಡೆಯೊಳಗೆ ಆಲ, ಅರಳಿ ಗಿಡದ ಬೇರುಗಳು ಸೇರಿಕೊಂಡು ಬಿರುಕು ಬಿಟ್ಟಿದೆ. ಮಂಟಪದ ಮೇಲೆ ಗಿಡಗಳು ಬೆಳೆದು ಚಾವಡಿಯ ಕಲ್ಲುಗಳೂ ಶಿಥಿಲವಾಗುತ್ತಿವೆ. ಕಲ್ಲು ಯಾವಾಗ ಬೀಳುತ್ತದೆಯೋ ಹೇಳಲು ಸಾಧ್ಯವಿಲ್ಲದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net