ಖಳನಾಯಕನ ಬಾಯಲ್ಲಿ ಕಾಮಿಡಿ.. ಕಾರಿನಲ್ಲಿ ಪೌಡರ್ ಇದೆ, ಹಾಕುತ್ತೀರಾ?

mansoor
Published on

ಚೆನ್ನೈ: ವೆಲ್ಲೂರು ಲೋಕಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಚಿತ್ರನಟ ಮನ್ಸೂರ್ ಅಲಿಖಾನ್ ಅವರ ಕಾರು ತಪಾಸಣೆಗೆ ತೆರಳಿದ್ದ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳಿಗೆ ವಿಚಿತ್ರ ಅನುಭವವಾಗಿದೆ.

ಗುಡಿಯಾತ್ತಂ ಬಳಿ ಕಾರಿನಲ್ಲಿ ತೆರಳುತ್ತಿದ್ದ ಅವರನ್ನು ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ತಡೆದರು. ಬಳಿಕ ತಮ್ಮ ಗುರುತಿನ ಚೀಟಿ ತೋರಿಸಿ ಕಾರನ್ನು ಪರಿಶೀಲಿಸಿದರು. ಕೊನೆಗೆ ಅಧಿಕಾರಿಗಳು ತಮ್ಮ ಪುಸ್ತಕದಲ್ಲಿ ಕಾರಿನ ನಂಬರ್ ಹಾಗೂ ಪ್ರಯಾಣಿಕರ ವಿವರ ಬರೆದುಕೊಂಡಿದ್ದಾರೆ.

ಆ ವೇಳೆ ಮನ್ಸೂರ್ ಅಲಿಖಾನ್ ಅವರು ಕಾರಿನಲ್ಲಿ ನಯಾಪೈಸೆಯೂ ಇರಲಿಲ್ಲ. ಆದರೆ ಮುಖಕ್ಕೆ ಹಾಕಿಕೊಳ್ಳುವ ಪೌಡರ್ ಬಾಕ್ಸ್ ಗಳಿದ್ದವು, ಆ ಪೌಡರ್ ಹಾಕುತ್ತೀರಾ? ಎಂದು ಮಹಿಳಾ ಅಧಿಕಾರಿಗೆ ಮನ್ಸೂರ್​ ಕೇಳಿದ್ದಾರೆ.

ಮನ್ಸೂರ್ ಪೌಡರ್ ಹಾಕುತ್ತೀರಾ ಎಂದು ಕೇಳಿದ ತಕ್ಷಣ ಫ್ಲೈಯಿಂಗ್ ಸ್ಕ್ವಾಡ್ ನ ಮಹಿಳಾ ಅಧಿಕಾರಿ ನಕ್ಕರು. ಬಳಿಕ ತಮ್ಮ ಕರ್ತವ್ಯ ಮುಗಿಯಿತು. ನೀವಿನ್ನು ಹೊರಡಬಹುದು ಎಂದು ಮನ್ಸೂರ್​ಗೆ ತಿಳಿಸಿ ಅಲ್ಲಿಂದ ಅಧಿಕಾರಿಗಳು ಸಹ ನಗುತ್ತಲೇ ತೆರಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net