More

    ಕ್ರಿಕೆಟರ್ ಮನೋಜ್ ತಿವಾರಿ ಪತ್ನಿ ಗರಂ ಆಗಿದ್ದು ಯಾಕೆ!

    ಬೆಂಗಳೂರು: ಲಾಕ್‌ಡೌನ್ ವೇಳೆ ಹಲವಾರು ಮಾಜಿ-ಹಾಲಿ ಕ್ರಿಕೆಟಿಗರು ತಮ್ಮದೇ ಕನಸಿನ ತಂಡಗಳನ್ನು ರಚಿಸುತ್ತಿದ್ದಾರೆ. ಕ್ರಿಕೆಟ್ ಪ್ರೇಮಿಗಳೂ ಇದರಿಂದ ಹೊರತಾಗಿಲ್ಲ. ಇದೇ ರೀತಿ ಅಭಿಮಾನಿಯೊಬ್ಬರು, ಅದೃಷ್ಟದ ಕೊರತೆಯಿಂದಾಗಿ ಐಪಿಎಲ್‌ನಲ್ಲಿ ಮಿಂಚಲು ವಿಲರಾಗಿರುವ ಕ್ರಿಕೆಟಿಗರ ‘ಫ್ಲಾಪ್​ ಇಲೆವೆನ್’ ರಚಿಸಿದ್ದಾರೆ. ಬಂಗಾಳದ ಬ್ಯಾಟ್ಸ್‌ಮನ್ ಮನೋಜ್ ತಿವಾರಿ ಹೆಸರನ್ನೂ ಅದರಲ್ಲಿ ಸೇರಿಸಲಾಗಿದೆ. ಇದಕ್ಕೆ ಕೆರಳಿರುವ ಮನೋಜ್ ತಿವಾರಿ ಪತ್ನಿ ಸುಷ್ಮಿತಾ ರಾಯ್, ‘ನಿನಗೆಷ್ಟು ಧೈರ್ಯ?’ ಎಂದು ಗರಂ ಆಗಿದ್ದಾರೆ.

    ಕ್ರಿಕೆಟರ್ ಮನೋಜ್ ತಿವಾರಿ ಪತ್ನಿ ಗರಂ ಆಗಿದ್ದು ಯಾಕೆ!

    ಕ್ರಿಕೆಟ್ ಅಭಿಮಾನಿಯೊಬ್ಬನ ‘ಫ್ಯಾನ್​ ಪೇಜ್’ನ ಸ್ಕ್ರೀನ್‌ಶಾಟ್‌ಅನ್ನು ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿರುವ ಸುಷ್ಮಿತಾ ರಾಯ್, ‘ಈ ಪ್ರೊಫೈಲ್​ ರಚಿಸಿರುವವನಿಗೆ ಎಷ್ಟು ಧೈರ್ಯ? ನನ್ನ ಪತಿಯ ಹೆಸರನ್ನು ಇದರಲ್ಲಿ ಸೇರಿಸಲಾಗಿದೆ. ನೀನು ಅಂಕಿ-ಅಂಶಗಳನ್ನು ಪರಿಶೀಲಿಸುವುದು ಉತ್ತಮ. ನಿನ್ನ ಕೆಟ್ಟ ಬದುಕಿನಲ್ಲಿ ಜನರ ಬಗ್ಗೆ ಈ ರೀತಿಯ ಪೋಸ್ಟ್‌ಗಳನ್ನು ಹಾಕುವ ಬದಲಾಗಿ ಆ ಕೆಲಸವನ್ನಾದರೂ ಮಾಡು. ಬದುಕಿಕೋ ಹೋಗು’ ಎಂದು ಬರೆದಿದ್ದಾರೆ.

    ಇದನ್ನೂ ಓದಿ: ಮೊಹಮದ್ ಶಮಿ ಕಾರ್ಯಕ್ಕೆ ಬಿಸಿಸಿಐ ಮೆಚ್ಚುಗೆ

    ದೇಶೀಯ ಕ್ರಿಕೆಟ್‌ನಲ್ಲಿ ಮಿಂಚಿದ್ದರೂ 34 ವರ್ಷದ ಮನೋಜ್ ತಿವಾರಿ ಭಾರತ ಪರ ಇದುವರೆಗೆ 12 ಏಕದಿನ ಮತ್ತು 3 ಟಿ20 ಪಂದ್ಯಗಳನ್ನಷ್ಟೇ ಆಡಿದ್ದಾರೆ. ಐಪಿಎಲ್‌ನಲ್ಲೂ ವಿವಿಧ ತಂಡಗಳ ಪರ ಆಡಿದ್ದರೂ, ಕಳೆದ ಹರಾಜಿನಲ್ಲಿ ಯಾವುದೇ ತಂಡಕ್ಕೆ ಬಿಕರಿಯಾಗಿರಲಿಲ್ಲ. 2018ರಿಂದ ಅವರು ಐಪಿಎಲ್‌ನಲ್ಲಿ ಯಾವುದೇ ತಂಡದ ಪರ ಆಡಿಲ್ಲ. ಆದರೆ ಈ ವರ್ಷ ರಣಜಿ ಟ್ರೋಫಿಯಲ್ಲಿ ಚೊಚ್ಚಲ ತ್ರಿಶತಕವನ್ನೂ ಸಿಡಿಸಿ ಮಿಂಚಿದ್ದ ಮನೋಜ್ ತಿವಾರಿ, ಬಂಗಾಳ ತಂಡ ಫೈನಲ್ ಪ್ರವೇಶಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.

    ಯುವರಾಜ್ ಕ್ಷಮೆ ಕೇಳಬೇಕು, ಅಭಿಮಾನಿಗಳಿಂದ ಅಭಿಯಾನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts