

ನವದೆಹಲಿ: ಭಾರತದಲ್ಲಿ ಕೊಲಂಬಿಯಾ ಏಷ್ಯಾ ಹಾಸ್ಪಿಟಲ್ಸ್ ಅನ್ನು ಮಣಿಪಾಲ್ ಹಾಸ್ಪಿಟಲ್ಸ್ ಸ್ವಾಧೀನ ಪಡಿಸಿಕೊಳ್ಳಲಿದ್ದು, ಈ ಸಂಬಂಧ ಖಚಿತ ಒಪ್ಪಂದ ಏರ್ಪಟ್ಟಿದೆ. ಇದು 2,000 ಕೋಟಿ ರೂಪಾಯಿಗೂ ಅಧಿಕ ಮೊತ್ತದ ವಹಿವಾಟು ಎಂದು ಮೂಲಗಳು ತಿಳಿಸಿವೆ.
ಮಣಿಪಾಲ್ ಹಾಸ್ಪಿಟಲ್ಸ್ ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿದ್ದು, ಕೊಲಂಬಿಯಾ ಏಷ್ಯಾ ಹಾಸ್ಪಿಟಲ್ಸ್ ಪ್ರೈವೇಟ್ ಲಿಮಿಟೆಡ್ (ಕೊಲಂಬಿಯಾ ಏಷ್ಯಾ)ನ ಶೇಕಡ 100 ಪಾಲನ್ನು ಖರೀದಿಸಲು ಕಂಪನಿ ಮುಂದಾಗಿದೆ. ಈಗಾಗಲೇ ರೆಗುಲೇಟರಿ ಅಪ್ರೂವಲ್ಗಳನ್ನು ಪಡೆದುಕೊಂಡಿದೆ. ಉಳಿದ ಪ್ರಕ್ರಿಯೆಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದೆ.
ಇದನ್ನೂ ಓದಿ: ರಕ್ಷಣಾ ಪಡೆ ಗುಂಡಿಗೆ ಹಿಜ್ಬುಲ್ ಕಮಾಂಡರ್ ಬಲಿ
ಮಣಿಪಾಲ್ ಫ್ಯಾಮಿಲಿಗೆ ಕೊಲಂಬಿಯಾ ಏಷ್ಯಾ ಸೇರ್ಪಡೆಯಾಗುತ್ತಿದ್ದು, ಅದನ್ನು ಸ್ವಾಗತಿಸುತ್ತೇವೆ. ವರ್ಷಗಳಿಂದ ಉತ್ತಮ ಆರೋಗ್ಯ ಸೇವೆಗೆ ಹೆಸರುವಾಸಿಯಾಗಿರುವ ಆಸ್ಪತ್ರೆಯ ಸಾಧನೆಯನ್ನೂ ನಾವು ಪರಿಗಣಿಸುತ್ತೇವೆ, ಪ್ರಶಂಸಿಸುತ್ತೇವೆ ಎಂದು ಮಣಿಪಾಲ್ ಎಜುಕೇಶನ್ ಆ್ಯಂಡ್ ಮೆಡಿಕಲ್ ಗ್ರೂಪ್ ಚೇರ್ಮನ್ ರಂಜನ್ ಪೈ ಹೇಳಿದ್ದಾರೆ.
ಕೊಲಂಬಿಯಾ ಏಷ್ಯಾ ಹಾಸ್ಪಿಟಲ್ಸ್ 2005ರಲ್ಲಿ ಭಾರತದಲ್ಲಿ ಬೆಂಗಳೂರಿನ ಹೆಬ್ಬಾಳದಲ್ಲಿ ಕಾರ್ಯಾಚರಣೆ ಆರಂಭಿಸಿದ್ದು, ಪ್ರಸ್ತುತ ದೇಶಾದ್ಯಂತ 11 ಆಸ್ಪತ್ರೆಗಳ ಸರಣಿಯನ್ನು ಹೊಂದಿದೆ. (ಏಜೆನ್ಸೀಸ್)