
ವಿಟ್ಲ: ಮಾಣಿಲ ಶ್ರೀ ದುರ್ಗಾ ಮಹಾಲಕ್ಷ್ಮೀ ಕ್ಷೇತ್ರದದಲ್ಲಿ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮಾರ್ಗದರ್ಶನದಲ್ಲಿ ಜೂನ್ ೨೨ರಿಂದ ಆಗಸ್ಟ್ ೮ರವರೆಗೆ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆ ನಡೆಯಲಿದೆ. ಆ.೮ರಂದು ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆ ನಡೆಯಲಿದೆ. ೨೨ರಂದು ಬೆಳಗ್ಗೆ ೯ಕ್ಕೆ ಕನಕಧಾರಾ ಯಾಗ ಪ್ರಾರಂಭವಾಗಲಿದೆ. ಜೂನ್ ೨೨ರಿಂದ ಆ.೮ರವರೆಗೆ ಬೆಳಗ್ಗೆ ೬ರಿಂದ ಗಣಪತಿ ಹೋಮ, ೭ರಿಂದ ಪಂಚಾಮೃತ ಅಭಿಷೇಕ, ಕಲ್ಪೋಕ್ತ ಲಕ್ಷ್ಮೀ ಪೂಜೆ, ವಾಯನದಾನ, ಶ್ರೀ ಗುರುಪೂಜೆ, ಬಾಲಭೋಜನ, ನಾಗದೇವರಿಗೆ ಕ್ಷೀರಾಭಿಷೇಕ, ಗೋಮಾತಾ ಪೂಜೆ, ೧೧.೩೦ಕ್ಕೆ ಸಾಮೂಹಿಕ ಕುಂಕುಮಾರ್ಚನೆ, ೧೨ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ ೬.೩೦ಕ್ಕೆ ಶ್ರೀ ಲಕ್ಷ್ಮೀ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಬೆಳಗ್ಗಿನಿಂದ ಸಂಜೆವರೆಗೆ ಶ್ರೀ ವಿಠೋಭ ರುಕ್ಮಯಿ ಧ್ಯಾನ ಮಂದಿರದಲ್ಲಿ ಭಜನಾ ಸಂಕೀರ್ತನೆ, ಪ್ರತಿ ಶುಕ್ರವಾರ ಶ್ರೀ ದುರ್ಗಾನಮಸ್ಕಾರ ಪೂಜೆ ನೆರವೇರಲಿದೆ.
ಆ.೭ರಂದು ಬೆಳಗ್ಗೆ ೮ಕ್ಕೆ ಬಾಲಭೋಜನ ಸಮಾಪ್ತಿ, ಸಂಜೆ ಶ್ರೀದತ್ತ ಯಾಗ, ಪಾದುಕಾ ಪೂಜೆ, ಆ.೮ರಂದು ಬೆಳಗ್ಗೆ ದ್ವಾದಶಾ ನಾಳಿಕೇರ ಗಣಪತಿ ಹೋಮ, ಚಂಡಿಕಾ ಹೋಮ, ಕನಕಧಾರಾ ಯಾಗ, ಲಕ್ಷ್ಮೀ ನಾರಾಯಣ ಹೃದಯ ಹೋಮ, ಬೆಳಗ್ಗೆ ೧೧, ಮಧ್ಯಾಹ್ನ೩ಕ್ಕೆ ಸಾಮೂಹಿಕ ಕುಂಕುಮಾರ್ಚನೆ, ಶ್ರೀ ವರಮಹಾಲಕ್ಷ್ಮೀ ಪೂಜೆ, ೧೧.೩೦ಕ್ಕೆ ವಸೋರ್ದ್ಧಾರೆ, ಯಾಗದ ಪೂರ್ಣಾಹುತಿ, ೧೨.೩೦ಕ್ಕೆ ಮಹಾಮಂಗಳಾರತಿ, ಪ್ರಸಾದ ವಿತರಣೆ, ಸಂಜೆ ೫.೩೦ಕ್ಕೆ ಶ್ರೀದುರ್ಗಾ ಪೂಜೆ, ಸಪ್ತಶತಿ ಪಾರಾಯಣ, ಅಷ್ಟಾವಧಾನ ಸೇವೆ, ರಾತ್ರಿ ೮ಕ್ಕೆ ಮಹಾಮಂಗಳಾರತಿ, ಪ್ರಸಾದ ವಿತರಣೆ, ೮.೩೦ರಿಂದ ಯಕ್ಷಗಾನ ಬಯಲಾಟ, ಆ.೯ಕ್ಕೆ ಬೆಳಗ್ಗೆ ದೇವರಿಗೆ ಸೀಯಾಳ ಅಭಿಷೇಕ, ನಾಗದರ್ಶನ ನಡೆಯಲಿದೆ.