ಊರಿನ ತಳಿಗಳ ರಕ್ಷಣೆ ಅವಶ್ಯ : ಕೃಷಿ ಅಧಿಕಾರಿ ಚಂಚಲಾ ಕಿವಿಮಾತು

New Project (9)
Published on

ಮಂಜೇಶ್ವರ: ಮಾವಿನ ಹಣ್ಣು ಅನೇಕ ಪೋಷಕಾಂಶಗಳಿಂದ ಕೂಡಿದ್ದು, ನಮ್ಮ ಆರೋಗ್ಯವನ್ನು ಕಾಪಾಡುವುದರಲ್ಲೂ ಅದು ಸಹಕಾರಿ. ಕೇವಲ ಹೈಬ್ರಿಡ್ ತಳಿಗಳಿಗೆ ಮಾರುಹೋಗದೆ ನಮ್ಮ ಊರಿನ ಹಣ್ಣಿನ ತಳಿಗಳನ್ನೂ ಕೂಡಾ ಉಳಿಸಿ ಬೆಳೆಸುವ ಕೆಲಸವನ್ನು ನಾವು ಮಾಡಬೇಕು ಎಂದು ಮೀಂಜ ಕಷಿ ಭವನದ ಕಷಿ ಅಧಿಕಾರಿ ಚಂಚಲಾ ಎ ಅಭಿಪ್ರಾಯಪಟ್ಟರು.

ಮೀಯಪದವು ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಹಮ್ಮಿಕೊಂಡ ಮಾವಿನ ಹಬ್ಬ ಉದ್ಘಾಟಿಸಿ ಮಾತನಾಡಿದರು.

ಸಂಚಾಲಕ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕಿ ಮೃದುಲಾ ಕೆ.ಎಂ., ಪಿಟಿಎ ಅಧ್ಯಕ್ಷ ಇಬ್ರಾಹಿಂ ಹೊನ್ನಕಟ್ಟೆ, ಎಂಪಿಟಿಎ ಅಧ್ಯಕ್ಷೆ ನಫೀಸತುಲ್ ಮಿಸ್ರಿಯ, ಸ್ಕೂಲ್ ಪ್ರೊಟೆಕ್ಷನ್ ತಂಡದ ಸಂಚಾಲಕ ಚಂದ್ರಶೇಖರ ಮೀಯಪದವು, ಅಧ್ಯಾಪಕರಾದ ರವಿಲೋಚನಾ ಸಿ.ಎಚ್., ಕಿರಣ್ ಕೆ.ಎಸ್. ಶುಭಾಶಂಸನೆಗೈದರು. ಪ್ರಾಂಶುಪಾಲ ರಮೇಶ್ ಕೆ.ಎನ್. ಸ್ವಾಗತಿಸಿದರು. ರಾಷ್ಟ್ರೀಯ ಸೇವಾ ಯೋಜನೆ ಸಂಚಾಲಕ ರಾಜೇಂದ್ರನ್ ಕೆ.ಪಿ.ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net