- ವಿಜಯವಾಣಿ ಸುದ್ದಿಜಾಲ ಮಂಗಳೂರು
- ದೇಶ, ಜಾತಿಯ ಗಡಿಯನ್ನು ದಾಟಿ ಪ್ರೀತಿ ಗೆದ್ದಿದೆ. ಪರಸ್ಪರ ಪ್ರೀತಿಸಿದ ಕುಡ್ಲದ ಯುವಕ, ಬ್ರೆಜಿಲ್ ಯುವತಿ ತಮ್ಮ ತಂದೆ- ತಾಯಿ ಹಾಗೂ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಭಾನುವಾರ ಮಂಗಳೂರಿನಲ್ಲಿ ಭಾರತೀಯ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.
- ಬ್ರೆಝಿಲ್ ದೇಶದ ತಾಟಿಯಾನೆ ಹಾಗೂ ತುಳುನಾಡಿನ ಆದಿತ್ಯ ಅವರ ವಿವಾಹ ಕರಾವಳಿಯ ಜಿಎಸ್‌ಬಿ ಸಂಪ್ರದಾಯದಂತೆ ಡಾ.ಟಿ.ವಿ.ರಮಣ ಪೈ ಸಭಾಂಗಣದಲ್ಲಿ ವಿವಾಹ ನೆರವೇರಿತು.
- ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಬೆಳೆದ ಯುವತಿ ಕೈಗೆ ಮೆಹಂದಿ ಹಚ್ಚಿ, ಹಣೆಗೆ ಬಿಂದಿ ಧರಿಸಿ, ತಲೆ ತುಂಬಾ ಹೂವು ಮುಡಿದು ಸಂಭ್ರಮಿಸಿದರು. ಅಪ್ಪಟ ಭಾರತೀಯ ನಾರಿಯ ಅಲಂಕಾರದಲ್ಲಿ ಮದುಮಗಳನ್ನು ಕಂಡು ಕುಟುಂಬ ಸದಸ್ಯರು ಹರ್ಷಚಿತ್ತರಾದರು. ವಧುವಿನ ತಂದೆ ಅಟೀಲಿಯೊ, ತಾಯಿ ಲೂಸಿಯಾ, ಸಹೋದರಿಯರಾದ ಥಯಿಸ್, ಥಲಿತ ಹಾಗೂ ವರನ ಪೋಷಕರಾದ ರಮಾನಂದ್ ಹಾಗೂ ಪ್ರೀತಂ ಪೈ ಭಾಗವಹಿಸಿ ನೂತನ ದಂಪತಿಗೆೆ ಹಾರೈಸಿದರು.
- ಜಿಎಸ್‌ಬಿ ಸ್ಪೆಷಲ್, ಹಾಂಗ್ಯೊ ಐಸ್‌ಕ್ರೀಂ
- ಜಿಎಸ್‌ಬಿ ಶೈಲಿಯ ದಾಲ್ ತೋವೆ, ಪನೀರ್ ಮಸಾಲ, ಸಾಸಂ, ಅಲಸಂಡೆ ಪಲ್ಯ, ಗುಜ್ಜೆ ಪಲ್ಯ, ಗೀ ರೈಸ್ ಒಳಗೊಂಡಿರುವ ಭಕ್ಷೃಗಳು, ಹಾಂಗ್ಯೊ ಐಸ್‌ಕ್ರೀಂನ ವೈವಿಧ್ಯಮಯ ಫ್ಲೇವರ್ ಗಳನ್ನು ಸವಿದ ಬ್ರೆಜಿಲ್‌ನ ಬೀಗರು, ವಧುವಿನ ತಂದೆ ಅಟೀಲಿಯೊ ಕೂಡ ‘ವೆರಿ ನೈಸ್’ ಎಂದು ಪ್ರಶಂಶಿಸಿದರು.
- ಹಾಂಗ್ಯೊ ಲೈವ್ ಸಂಡೆ ಕೌಂಟರ್‌ನಲ್ಲಿ ಆಲ್ಫೋನ್ಸೋ ಮಾವು, ಬಿಸ್ಕತ್ತು ಕ್ರೀಂ ಮತ್ತು ರೋಸ್ಟ್ ಮಾಡಿದ ಗೇರು ಬೀಜದ ಸಂಯೋಜನೆ ಹೊಂದಿರುವ ಹೊಸ ಫ್ಲೇವರ್ ಅತಿಥಿಗಳಿಗೆ ಒದಗಿಸಲಾಗಿತ್ತು.
- ಎಂಟು ವರ್ಷಗಳ ಹಿಂದೆ ಐಟಿ ಉದ್ಯೋಗಕ್ಕಾಗಿ ಬ್ರೆಝಿಲ್‌ಗೆ ತೆರಳಿದ್ದ ಮಂಗಳೂರು ಕರಂಗಲ್ಪಾಡಿ ನಿವಾಸಿ ಆದಿತ್ಯ ಅವರಿಗೆ 2019 ರಲ್ಲಿ ತಾಟಿಯಾನೆ ಪರಿಚಯವಾಗಿತ್ತು. ಸಾಮಾನ್ಯ ಸ್ನೇಹ ಪ್ರೀತಿಗೆ ತಿರುಗಿ ಬಿಟ್ಟಿರಲಾಗದ ಬಾಂಧವ್ಯ ಬೆಳೆಯುತ್ತದೆ. 2023 ರಲ್ಲಿ ಮನೆಯವರಲ್ಲಿ ತಿಳಿಸಿ ಒಪ್ಪಿಗೆಯನ್ನು ಪಡೆದಿದ್ದರು.
ನಾನು ಅನೇಕ ದೇಶಗಳಲ್ಲಿ ಐಸ್ ಕ್ರೀಮ್ ಸವಿದಿದ್ದೇನೆ. ಎಲ್ಲೆಡೆ ಉತ್ತಮ ಆಯ್ಕೆಗಳಿದ್ದರೂ ಮಂಗಳೂರಿನ ಹ್ಯಾಂಗ್ಯೊ ನಿಜವಾಗಿಯೂ ನನಗೆ ಹೆಚ್ಚು ಪ್ರಿಯವಾಗಿದೆ. ಮದುವೆಯಲ್ಲಿ ನಮ್ಮ ಮನೆಮಂದಿ, ಇತರ ಅತಿಥಿಗಳು ಜತೆಗೆ ಬ್ರೆಝಿಲ್‌ನ ಹೆಂಡತಿಯ ಮನೆ ಸದಸ್ಯರು ಕೂಡ ಹಾಂಗ್ಯೊ ಐಸ್‌ಕ್ರೀಂ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಹಾಂಗ್ಯೊ ವಿಶಿಷ್ಟವಾದ ಉತ್ಪನ್ನ, ಸ್ನೇಹಪರ ಸಿಬ್ಬಂದಿ ಮದುವೆಯ ಸಂಭ್ರಮವನ್ನು ಹೆಚ್ಚಿಸಿತು. ಮಂಗಳೂರಿನ ಐಸ್‌ಕ್ರೀಂ ಅತ್ಯುತ್ತಮವೆಂದು ಎಲ್ಲರೂ ಒಪ್ಪಿಕೊಂಡರು.
ಆದಿತ್ಯ ಪೈ , ಮದುವೆ ವರ.