ವಿಪ್ರ ವೇದಿಕೆ ವರ್ಕಾಡಿ ರವಿ ಅಲೆವೂರಾಯ ಅಧ್ಯಕ್ಷ

mng--8 April Ravi alevooraya
Published on

ಮಂಗಳೂರು: ದಶಮಾನೋತ್ಸವ ಸಂಭ್ರಮದಲ್ಲಿರುವ ವಿಪ್ರ ವೇದಿಕೆಯ ನೂತನ ಅಧ್ಯಕ್ಷರಾಗಿ ವರ್ಕಾಡಿ ರವಿ ಅಲೆವೂರಾಯ ಆಯ್ಕೆಯಾಗಿದ್ದಾರೆ.

ಸಂಸ್ಥಾಪಕರಲ್ಲೋರ್ವರಾದ ವಿಶುಕುಮಾರ್ ಜೋಯಿಸರ ಮನೆ ಆವರಣದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ಜರುಗಿತು. ಉಪಾಧ್ಯಕ್ಷ ವಿಶ್ವೇಶ್ವರ ತೆಕ್ಕೆಕೆರೆ, ಕಾರ್ಯದರ್ಶಿ ದುರ್ಗಾದಾಸ್ ಕಟೀಲು, ಖಚಾಂಚಿ ಕಿಶೋರ ಕೃಷ್ಣ ಆಯ್ಕೆಯಾದರು.

ಬ್ರಹ್ಮ ತೇಜಸ್ಸನ್ನು ಕಾಯ್ದುಕೊಂಡು ಬ್ರಾಹ್ಮಣವನ್ನ ಜಗತ್ತಿಗೇ ಆದರ್ಶವಾಗಿ ನೀಡಿ, ನಡೆಸಿಕೊಂಡು ಹೋಗುವುದಕ್ಕೆ ನಾವು ಶ್ರಮಿಸಬೇಕಾಗಿದೆ. ವಿಪ್ರ ವೇದಿಕೆ ಕೂಡಾ ದಶವರ್ಷಗಳ ಕಾಲ ಸಮಾಜಮುಖೀ ಕಾರ್ಯಗಳಿಂದ ಗುರುತಿಸಿಕೊಂಡಿದೆ ಎಂದು ನಿರ್ಗಮನಾಧ್ಯಕ್ಷ ಶ್ರೀಧರ ಹೊಳ್ಳರು ಹೇಳಿದರು.

ಟ್ರಸ್ಟಿಗಳಾದ ಜಯರಾಮ ಪದಕಣ್ಣಾಯ, ವಿಶುಕುಮಾರ್ ಜೋಯಿಸರು, ಕೆ.ಗಿರೀಶ್ ರಾವ್, ಅನೂಪ್ ರಾವ್, ಬಾಗ್ಲೋಡಿ, ಪ್ರಭಾವತಿ ಮಡಿ, ವಿದ್ಯಾ ಗಣೇಶ್ ಹಾಗೂ ಸದಸ್ಯರುಗಳು ಮತ್ತು ವಿಪ್ರಬಾಂಧವರು ಉಪಸ್ಥಿತರಿದ್ದರು.

ಕಾರ್ಯದರ್ಶಿ ದುರ್ಗಾದಾಸ್ ನಿರ್ವಹಿಸಿದರೆ, ಖಚಾಂಚಿ ಕಿಶೋರ್ ಕೃಷ್ಣ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net