ಕುಂಜತ್ತಬೈಲ್‌ನ ಅಕ್ಕನ ಮನೆಯಲ್ಲಿ ವಿಜಯಪುರದ ಯುವಕ ಆತ್ಮಹತ್ಯೆ

sucide
Published on

ಮಂಗಳೂರು: ನಗರದ ಕುಂಜತ್ತಬೈಲ್ ಮರಕಡದಲ್ಲಿ ವ್ಯಕ್ತಿಯೊಬ್ಬ ಆತ್ಮಹತ್ಯೆಗೈದಿದ್ದು, ಅವರು ಬರೆದಿಟ್ಟ ಡೆತ್‌ನೋಟು ಆಧಾರದಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಪ್ರದೀಪ್ ಕುಮಾರ್ ಹೊಟ್ಟಿ ತನ್ನ ಅಕ್ಕನ ಮನೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರದೀಪ್ ಅವರ ಮರಣೋತ್ತರ ಪರೀಕ್ಷೆ ಬಳಿಕ ಅವರ ಊರಾದ ಬಾದಾಮಿ ತಾಲೂಕಿನ ಮುತ್ತಲಗೇರಿ ಗ್ರಾಮಕ್ಕೆ ಶವ ಕೊಂಡೊಯ್ದು ಅಂತ್ಯ ಸಂಸ್ಕಾರ ನಡೆಸಲಾಗಿದೆ. ಇದಾದ ಬಳಿಕ ಮನೆಯನ್ನು ಸ್ವಚ್ಛಗೊಳಿಸುವಾಗ ಡೆತ್‌ನೋಟು ಸಿಕ್ಕಿದ್ದು, ಅದರಲ್ಲಿ ಪ್ರದೀಪ್ ಅವರು ತನ್ನ ಮರಣಕ್ಕೆ ಸಂಗುಚುಲಿ ಮತ್ತು ರಂಗನಾಥ ಎಂದು ಬರೆದಿದ್ದಾರೆ.

ಈ ಬಗ್ಗೆ ಪ್ರದೀಪ್ ಅವರ ಅಣ್ಣ ಮಂಜುನಾಥ ಹೊಟ್ಟಿ ನೀಡಿದ ದೂರಿನ ಆಧಾರದಲ್ಲಿ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net