ವಾತ್ಸಲ್ಯ ಛಾಯಾ ಟ್ರಸ್ಟ್‌ಗೆ ಪೂರ್ಣ ಸಹಕಾರ - ಸಂಸದ ಕ್ಯಾ.ಬ್ರಿಜೇಶ್ ಚೌಟ ಭರವಸೆ

mng--21 Nov vathsalya chaya trust
Published on

ಮಂಗಳೂರು: ಹಿರಿಯ ನಾಗರಿಕರ ಯೋಗಕ್ಷೇಮ ನೋಡಿಕೊಳ್ಳುವುದು, ಅವರಿಗೆ ಸಾಧನ ಸಲಕರಣೆಗಳ ವಿತರಣೆ ಉತ್ತಮ ಸೇವಾ ಕಾರ್ಯವಾಗಿದೆ. ವಾತ್ಸಲ್ಯ ಛಾಯಾ ಟ್ರಸ್ಟ್‌ಗೆ ಕೇಂದ್ರ ಸರ್ಕಾರದಿಂದ ಪೂರ್ಣ ಸಹಕಾರ ನೀಡಲಾಗುವುದು ಎಂದು ದ.ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.

ಗುರುವಾರ ನಗರದ ಬಳ್ಳಾಲ್ ಭಾಗ್‌ನಲ್ಲಿ ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರ ವಾತ್ಸಲ್ಯ ಛಾಯಾ ಟ್ರಸ್ಟ್ ಉದ್ಘಾಟಿಸಿ, ಅವರು ಮಾತನಾಡಿದರು. ವಾತ್ಸಲ್ಯ ಛಾಯಾ ಟ್ರಸ್ಟ್‌ನಲ್ಲಿ 70 ವರ್ಷ ಮೇಲ್ಪಟ್ಟವರಿಗೆ ಆಯುಷ್ಮಾನ್ ಯೋಜನೆ ನೋಂದಣಿ ಮಾಡಲಾಗುವುದು ಎಂದರು.

ಶಾಸಕರಾದ ಡಿ.ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ಮೇಯರ್ ಮನೋಜ್ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮಾಜಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಹಿರಿಯ ನಾಗರಿಕರ ಸಂಘದ ಉಪಾಧ್ಯಕ್ಷೆ ತೆರೆಸಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರೂಪಣಾಧಿಕಾರಿ ಕುಮಾರ್, ಸೇವಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅರ್ಜುನ್ ಭಂಡಾರ್ಕರ್, ಬಿಜೆಪಿ ಯುವಮೋರ್ಚಾ ಅಧ್ಯಕ್ಷ ನಂದನ್ ಮಲ್ಯ, ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಮಂಗಳೂರು ಅಧ್ಯಕ್ಷ ಅರವಿಂದ ರಾವ್, ವಾತ್ಸಲ್ಯ ಛಾಯಾ ಟ್ರಸ್ಟ್ ಅಧ್ಯಕ್ಷ ಸೂರಜ್ ಸಾಗರ್ ಕುಂಪಲ, ಸಮಾಜ ಸೇವಕ ಅವಿನಾಶ್ ಬೋಳಾರ, ಡಾ.ರಘುವೀರ್, ಟ್ರಸ್ಟ್ ಸದಸ್ಯರಾದ ಚೇತನ್ ಶೆಟ್ಟಿ ಕುಂಪಲ, ಜೀವನ್ ಕೊಲ್ಯ, ಪ್ರತಾಪ್ ಚಿಲಿಂಬಿ, ಚೇತನ್ ಪನೋಲಿಬೈಲ್ ಉಪಸ್ಥಿತರಿದ್ದರು. ಪ್ರವೀಣ್ ಎಸ್.ಕುಂಪಲ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭ ಸಾಯಿ ಪರಿವಾರ ಟ್ರಸ್ಟ್ ತೊಕ್ಕೊಟ್ಟು, ವಕೀಲ ಶರಣ್ ಶೆಟ್ಟಿ ಮೊದಲಾದವರು ನೀಡಿದ 16 ವೀಲ್ ಚೇರ್, 15 ವಾಕಿಂಗ್ ಸ್ಟಿಕ್ ಸಾಧನ, ಸಲಕರಣೆಗಳನ್ನು ಹಿರಿಯ ನಾಗರಿಕರಿಗೆ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net